Fuel Price in India: ಪೆಟ್ರೋಲ್​​-ಡೀಸೆಲ್​​ ಬೆಲೆ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ವಿವರ

ಪೆಟ್ರೋಲ್​ಗೆ ಹೋಲಿಸಿದರೆ ಡೀಸೆಲ್​ಗೆ ವಿಧಿಸುವ ಅಬಕಾರಿ ಸುಂಕ ಮತ್ತು ವ್ಯಾಟ್ ತೆರಿಗೆ ಮೊತ್ತ ಕಡಿಮೆಯೇ ಇದೆ. ಹೀಗಾಗಿ, ಮೂಲ ಬೆಲೆಯಲ್ಲಿ ಡೀಸೆಲ್ ದರವು ಪೆಟ್ರೋಲ್​ಗಿಂತ ಹೆಚ್ಚೇ ಇದ್ದರೂ ಕಡಿಮೆ ತೆರಿಗೆಯ ಕಾರಣದಿಂದ ರೀಟೇಲ್ ಮಾರಾಟದಲ್ಲಿ ಬೆಲೆ ಕಡಿಮೆ ಇರುತ್ತದೆ.

news18
Updated:August 21, 2019, 9:51 AM IST
Fuel Price in India: ಪೆಟ್ರೋಲ್​​-ಡೀಸೆಲ್​​ ಬೆಲೆ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ವಿವರ
ಪೆಟ್ರೋಲ್​- ಸಾಂದರ್ಭಿಕ ಚಿತ್ರ
news18
Updated: August 21, 2019, 9:51 AM IST
ಬೆಂಗಳೂರು(ಆಗಸ್ಟ್​​​.21): ದೇಶದಲ್ಲಿ ಪೆಟ್ರೋಲ್​-ಡೀಸೆಲ್​​​​ ಬೆಲೆ ಮತ್ತೆ ಏರಿಕೆಯಾಗಿದೆ. ಇಂದು ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಕರ್ನಾಟಕದ ರಾಜ್ಯಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹ 74.26 ಇದ್ದು, ಡೀಸೆಲ್‌ ದರ 67.37 ರೂ ಆಗಿದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 71.84 ರೂ. ಮತ್ತು ಡೀಸೆಲ್‌ ದರ 65.18 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್‌ ದರ 74.62 ರೂ. ಮತ್ತು ಡೀಸೆಲ್‌ ದರ 68.86 ರೂ. ಆಗಿದೆ.

ಇನ್ನೂ ಸಿಎಂ ಮಮತಾ ಬ್ಯಾನರ್ಜಿಯವರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್‌ ದರ 74.54 ರೂ. ಮತ್ತು ಡೀಸೆಲ್‌ ದರ 67.56 ರೂಗಳಿಗೆ ಏರಿಕೆಡಯಾಗಿದೆ. ಜತೆಗೆ ಮುಂಬೈನಲ್ಲೂ ಪೆಟ್ರೋಲ್‌ ದರ 77.50 ರೂ. ಮತ್ತು ಡೀಸೆಲ್‌ ದರ 68.33 ರೂ. ಇದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ರೂ. 3994.00 ಕ್ಕೆ ತಲುಪಿದೆ.

ತೈಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಕಚ್ಛಾ ತೈಲ ಮಾರಾಟ ದರ ಸಮಾನವಾಗಿರುವುದಿಲ್ಲ. ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ಕಡಿಮೆ ದರಕ್ಕೆ ತೈಲ ಸಿಗುತ್ತದೆ. ಆದರೆ, ಭಾರತ ತೆರಬೇಕಾದ ಬೆಲೆ ತುಸು ಹೆಚ್ಚು. ಇದರ ಜೊತೆಗೆ ಈ ವಹಿವಾಟು ನಡೆಯುವುದು ಡಾಲರ್ ಕರೆನ್ಸಿಯಲ್ಲೇ. ಹೀಗಾಗಿ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಷ್ಟೂ ಭಾರತ ತೆರಬೇಕಾದ ತೈಲ ಬೆಲೆ ಇನ್ನಷ್ಟು ಹೆಚ್ಚಳವಾಗುತ್ತಲೇ ಇರುತ್ತದೆ.

ಇದನ್ನೂ ಓದಿ: ಇನ್ಮುಂದೆ ಸೂಪರ್ ಮಾರ್ಕೆಟ್​ನಲ್ಲೂ ಸಿಗಲಿದೆ ಪೆಟ್ರೋಲ್, ಡೀಸೆಲ್?

ಕೇಂದ್ರದಿಂದ ವಿಧಿಸಲಾಗುವು ಅಬಕಾರಿ ಸುಂಕವು ನಿರ್ದಿಷ್ಟ ಮೊತ್ತದಾಗಿರುತ್ತದೆ. ಅಂತಾರಾಷ್ಟ್ರಿಯ ಬೆಲೆಗಳು ಎಷ್ಟೇ ಏರಿಳಿಕೆಯಾದರೂ ಅಬಕಾರಿ ಸುಂಕದಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ರಾಜ್ಯಗಳು ವಿಧಿಸುವ ವ್ಯಾಟ್ ತೆರಿಗೆಯು ಶೇಕಡಾವಾರು ಲೆಕ್ಕದಲ್ಲಿರುತ್ತದೆ. ಹೀಗಾಗಿ, ಪೆಟ್ರೋಲ್ ಬೆಲೆ ಹೆಚ್ಚಳದಲ್ಲಿ ವ್ಯಾಟ್ ತೆರಿಗೆ ಪಾತ್ರ ಮಹತ್ವದ್ದಿರುತ್ತದೆ.

ಇನ್ನು, ಡೀಲರ್ ಕಮಿಷನ್ ಕೂಡ ಪ್ರತೀ ಪ್ರದೇಶಕ್ಕೂ ಸ್ವಲ್ಪ ವ್ಯತ್ಯಾಸ ಹೊಂದಿರುತ್ತದೆ. ಪ್ರತೀ ಲೀಟರ್ ಪೆಟ್ರೋಲ್​ಗೆ 3ರಿಂದ 3.65 ರೂ ಡೀಲರ್ ಕಮಿಷನ್ ಇರುತ್ತದೆ. ಹಾಗೆಯೇ ಡೀಸೆಲ್​ಗೆ 2ರಿಂದ 2.62 ರೂ. ಇರುತ್ತದೆ. ಪೆಟ್ರೋಲ್ ಬಂಕ್​ ಇರುವ ಸ್ಥಳದ ಮೇಲೆ ಈ ದರ ಅನ್ವಯವಾಗುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
Loading...

----------------
First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...