Petrol Price- ಉಡುಪಿಯಲ್ಲಿ ಪೆಟ್ರೋಲ್ ಬೆಲೆ 1 ರೂ ಹೆಚ್ಚಳ; ಚಿತ್ರದುರ್ಗದಲ್ಲಿ ಬೆಲೆ ಇಳಿಕೆ

Today’s Petrol and Diesel Prices (September 11th)- ಉಡುಪಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಇಂದು 1.02 ರೂನಷ್ಟು ಏರಿಕೆ ಕಂಡಿದೆ. ನಿನ್ನೆ 104 ರೂಗಿಂತ ಒಳಗೆ ಬಂದಿದ್ದ ಪೆಟ್ರೋಲ್ ರೇಟ್ ಈಗ 105 ರೂ ಗಡಿ ಸಮೀಪಕ್ಕೆ ಹೋಗಿ ನಿಂತಿದೆ.

ಪೆಟ್ರೋಲ್ ಬಂಕ್

ಪೆಟ್ರೋಲ್ ಬಂಕ್

  • Share this:
    ಬೆಂಗಳೂರು (ಸೆ. 11): ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol and Diesel Price today) ವ್ಯತ್ಯಯವಾಗಿದೆ. ಚಿತ್ರದುರ್ಗದಲ್ಲಿ ಪೆಟ್ರೋಲ್ 85 ಪೈಸೆ, ಡೀಸೆಲ್ 78 ಪೈಸೆ ಬೆಲೆ ಇಳಿಕೆ ಕಂಡಿವೆ. ಇದು ಇವತ್ತಿನ ಗರಿಷ್ಠ ಇಳಿಕೆ ಕಂಡ ಜಿಲ್ಲೆ. ಉಡುಪಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಸುಮಾರು ಒಂದು ರೂಪಾಯಿಯಷ್ಟು ಏರಿಕೆ ಕಂಡಿದೆ. ಬೆಳಗಾವಿ, ಬಳ್ಳಾರಿ, ವಿಜಯಪುರ, ರಾಯಚೂರು, ತುಮಕೂರು ಜಿಲ್ಲೆಗಳಲ್ಲೂ ಪೆಟ್ರೋಲ್ 50 ಪೈಸೆಗಿಂತ ಬೆಲೆ ಹೆಚ್ಚಿಸಿದೆ.

    ಚೆನ್ನೈ ಹೊರತುಪಡಿಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ನಿನ್ನೆ 90 ಪೈಸೆಯಷ್ಟು ಕಡಿಮೆಗೊಂಡಿದ್ದ ಪೆಟ್ರೋಲ್ ಬೆಲೆ ಇವತ್ತು 6 ಪೈಸೆ ಹೆಚ್ಚಿದೆ. ಪೆಟ್ರೋಲ್ ಬೆಲೆ ಲೀಟರ್​ಗೆ 100 ರೂಗಿಂತ ಕಡಿಮೆ ಇರುವ ದೇಶದ ನಗರಗಳಲ್ಲಿ ಚೆನ್ನೈ ಕೂಡ ಒಂದು. ಗುಡಗಾಂವ್, ನೋಯಿಡಾ, ಚಂಡೀಗಡ, ಲಕ್ನೋ ಮೊದಲಾದ ಕೆಲ ನಗರಗಳಲ್ಲೂ ಪೆಟ್ರೋಲ್ ಬೆಲೆ ನೂರರ ಗಡಿಗಿಂತ ಒಳಗಿದೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ, ಉಡುಪಿ, ಉತ್ತರಕನ್ನಡ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿರುವ ಜಿಲ್ಲೆಗಳು: ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಹಾಸನ, ಹಾವೇರಿ, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಯಾದಗಿರಿ.

    ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಸೆ. 11):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ನವದೆಹಲಿ:
    ಪೆಟ್ರೋಲ್ ದರ: 101.19 ರೂ (ಯಥಾಸ್ಥಿತಿ)
    ಡೀಸೆಲ್ ದರ: 88.62 ರೂ (ಯಥಾಸ್ಥಿತಿ)

    ಕೋಲ್ಕತಾ:
    ಪೆಟ್ರೋಲ್ ದರ: 101.62 (ಯಥಾಸ್ಥಿತಿ)
    ಡೀಸೆಲ್ ದರ: 91.71 ರೂ (ಯಥಾಸ್ಥಿತಿ)

    ಮುಂಬೈ ನಗರ:
    ಪೆಟ್ರೋಲ್ ದರ: 107.26 ರೂ (ಯಥಾಸ್ಥಿತಿ)
    ಡೀಸೆಲ್ ದರ: 96.19 ರೂ (ಯಥಾಸ್ಥಿತಿ)

    ಚೆನ್ನೈ ನಗರ:
    ಪೆಟ್ರೋಲ್ ದರ: 99.12 ರೂ (6 ಪೈಸೆ ಏರಿಕೆ)
    ಡೀಸೆಲ್ ದರ: 93.40 ರೂ (5 ಪೈಸೆ ಏರಿಕೆ)

    ಇದನ್ನೂ ಓದಿ: Karnataka Weather Today: ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವೆಡೆ ಸೆಪ್ಟೆಂಬರ್ 13 ರ ತನಕ ಭಾರೀ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಸೆ. 11):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ಬೆಂಗಳೂರು ಗ್ರಾಮಾಂತರ:
    ಪೆಟ್ರೋಲ್ ದರ: 104.77 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.11 ರೂ (ಯಥಾಸ್ಥಿತಿ)

    ಬಾಗಲಕೋಟೆ ಜಿಲ್ಲೆ:
    ಪೆಟ್ರೋಲ್ ದರ: 105.21 ರೂ (25 ಪೈಸೆ ಇಳಿಕೆ)
    ಡೀಸೆಲ್ ದರ: 94.54 ರೂ (23 ಪೈಸೆ ಇಳಿಕೆ)

    ಬೆಳಗಾವಿ ಜಿಲ್ಲೆ:
    ಪೆಟ್ರೋಲ್ ದರ: 105.30 ರೂ (68 ಪೈಸೆ ಏರಿಕೆ)
    ಡೀಸೆಲ್ ದರ: 94.62 ರೂ (62 ಪೈಸೆ ಏರಿಕೆ)

    ಬಳ್ಳಾರಿ ಜಿಲ್ಲೆ:
    ಪೆಟ್ರೋಲ್ ದರ: 106.54 ರೂ (55 ಪೈಸೆ ಏರಿಕೆ)
    ಡೀಸೆಲ್ ದರ: 95.75 ರೂ (50 ಪೈಸೆ ಏರಿಕೆ)

    ಬೀದರ್ ಜಿಲ್ಲೆ:
    ಪೆಟ್ರೋಲ್ ದರ: 105.58 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 94.87 ರೂ (5 ಪೈಸೆ ಏರಿಕೆ)

    ವಿಜಯಪುರ:
    ಪೆಟ್ರೋಲ್ ದರ: 105.11 ರೂ (64 ಪೈಸೆ ಏರಿಕೆ)
    ಡೀಸೆಲ್ ದರ: 94.45 ರೂ (60 ಪೈಸೆ ಏರಿಕೆ)

    ಚಾಮರಾಜನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.12 ರೂ (8 ಪೈಸೆ ಏರಿಕೆ)

    ಚಿಕ್ಕಬಳ್ಳಾಪುರ ಜಿಲ್ಲೆ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ಚಿಕ್ಕಮಗಳೂರು ಜಿಲ್ಲೆ:
    ಪೆಟ್ರೋಲ್ ದರ: 105.63 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.86 ರೂ (ಯಥಾಸ್ಥಿತಿ)

    ಚಿತ್ರದುರ್ಗ ಜಿಲ್ಲೆ:
    ಪೆಟ್ರೋಲ್ ದರ: 105.34 ರೂ (85 ಪೈಸೆ ಇಳಿಕೆ)
    ಡೀಸೆಲ್ ದರ: 94.51 ರೂ (78 ಪೈಸೆ ಇಳಿಕೆ)

    ದಕ್ಷಿಣ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 104.20 ರೂ (36 ಪೈಸೆ ಏರಿಕೆ)
    ಡೀಸೆಲ್ ದರ: 93.23 ರೂ (24 ಪೈಸೆ ಇಳಿಕೆ)

    ದಾವಣಗೆರೆ ಜಿಲ್ಲೆ:
    ಪೆಟ್ರೋಲ್ ದರ: 106.86 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 95.90 ರೂ (5 ಪೈಸೆ ಏರಿಕೆ)

    ಧಾರವಾಡ ಜಿಲ್ಲೆ:
    ಪೆಟ್ರೋಲ್ ದರ: 104.57 ರೂ (23 ಪೈಸೆ ಇಳಿಕೆ)
    ಡೀಸೆಲ್ ದರ: 93.94 ರೂ (22 ಪೈಸೆ ಇಳಿಕೆ)

    ಗದಗ ಜಿಲ್ಲೆ:
    ಪೆಟ್ರೋಲ್ ದರ: 105.56 ರೂ (4 ಪೈಸೆ ಏರಿಕೆ)
    ಡೀಸೆಲ್ ದರ: 94.28 ರೂ (4 ಪೈಸೆ ಏರಿಕೆ)

    ಕಲಬುರ್ಗಿ ಜಿಲ್ಲೆ:
    ಪೆಟ್ರೋಲ್ ದರ: 104.85 ರೂ (16 ಪೈಸೆ ಏರಿಕೆ)
    ಡೀಸೆಲ್ ದರ: 94.20 ರೂ (14 ಪೈಸೆ ಏರಿಕೆ)

    ಹಾಸನ ಜಿಲ್ಲೆ:
    ಪೆಟ್ರೋಲ್ ದರ: 104.77 ರೂ (16 ಪೈಸೆ ಇಳಿಕೆ)
    ಡೀಸೆಲ್ ದರ: 93.99 ರೂ (15 ಪೈಸೆ ಇಳಿಕೆ)

    ಹಾವೇರಿ ಜಿಲ್ಲೆ:
    ಪೆಟ್ರೋಲ್ ದರ: 105.42 ರೂ (10 ಪೈಸೆ ಇಳಿಕೆ)
    ಡೀಸೆಲ್ ದರ: 94.72 ರೂ (10 ಪೈಸೆ ಇಳಿಕೆ)

    ಕೊಡಗು ಜಿಲ್ಲೆ:
    ಪೆಟ್ರೋಲ್ ದರ: 106.03 ರೂ (6 ಪೈಸೆ ಏರಿಕೆ)
    ಡೀಸೆಲ್ ದರ: 95.14 ರೂ (5 ಪೈಸೆ ಏರಿಕೆ)

    ಕೋಲಾರ ಜಿಲ್ಲೆ:
    ಪೆಟ್ರೋಲ್ ದರ: 104.63 ರೂ (ಯಥಾಸ್ಥಿತಿ)
    ಡೀಸೆಲ್ ದರ: 93.98 ರೂ (ಯಥಾಸ್ಥಿತಿ)

    ಕೊಪ್ಪಳ ಜಿಲ್ಲೆ:
    ಪೆಟ್ರೋಲ್ ದರ: 105.77 ರೂ (6 ಪೈಸೆ ಇಳಿಕೆ)
    ಡೀಸೆಲ್ ದರ: 95.06 ರೂ (6 ಪೈಸೆ ಇಳಿಕೆ)

    ಮಂಡ್ಯ ಜಿಲ್ಲೆ:
    ಪೆಟ್ರೋಲ್ ದರ: 104.69 ರೂ (8 ಪೈಸೆ ಏರಿಕೆ)
    ಡೀಸೆಲ್ ದರ: 94.03 ರೂ (7 ಪೈಸೆ ಏರಿಕೆ)

    ಮೈಸೂರು ಜಿಲ್ಲೆ:
    ಪೆಟ್ರೋಲ್ ದರ: 104.54 ರೂ (25 ಪೈಸೆ ಇಳಿಕೆ)
    ಡೀಸೆಲ್ ದರ: 93.90 ರೂ (23 ಪೈಸೆ ಇಳಿಕೆ)

    ರಾಯಚೂರು ಜಿಲ್ಲೆ:
    ಪೆಟ್ರೋಲ್ ದರ: 105.55 ರೂ (56 ಪೈಸೆ ಏರಿಕೆ)
    ಡೀಸೆಲ್ ದರ: 94.86 ರೂ (51 ಪೈಸೆ ಏರಿಕೆ)

    ರಾಮನಗರ ಜಿಲ್ಲೆ:
    ಪೆಟ್ರೋಲ್ ದರ: 104.87 ರೂ (18 ಪೈಸೆ ಇಳಿಕೆ)
    ಡೀಸೆಲ್ ದರ: 94.20 ರೂ (17 ಪೈಸೆ ಇಳಿಕೆ)

    ಶಿವಮೊಗ್ಗ ಜಿಲ್ಲೆ:
    ಪೆಟ್ರೋಲ್ ದರ: 106.17 ರೂ (70 ಪೈಸೆ ಏರಿಕೆ)
    ಡೀಸೆಲ್ ದರ: 95.67 ರೂ (65 ಪೈಸೆ ಇಳಿಕೆ)

    ತುಮಕೂರು ಜಿಲ್ಲೆ:
    ಪೆಟ್ರೋಲ್ ದರ: 106.04 ರೂ (80 ಪೈಸೆ ಏರಿಕೆ)
    ಡೀಸೆಲ್ ದರ: 95.27 ರೂ (74 ಪೈಸೆ ಏರಿಕೆ)

    ಉಡುಪಿ ಜಿಲ್ಲೆ:
    ಪೆಟ್ರೋಲ್ ದರ: 104.97 ರೂ (1.02 ರೂ ಏರಿಕೆ)
    ಡೀಸೆಲ್ ದರ: 94.25 ರೂ (93 ಪೈಸೆ ಏರಿಕೆ)

    ಉತ್ತರ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 105.27 ರೂ (53 ಪೈಸೆ ಏರಿಕೆ)
    ಡೀಸೆಲ್ ದರ: 94.53 ರೂ (48 ಪೈಸೆ ಇಳಿಕೆ)

    ಯಾದಗಿರಿ ಜಿಲ್ಲೆ:
    ಪೆಟ್ರೋಲ್ ದರ: 105.25 ರೂ (14 ಪೈಸೆ ಇಳಿಕೆ)
    ಡೀಸೆಲ್ ದರ: 94.57 ರೂ (13 ಪೈಸೆ ಇಳಿಕೆ)
    Published by:Vijayasarthy SN
    First published: