Petrol Price- ಪೆಟ್ರೋಲ್ ಬೆಲೆ ಶಿವಮೊಗ್ಗ, ಉಡುಪಿ, ಬೆಳಗಾವಿಯಲ್ಲಿ ಇಳಿಕೆ; ಬೆಂಗಳೂರಲ್ಲಿ ಯಥಾಸ್ಥಿತಿ

Today’s Petrol and Diesel Prices (September 10th)- ಉಡುಪಿ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಇಂದು 83 ಪೈಸೆ ಇಳಿದಿದ್ದು, ಅಲ್ಲಿ ಒಂದು ಲೀಟರ್ ಪೆಟ್ರೋಲ್​ನ ಬೆಲೆ 104 ರೂಗಿಂತ ಕಡಿಮೆಗೆ ಬಂದಿದೆ. ಬೆಳಗಾವಿ ಮತ್ತು ಶಿವಮೊಗ್ಗದಲ್ಲೂ 50 ಪೈಸೆಗಿಂತ ಹೆಚ್ಚು ಮೊತ್ತದಷ್ಟು ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಯಥಾಸ್ಥಿತಿ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಬೆಂಗಳೂರು (ಸೆ. 10): ಗಣೇಶ ಹಬ್ಬವಾದ ಇಂದು ಕುಂದಾನಗರಿ ಬೆಳಗಾವಿ, ಉಡುಪಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol and Diesel Prices) ಇಳಿಕೆಯಾಗಿದೆ. ಬೆಳಗಾವಿಯಲ್ಲಿ ಪೆಟ್ರೋಲ್ 52 ಪೈಸೆ, ಡೀಸೆ 57 ಪೈಸೆಯಷ್ಟು ದರ ಕಡಿಮೆ ಆಗಿದೆ. ಉಡುಪಿಯಲ್ಲಿ ಪೆಟ್ರೋಲ್ ಬೆಲೆ 83 ಪೈಸೆ ಇಳಿಕೆಯಾದರೆ ಡೀಸೆಲ್ ಬೆಲೆ 76 ಪೈಸೆ ಕಡಿಮೆ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 71 ಮತ್ತು 65 ಪೈಸೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಬೆಲೆ ಇದೆ. ಇಲ್ಲಿ ಲೀಟರ್ ಪೆಟ್ರೋಲ್ 104.70 ರೂ ಇದೆ. ಡೀಸೆಲ್ 94.04 ರೂ ಇದೆ.

    ಚೆನ್ನೈ ಹೊರತುಪಡಿಸಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ರಾಜ್ಯ ತೆರಿಗೆ ಬದಲಾವಣೆ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 90 ಪೈಸೆಯಷ್ಟು ಇಳಿದಿದೆ. ನೋಯ್ಡಾ, ಜೈಪುರ್, ಲಕ್ನೋ ಮೊದಲಾದ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಗುರುಗ್ರಾಮ್, ಭುಬನೇಶ್ವರ್, ಜೈಪುರ, ಪಟ್ನಾ, ತಿರುವನಂತಪುರಂ ಮೊದಲಾದ ಜಿಲ್ಲೆಗಳಲ್ಲಿ ಬೆಲೆ ಏರಿಕೆ ಆಗಿದೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವ ಜಿಲ್ಲೆಗಳು: ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಹಾಸನ, ಹಾವೇರಿ, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಯಾದಗಿರಿ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿರುವ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕಲಬುರ್ಗಿ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ, ಉಡುಪಿ, ಉತ್ತರಕನ್ನಡ.

    ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಸೆ. 10):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ನವದೆಹಲಿ:
    ಪೆಟ್ರೋಲ್ ದರ: 101.19 ರೂ (ಯಥಾಸ್ಥಿತಿ)
    ಡೀಸೆಲ್ ದರ: 88.62 ರೂ (ಯಥಾಸ್ಥಿತಿ)

    ಕೋಲ್ಕತಾ:
    ಪೆಟ್ರೋಲ್ ದರ: 101.62 (ಯಥಾಸ್ಥಿತಿ)
    ಡೀಸೆಲ್ ದರ: 91.71 ರೂ (ಯಥಾಸ್ಥಿತಿ)

    ಮುಂಬೈ ನಗರ:
    ಪೆಟ್ರೋಲ್ ದರ: 107.26 ರೂ (ಯಥಾಸ್ಥಿತಿ)
    ಡೀಸೆಲ್ ದರ: 96.19 ರೂ (ಯಥಾಸ್ಥಿತಿ)

    ಚೆನ್ನೈ ನಗರ:
    ಪೆಟ್ರೋಲ್ ದರ: 98.06 ರೂ (90 ಪೈಸೆ ಇಳಿಕೆ)
    ಡೀಸೆಲ್ ದರ: 93.35 ರೂ (9 ಪೈಸೆ ಏರಿಕೆ)

    ಇದನ್ನೂ ಓದಿ: Ayurveda| ವಿಶೇಷ ಸಂದರ್ಶನ: ಕೋವಿಡ್ ನಂತರದ ರೋಗಿಗಳ ಆರೈಕೆಯಲ್ಲಿ ಆಯುರ್ವೇದದ ಪಾತ್ರವೇನು?

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ವಿವರ (ಸೆ. 10):

    ಬೆಂಗಳೂರು ನಗರ:
    ಪೆಟ್ರೋಲ್ ದರ: 104.70 ರೂ (ಯಥಾಸ್ಥಿತಿ)
    ಡೀಸೆಲ್ ದರ: 94.04 ರೂ (ಯಥಾಸ್ಥಿತಿ)

    ಬೆಂಗಳೂರು ಗ್ರಾಮಾಂತರ:
    ಪೆಟ್ರೋಲ್ ದರ: 104.70 ರೂ (7 ಪೈಸೆ ಇಳಿಕೆ)
    ಡೀಸೆಲ್ ದರ: 94.11 ರೂ (7 ಪೈಸೆ ಏರಿಕೆ)

    ಬಾಗಲಕೋಟೆ ಜಿಲ್ಲೆ:
    ಪೆಟ್ರೋಲ್ ದರ: 105.46 ರೂ (13 ಪೈಸೆ ಏರಿಕೆ)
    ಡೀಸೆಲ್ ದರ: 94.77 ರೂ (13 ಪೈಸೆ ಏರಿಕೆ)

    ಬೆಳಗಾವಿ ಜಿಲ್ಲೆ:
    ಪೆಟ್ರೋಲ್ ದರ: 104.62 ರೂ (52 ಪೈಸೆ ಇಳಿಕೆ)
    ಡೀಸೆಲ್ ದರ: 94.11 ರೂ (57 ಪೈಸೆ ಇಳಿಕೆ)

    ಬಳ್ಳಾರಿ ಜಿಲ್ಲೆ:
    ಪೆಟ್ರೋಲ್ ದರ: 106.59 ರೂ (6 ಪೈಸೆ ಏರಿಕೆ)
    ಡೀಸೆಲ್ ದರ: 95.79 ರೂ (5 ಪೈಸೆ ಏರಿಕೆ)

    ಬೀದರ್ ಜಿಲ್ಲೆ:
    ಪೆಟ್ರೋಲ್ ದರ: 105.58 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 94.87 ರೂ (5 ಪೈಸೆ ಏರಿಕೆ)

    ವಿಜಯಪುರ:
    ಪೆಟ್ರೋಲ್ ದರ: 105.11 ರೂ (64 ಪೈಸೆ ಏರಿಕೆ)
    ಡೀಸೆಲ್ ದರ: 94.45 ರೂ (60 ಪೈಸೆ ಏರಿಕೆ)

    ಚಾಮರಾಜನಗರ:
    ಪೆಟ್ರೋಲ್ ದರ: 104.72 ರೂ (6 ಪೈಸೆ ಇಳಿಕೆ)
    ಡೀಸೆಲ್ ದರ: 94.06 ರೂ (6 ಪೈಸೆ ಇಳಿಕೆ)

    ಚಿಕ್ಕಬಳ್ಳಾಪುರ ಜಿಲ್ಲೆ:
    ಪೆಟ್ರೋಲ್ ದರ: 104.70 ರೂ (48 ಪೈಸೆ ಇಳಿಕೆ)
    ಡೀಸೆಲ್ ದರ: 94.04 ರೂ (44 ಪೈಸೆ ಇಳಿಕೆ)

    ಚಿಕ್ಕಮಗಳೂರು ಜಿಲ್ಲೆ:
    ಪೆಟ್ರೋಲ್ ದರ: 106.10 ರೂ (28 ಪೈಸೆ ಇಳಿಕೆ)
    ಡೀಸೆಲ್ ದರ: 95.19 ರೂ (30 ಪೈಸೆ ಇಳಿಕೆ)

    ಚಿತ್ರದುರ್ಗ ಜಿಲ್ಲೆ:
    ಪೆಟ್ರೋಲ್ ದರ: 106.33 ರೂ (59 ಪೈಸೆ ಏರಿಕೆ)
    ಡೀಸೆಲ್ ದರ: 95.41 ರೂ (53 ಪೈಸೆ ಏರಿಕೆ)

    ದಕ್ಷಿಣ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 103.84 ರೂ (27 ಪೈಸೆ ಇಳಿಕೆ)
    ಡೀಸೆಲ್ ದರ: 93.23 ರೂ (24 ಪೈಸೆ ಇಳಿಕೆ)

    ದಾವಣಗೆರೆ ಜಿಲ್ಲೆ:
    ಪೆಟ್ರೋಲ್ ದರ: 106.86 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 95.90 ರೂ (5 ಪೈಸೆ ಏರಿಕೆ)

    ಧಾರವಾಡ ಜಿಲ್ಲೆ:
    ಪೆಟ್ರೋಲ್ ದರ: 104.57 ರೂ (23 ಪೈಸೆ ಇಳಿಕೆ)
    ಡೀಸೆಲ್ ದರ: 93.94 ರೂ (22 ಪೈಸೆ ಇಳಿಕೆ)

    ಗದಗ ಜಿಲ್ಲೆ:
    ಪೆಟ್ರೋಲ್ ದರ: 104.94 ರೂ (5 ಪೈಸೆ ಏರಿಕೆ)
    ಡೀಸೆಲ್ ದರ: 94.28 ರೂ (4 ಪೈಸೆ ಏರಿಕೆ)

    ಕಲಬುರ್ಗಿ ಜಿಲ್ಲೆ:
    ಪೆಟ್ರೋಲ್ ದರ: 104.85 ರೂ (16 ಪೈಸೆ ಏರಿಕೆ)
    ಡೀಸೆಲ್ ದರ: 94.20 ರೂ (14 ಪೈಸೆ ಏರಿಕೆ)

    ಹಾಸನ ಜಿಲ್ಲೆ:
    ಪೆಟ್ರೋಲ್ ದರ: 104.77 ರೂ (16 ಪೈಸೆ ಇಳಿಕೆ)
    ಡೀಸೆಲ್ ದರ: 93.99 ರೂ (15 ಪೈಸೆ ಇಳಿಕೆ)

    ಹಾವೇರಿ ಜಿಲ್ಲೆ:
    ಪೆಟ್ರೋಲ್ ದರ: 105.42 ರೂ (10 ಪೈಸೆ ಇಳಿಕೆ)
    ಡೀಸೆಲ್ ದರ: 94.72 ರೂ (10 ಪೈಸೆ ಇಳಿಕೆ)

    ಕೊಡಗು ಜಿಲ್ಲೆ:
    ಪೆಟ್ರೋಲ್ ದರ: 106.03 ರೂ (6 ಪೈಸೆ ಏರಿಕೆ)
    ಡೀಸೆಲ್ ದರ: 95.14 ರೂ (5 ಪೈಸೆ ಏರಿಕೆ)

    ಕೋಲಾರ ಜಿಲ್ಲೆ:
    ಪೆಟ್ರೋಲ್ ದರ: 104.63 ರೂ (ಯಥಾಸ್ಥಿತಿ)
    ಡೀಸೆಲ್ ದರ: 93.98 ರೂ (ಯಥಾಸ್ಥಿತಿ)

    ಕೊಪ್ಪಳ ಜಿಲ್ಲೆ:
    ಪೆಟ್ರೋಲ್ ದರ: 105.77 ರೂ (6 ಪೈಸೆ ಇಳಿಕೆ)
    ಡೀಸೆಲ್ ದರ: 95.06 ರೂ (6 ಪೈಸೆ ಇಳಿಕೆ)

    ಮಂಡ್ಯ ಜಿಲ್ಲೆ:
    ಪೆಟ್ರೋಲ್ ದರ: 104.69 ರೂ (8 ಪೈಸೆ ಏರಿಕೆ)
    ಡೀಸೆಲ್ ದರ: 94.03 ರೂ (7 ಪೈಸೆ ಏರಿಕೆ)

    ಮೈಸೂರು ಜಿಲ್ಲೆ:
    ಪೆಟ್ರೋಲ್ ದರ: 104.54 ರೂ (25 ಪೈಸೆ ಇಳಿಕೆ)
    ಡೀಸೆಲ್ ದರ: 93.90 ರೂ (23 ಪೈಸೆ ಇಳಿಕೆ)

    ರಾಯಚೂರು ಜಿಲ್ಲೆ:
    ಪೆಟ್ರೋಲ್ ದರ: 104.52 ರೂ (81 ಪೈಸೆ ಇಳಿಕೆ)
    ಡೀಸೆಲ್ ದರ: 93.92 ರೂ (74 ಪೈಸೆ ಇಳಿಕೆ)

    ರಾಮನಗರ ಜಿಲ್ಲೆ:
    ಪೆಟ್ರೋಲ್ ದರ: 104.87 ರೂ (18 ಪೈಸೆ ಇಳಿಕೆ)
    ಡೀಸೆಲ್ ದರ: 94.20 ರೂ (17 ಪೈಸೆ ಇಳಿಕೆ)

    ಶಿವಮೊಗ್ಗ ಜಿಲ್ಲೆ:
    ಪೆಟ್ರೋಲ್ ದರ: 105.47 ರೂ (71 ಪೈಸೆ ಇಳಿಕೆ)
    ಡೀಸೆಲ್ ದರ: 95.67 ರೂ (65 ಪೈಸೆ ಇಳಿಕೆ)

    ತುಮಕೂರು ಜಿಲ್ಲೆ:
    ಪೆಟ್ರೋಲ್ ದರ: 105.04 ರೂ (45 ಪೈಸೆ ಇಳಿಕೆ)
    ಡೀಸೆಲ್ ದರ: 94.35 ರೂ (42 ಪೈಸೆ ಇಳಿಕೆ)

    ಉಡುಪಿ ಜಿಲ್ಲೆ:
    ಪೆಟ್ರೋಲ್ ದರ: 103.95 ರೂ (83 ಪೈಸೆ ಇಳಿಕೆ)
    ಡೀಸೆಲ್ ದರ: 93.32 ರೂ (76 ಪೈಸೆ ಇಳಿಕೆ)

    ಉತ್ತರ ಕನ್ನಡ ಜಿಲ್ಲೆ:
    ಪೆಟ್ರೋಲ್ ದರ: 105.27 ರೂ (53 ಪೈಸೆ ಏರಿಕೆ)
    ಡೀಸೆಲ್ ದರ: 94.53 ರೂ (48 ಪೈಸೆ ಇಳಿಕೆ)

    ಯಾದಗಿರಿ ಜಿಲ್ಲೆ:
    ಪೆಟ್ರೋಲ್ ದರ: 105.25 ರೂ (14 ಪೈಸೆ ಇಳಿಕೆ)
    ಡೀಸೆಲ್ ದರ: 94.57 ರೂ (13 ಪೈಸೆ ಇಳಿಕೆ)
    Published by:Vijayasarthy SN
    First published: