Fuel Price in India: ಇಂದು ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​​-ಡೀಸೆಲ್​​ ಬೆಲೆ

ಕೇಂದ್ರದಿಂದ ವಿಧಿಸಲಾಗುವು ಅಬಕಾರಿ ಸುಂಕವು ನಿರ್ದಿಷ್ಟ ಮೊತ್ತದಾಗಿರುತ್ತದೆ. ಅಂತಾರಾಷ್ಟ್ರಿಯ ಬೆಲೆಗಳು ಎಷ್ಟೇ ಏರಿಳಿಕೆಯಾದರೂ ಅಬಕಾರಿ ಸುಂಕದಲ್ಲಿ ವ್ಯತ್ಯಾಸವಿರುವುದಿಲ್ಲ.

news18
Updated:August 23, 2019, 8:22 AM IST
Fuel Price in India: ಇಂದು ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​​-ಡೀಸೆಲ್​​ ಬೆಲೆ
ಪೆಟ್ರೋಲ್​- ಸಾಂದರ್ಭಿಕ ಚಿತ್ರ
news18
Updated: August 23, 2019, 8:22 AM IST
ಬೆಂಗಳೂರು(ಆಗಸ್ಟ್​​.23): ತೈಲ ಬೆಲೆ ಬದಲಾವಣೆ ಪಕ್ರಿಯೆಯಲ್ಲಿ ನಿನ್ನೆಯಂತೆ ಇಂದು ಪೆಟ್ರೋಲ್-ಡೀಸೆಲ್ ದರ ಯಥಾಸ್ಥಿತಿ ಸ್ಥಿರತೆ ಕಾಯ್ದುಕೊಂಡಿದೆ. ಭಾರತದ ರಾಜಧಾನಿ  ದೆಹಲಿಯಲ್ಲಿ ಪೆಟ್ರೋಲ್​​​ 71.84 ರೂ. ಮತ್ತು ಡೀಸೆಲ್​​ 65.11 ರೂ. ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್​​​ ಬೆಲೆ 74.54 ರೂ. ಹಾಗೂ ಡೀಸೆಲ್​​ ದರ 67.49 ರೂ. ಆಗಿದೆ. ಮುಂಬೈನಲ್ಲಿ ಮಾತ್ರ ಡೀಸೆಲ್ 77.50 ರೂ., ಪೆಟ್ರೋಲ್​​ 68.26 ರೂ. ಇದೆ.

ಇನ್ನು ಚೆನ್ನೈನ್ನಲ್ಲಿ ಪೆಟ್ರೋಲ್​ 74.62 ರೂ. ಮತ್ತು ಡೀಸೆಲ್ 68.79 ರೂ. ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​​​ 74.26 ರೂ. ಮತ್ತು ಡೀಸೆಲ್​ 67.30 ರೂ. ಇದೆ. ಹಾಗೆಯೇ ಹೈದರಾಬಾದ್ ಪೆಟ್ರೋಲ್​​​ ಬೆಲೆ 76.34 ರೂ. ಹಾಗೂ ಡೀಸೆಲ್​​ ದರ 70.95 ರೂ ಆಗಿದೆ.

ತೈಲ ರಾಷ್ಟ್ರಗಳ ಅಂತಾರಾಷ್ಟ್ರೀಯ ಕಚ್ಛಾ ತೈಲ ಮಾರಾಟ ದರ ಸಮಾನವಾಗಿರುವುದಿಲ್ಲ. ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ಕಡಿಮೆ ದರಕ್ಕೆ ತೈಲ ಸಿಗುತ್ತದೆ. ಆದರೆ, ಭಾರತ ತೆರಬೇಕಾದ ಬೆಲೆ ತುಸು ಹೆಚ್ಚು. ಇದರ ಜೊತೆಗೆ ಈ ವಹಿವಾಟು ನಡೆಯುವುದು ಡಾಲರ್ ಕರೆನ್ಸಿಯಲ್ಲೇ. ಹೀಗಾಗಿ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಷ್ಟೂ ಭಾರತ ತೆರಬೇಕಾದ ತೈಲ ಬೆಲೆ ಇನ್ನಷ್ಟು ಹೆಚ್ಚಳವಾಗುತ್ತಲೇ ಇರುತ್ತದೆ.

ಕೇಂದ್ರದಿಂದ ವಿಧಿಸಲಾಗುವು ಅಬಕಾರಿ ಸುಂಕವು ನಿರ್ದಿಷ್ಟ ಮೊತ್ತದಾಗಿರುತ್ತದೆ. ಅಂತಾರಾಷ್ಟ್ರಿಯ ಬೆಲೆಗಳು ಎಷ್ಟೇ ಏರಿಳಿಕೆಯಾದರೂ ಅಬಕಾರಿ ಸುಂಕದಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ರಾಜ್ಯಗಳು ವಿಧಿಸುವ ವ್ಯಾಟ್ ತೆರಿಗೆಯು ಶೇಕಡಾವಾರು ಲೆಕ್ಕದಲ್ಲಿರುತ್ತದೆ. ಹೀಗಾಗಿ, ಪೆಟ್ರೋಲ್ ಬೆಲೆ ಹೆಚ್ಚಳದಲ್ಲಿ ವ್ಯಾಟ್ ತೆರಿಗೆ ಪಾತ್ರ ಮಹತ್ವದ್ದಿರುತ್ತದೆ.

ಇದನ್ನೂ ಓದಿ: Fuel Price in India: ಪೆಟ್ರೋಲ್​​-ಡೀಸೆಲ್​​ ಬೆಲೆ ಮತ್ತೆ ಏರಿಕೆ; ಇಲ್ಲಿದೆ ಸಂಪೂರ್ಣ ವಿವರ

ಇನ್ನು, ಡೀಲರ್ ಕಮಿಷನ್ ಕೂಡ ಪ್ರತೀ ಪ್ರದೇಶಕ್ಕೂ ಸ್ವಲ್ಪ ವ್ಯತ್ಯಾಸ ಹೊಂದಿರುತ್ತದೆ. ಪ್ರತೀ ಲೀಟರ್ ಪೆಟ್ರೋಲ್​ಗೆ 3ರಿಂದ 3.65 ರೂ ಡೀಲರ್ ಕಮಿಷನ್ ಇರುತ್ತದೆ. ಹಾಗೆಯೇ ಡೀಸೆಲ್​ಗೆ 2ರಿಂದ 2.62 ರೂ. ಇರುತ್ತದೆ. ಪೆಟ್ರೋಲ್ ಬಂಕ್​ ಇರುವ ಸ್ಥಳದ ಮೇಲೆ ಈ ದರ ಅನ್ವಯವಾಗುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
Loading...

-----------------
First published:August 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...