ಬಾಗಲಕೋಟೆಯಲ್ಲಿ ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್​​!

ಈಗಾಗಲೇ ಹಲವು ರೂಪಗಳಲ್ಲಿ ಡ್ರೋಣ್​ ಕಾರ್ಯನಿರ್ವಹಿಸುತ್ತಿದೆ. ಈಗ ಇದೇ ಮೊದಲ ಬಾರಿ ಆಧುನಿಕ ಕೃಷಿ ಯತ್ರೋಪಕರಣವಾಗಿ ರೈತರಿಗೆ ಡ್ರೋಣ್​ ಬಳಕೆಯಾಗುತ್ತಿದೆ.

ಡ್ರೋನ್​ ಮೂಲಕ ಕೀಟನಾಶಕ ಸಿಂಪಡಿಸುತ್ತಿರುವುದು

ಡ್ರೋನ್​ ಮೂಲಕ ಕೀಟನಾಶಕ ಸಿಂಪಡಿಸುತ್ತಿರುವುದು

  • Share this:
ಬಾಗಲಕೋಟೆ (ಅ. 27): ಜಿಲ್ಲೆಯಲ್ಲಿ ತೊಗರಿ ಬೆಳೆ ಎತ್ತರವಾಗಿ ಬೆಳೆದು, ಹೂ ಬಿಟ್ಟಿದ್ದು, ಇನ್ನೇನು ಕಾಳುಕಟ್ಟುವ ಸಮಯ ಬಂದಿದೆ. ಬರೋಬ್ಬರಿ 8 ರಿಂದ 10 ಅಡಿ ಬೆಳೆದ ಗಿಡಗಳಿಗೆ ಕೀಟ ನಾಶಕ ಸಿಂಪಡಣೆ ಮಾಡುವುದು ಹೇಗೆ ಎಂಬ ಚಿಂತೆ ರೈತರಲ್ಲಿ ಕಾಡುತ್ತಿದೆ. ಮಳೆಯಿಂದಾಗಲೇ ಈರುಳ್ಳಿ ಬೆಳೆ ಹಾಳು ಮಾಡಿಕೊಂಡಿರುವ ರೈತರು ತೊಗರಿ ಬೆಳೆ ನಾಶವಾಗದಂತೆ ಮುನ್ನೆಚ್ಚರಿಕೆಗೆ ಮುಂದಾಗಿದ್ದಾರೆ. ಈ ಹಿನ್ನಲೆ ಕೆಲವು ರೈತರು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಅದೇ ಡ್ರೋನ್. ಅಚ್ಚರಿಯಾದರೂ ಹೌದು. ಡ್ರೋನ್​ ಮೂಲಕ ಈಗ ಜಿಲ್ಲೆಯ ರೈತರು ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ. ಈ ಮೂಲಕ ಆಧುನಿಕ ಸೌಕರ್ಯ ಬಳಕೆ ಮಾಡುವ ಮೂಲಕ ಬೆಳೆ ಕಾಪಾಡಲು ಮುಂದಾಗಿದ್ದಾರೆ.  ಡ್ರೋನ್​ ಮೂಲಕ ಔಷಧ ಸಿಂಪಡಿಸಿದರೆ, ತೊಗರಿ ಹೂವು ಉದುರುತ್ತಾ ಅಲ್ಲದೇ, ಔಷಧಿಯಿಂದ ಕೀಟ ಹತೋಟಿಗೆ ಬರಲಿದೆಯಾ ಎಂಬ ಬಗ್ಗೆ ಜಿಲ್ಲಾ ಕೃಷಿ ಇಲಾಳೆ ಅಧಿಕಾರಿಗಳು ಪ್ರಾತ್ಯಕ್ಷಿಕೆ ನಡೆಸಿದರು. ಇದರಲ್ಲಿ ಯಶಸ್ವಿಯಾದ ಹಿನ್ನಲೆ ಈಗ ಜಿಲ್ಲೆಯ ರೈತರು ಕೂಡ ಇದರ ಅಳವಡಿಕೆಗೆ ಮುಂದಾಗಿದ್ದಾರೆ. 

Pesticide spray by drone in Bagalkot

ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ಸಂಗಪ್ಪ ಕುರಿ, ಮಹಾಂತೇಶ ಪಾಟೀಲ,ಗಿಡ್ಡಪ್ಪ ಕುರಿ, ಬಸವರಾಜ ಸಜ್ಜನ, ನಿಂಗನಗೌಡ ಪಾಟೀಲ್ ಎಂಬುವರ ಜಮೀನಿನಲ್ಲಿ ತೊಗರಿ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡಲಾಗಿದೆ

ಇದಕ್ಕೂ ಮುನ್ನ ರೈತರು ಡ್ರೋನ್ ಮೂಲಕ ಸಿಂಪಡಿಸುವ ಔಷಧಿಯಿಂದ ಕೀಟ ಹತೋಟಿಗೆ ಬರುತ್ತಾ, ಜೊತೆಗೆ ಡ್ರೋನ್ ರಕ್ಕೆಯ ಗಾಳಿಯಿಂದ ತೊಗರಿ ಹೂವು ಉದುರುತ್ತಾ ಎನ್ನುವುದು ಕಂಡುಕೊಳ್ಳಲು ಮೊದಲಿಗೆ ಬಾಗಲಕೋಟೆ ಕೃಷಿ ಇಲಾಖೆಗೆ ಸಂಬಂಧಿಸಿದ ತೊಗರಿ ಬೆಳೆ ಪ್ರಾತ್ಯಕ್ಷಿಕೆಯಲ್ಲಿ ಡ್ರೋನ್ ದಿಂದ ಕೀಟನಾಶಕ ಸಿಂಪಡಣೆ ಮಾಡಿದ್ದಾರೆ.ಆಗ ಡ್ರೋನ್ ದಿಂದ ಕೀಟನಾಶಕ ಸಿಂಪಡಣೆ ಪರಿಣಾಮಕಾರಿ ಎಂದು ಗೊತ್ತಾದ ಬಳಿಕ ರೈತರು ಡ್ರೋನ್ ಕೀಟನಾಶಕ ಸಿಂಪಡಣೆ ಮಾಡಿಸುವದಕ್ಕೆ ಮುಗಿಬಿದ್ದಿದ್ದಾರೆ.

ಇದನ್ನು ಓದಿ: ಚಾಮುಂಡೇಶ್ವರಿ ಉತ್ಸವದಲ್ಲಿ ದೇವರ ಪಲ್ಲಕ್ಕಿ ಎಳೆದು ಗಮನಸೆಳೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಗಳು

ಹುನಗುಂದ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಹಾಗೂ ಹುಬ್ಬಳ್ಳಿಯ ಖಾಸಗಿ ಕಂಪನಿ ಸಹಯೋಗದಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡಿ ಯಶಸ್ವಿಯಾಗಿದೆ. ಇದರಿಂದ ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ಸಂಗಪ್ಪ ಕುರಿ, ಮಹಾಂತೇಶ ಪಾಟೀಲ,ಗಿಡ್ಡಪ್ಪ ಕುರಿ, ಬಸವರಾಜ ಸಜ್ಜನ, ನಿಂಗನಗೌಡ ಪಾಟೀಲ್ ಎಂಬುವರ ಜಮೀನಿನಲ್ಲಿ ತೊಗರಿ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡಲಾಗಿದೆ. ಇದು ಇಲ್ಲಿನ ಸುತ್ತಮುತ್ತ ರೈತರ ಗಮನ ಸೆಳೆದಿದ್ದು, ಈಗಾಗಲೇ ಡ್ರೋಣ್​ಗಾಗಿ ಬುಕ್ಕಿಂಗ್​ ಆರಂಭಿಸಿದ್ದಾರೆ. ಅಮೀನಗಡ ಹೋಬಳಿ ಸುತ್ತಮುತ್ತಲು ರೈತರು ಹೆಚ್ಚಾಗಿ ತೊಗರಿ ಬೆಳೆದಿದ್ದು, ನೂರಾರು  ರೈತರು ಡ್ರೋನ್ ಗಾಗಿ ನೊಂದಾಯಿಸಿದ್ದಾರೆ.

Pesticide spray by drone in Bagalkot

ಇನ್ನು ಈ ಡ್ರೋನ್  18ಲೀಟರ್ ಸಾಮರ್ಥ್ಯ ಹೊಂದಿದ್ದು,ಸಣ್ಣ ಕಣದ ಮೂಲಕ ಔಷಧಿ ಸಿಂಪಡಿಸುತ್ತದೆ.  1 ಎಕರೆಗೆ 10 ಲೀಟರ್ ಕೀಟನಾಶಕ ಸಿಂಪಡಣೆ ಮಾಡಬಹುದಾಗಿದೆ. ಇದಕ್ಕೆ 7 ನೂರು ವೆಚ್ಚ ತಗುಲಿದೆ. ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಎತ್ತರವಾಗಿ ಬೆಳೆದ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಇಲ್ಲಿನ ರೈತರಿಗೆ ಅನುಕೂಲಕರವಾಗಿ ಕಂಡುಬಂದಿದೆ.

ಈಗಾಗಲೇ ಹಲವು ರೂಪಗಳಲ್ಲಿ ಡ್ರೋಣ್​ ಕಾರ್ಯನಿರ್ವಹಿಸುತ್ತಿದೆ. ಈಗ ಇದೇ ಮೊದಲ ಬಾರಿ ಆಧುನಿಕ ಕೃಷಿ ಯತ್ರೋಪಕರಣವಾಗಿ ರೈತರಿಗೆ ಡ್ರೋಣ್​ ಬಳಕೆಯಾಗುತ್ತಿದೆ. ಅಲ್ಲದೇ ಇದು ನಿರ್ವಹಣೆ, ವೆಚ್ಚದಲ್ಲಿಯೂ ಸುಲಭವಾಗಿ ಕಂಡು ಬರುತ್ತಿದೆ. ಇದರಿಂದ ಅಳೆತ್ತರ ಬೆಳೆದ ಗಿಡಗಳಿಗೆ ಸುಲಭವಾಗಿ ಔಷಧ ಸಿಂಪಡಣೆ ಮಾಡಬಹುದಾಗಿದೆ. ಇದರಿಂದ  ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಪ್ರಗತಿಪರ ರೈತರಾದ ರವಿ ಸಜ್ಜನರ.
Published by:Seema R
First published: