Bengaluru: ಪೋಷಕರ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕಿ; ಕಂದಮ್ಮನ ಪ್ರಾಣಕ್ಕೆ ಕುತ್ತು ತಂದ ಪೆಸ್ಟ್ ಕಂಟ್ರೋಲ್

ಮನೆಗೆ ಬಂದ ನಂತರ ದಿನ ಬಳಕೆಯ ವಸ್ತುಗಳನ್ನು ಸಹ ಸ್ವಚ್ಛ (Clean) ಮಾಡಿರಲಿಲ್ಲ. ಇನ್ನು ಅಹನಾಗೆ ಉಸಿರಾಟದ ಸಮಸ್ಯೆ (Breathing Problems) ಕಾಣಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೋಷಕರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿರುವ ಘಟನೆ ಬೆಂಗಳೂರಿನ ವಸಂತನಗರದಲ್ಲಿ (Vasanthnagara, Bengaluru) ನಡೆದಿದೆ. ಆರು ವರ್ಷದ ಆಹನಾ ಮೃತ ಬಾಲಕಿ.  ಮನೆಯಲ್ಲಿ ಜಿರಳೆ ಕಾಟವೆಂದು ಮಾಲೀಕ ಶಿವಶಂಕರ್ ಔಷಧಿ ಸಿಂಪಡಿಸಿದ್ದರು. ಒಂದು ವಾರ ಮನೆ ಖಾಲಿ (Rented House) ಬಿಡುವಂತೆ ನಿವಾಸಿಗಳಿಗೆ ಸೂಚನೆ ಸಹ ನೀಡಿದ್ದರು. ಮಾಲೀಕನ ಗಮನಕ್ಕೆ ತರದೇ ನಾಲ್ಕೇ ದಿನದಲ್ಲಿ ಮನೆಗೆ ಆಹನಾ ಪೋಷಕರು (Parents) ಬಂದಿದ್ದಾರೆ. ಮನೆಗೆ ಬಂದ ನಂತರ ದಿನ ಬಳಕೆಯ ವಸ್ತುಗಳನ್ನು ಸಹ ಸ್ವಚ್ಛ (Clean) ಮಾಡಿರಲಿಲ್ಲ. ಇನ್ನು ಅಹನಾಗೆ ಉಸಿರಾಟದ ಸಮಸ್ಯೆ (Breathing Problems) ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪೋಷಕರು ಮುಂದಾಗಿದ್ದಾರೆ. ಆದ್ರೆ ಮಾರ್ಗ ಮಧ್ಯೆಯೇ ಆಹನಾ ಸಾವನ್ನಪ್ಪಿದ್ದಾಳೆ. ಬೌರಿಂಗ್ ಆಸ್ಪತ್ರೆಯಲ್ಲಿ ಬಾಲಕಿಯ ಮೃತದೇಹ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಹೈ ಗ್ರೌಂಡ್ ಠಾಣಾ ಪೊಲೀಸರು ಅಹನಾ ಪೋಷಕರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆ ಮಾಲೀಕ ಶಿವಶಂಕರ್ ಅವರನ್ನು ವಶಕ್ಕೆ ಪಡೆದಿರುವ ಹೈಗ್ರೌಂಡ್ಸ್ ಪೊಲೀಸರು (Highground Police) ವಿಚಾರಣೆಗೆ  ಒಳಪಡಿಸಿದ್ದಾರೆ.

ಕೇರಳ ಮೂಲದ ವಿನೋದ್ ನಾಯರ್ ದಂಪತಿ ಕಳೆದ 8 ವರ್ಷದಿಂದ ವಸಂತ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಿನೋದ್ ನಾಯರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗಳು ಅಹನಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು.

ಮುಂಚಿತವಾಗಿಯೇ ಮನೆಗೆ ಬಂದ ನಾಯರ್ ಕುಟುಂಬ

ಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ದು, ಸಮಸ್ಯೆ ಹೆಚ್ಚಾಗಿದೆ ಎಂದು ನಾಯರ್ ದಂಪತಿ ಮನೆಯ ಮಾಲೀಕ ಶಿವಶಂಕರ್ ಅವರಿಗೆ ದೂರು ನೀಡಿದ್ದರು. ಬಳಿಕ ಜಿರಳೆ ಔಷಧಿ ಸಿಂಪಡಿಸಲು ತಯಾರಿ ನಡೆಸಿದ ಶಿವಶಂಕರ್ 10 ದಿನದ ಮಟ್ಟಿಗೆ ಮನೆ ಖಾಲಿ ಮಾಡಲು ಹೇಳಿದ್ದರು. ಈ ಹಿನ್ನೆಲೆ ನಾಲ್ಕು ದಿನಗಳ ಹಿಂದೆ ಅಂದ್ರೆ ಜುಲೈ 28ರಂದು ನಾಯರ್ ಕುಟುಂಬಕ್ಕೆ ತೆರಳಿತ್ತು.

Pest control goes awry girl dies in vasanthnagara Bengaluru mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Dakshina Kannada: ಮಳೆಯ ರೌದ್ರನರ್ತನ; ಎರಡು ಬಲಿ, ಸೇತುವೆಗಳು ಜಲಾವೃತ, ಲಕ್ಷಾಂತರ ಮೌಲ್ಯದ ಆಸ್ತಿ ನಾಶ

10 ದಿನ ಮುಂಚಿತವಾಗಿ ಬೆಂಗಳೂರಿಗೆ ಬಂದ ನಾಯರ್ ಕುಟುಂಬ, ಮನೆಯ ಮಾಲೀಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಮಗು ಅಹನಾ ಸಾವಿಗೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಮನೆ ಮಾಲೀಕ ಶಿವಶಂಕರ್ ಆರೋಪಿಸಿದ್ದಾರೆ.

ಮನೆಯಲ್ಲಿ ಔಷಧಿ ಸಿಂಪಡಣೆ

ಮನೆಯಲ್ಲಿ ತಿಗಣೆ ಮತ್ತು ಜಿರಳೆ ಕಾಟ ಜಾಸ್ತಿ ಆಗಿದೆ ಅಂತ ಅವರೇ ಹೇಳಿದ್ದರು. ಹೀಗಾಗಿ ನಾಲ್ಕು ದಿನ ಬೇಕು ಸಮಯ ಬೇಕು ಅಂತ ಹೇಳಿದ್ದೇವು. ಅದರಂತೆ ಮನೆಗೆ ಪೆಸ್ಟ್ ಕಂಟ್ರೋಲ್ ಅವರನ್ನ ಕರೆಸಿ ಔಷಧಿ ಸಿಂಪಡಣೆ ಮಾಡಲಾಗಿತ್ತು. ಔಷಧಿ ಸಿಂಪಡಣೆ ಬಳಿಕ ನಂತರ ಮನೆ ಸಂಪೂರ್ಣ ಲಾಕ್ ಮಾಡಲಾಗಿತ್ತು ಎಂದು ಮನೆ ಮಾಲೀಕರು ಹೇಳುತ್ತಾರೆ.

ಮಗ ಸಾವು, ದಂಪತಿ ಆರೋಗ್ಯದಲ್ಲಿಯೂ ಸಮಸ್ಯೆ

ಮನೆಯ ಕೀ ಸಹ ನಮ್ಮ ಬಳಿ ಇತ್ತು. ಅದ್ರೆ ಸೋಮವಾರ ಬೆಳಗ್ಗೆ  ನಾಯರ್ ಕುಟುಂಬ ಏಕಾಏಕಿ ವಾಪಸ್ ಮನೆಗೆ ಬಂದಿದ್ದಾರೆ. ನಕಲಿ ಕೀ ಬಳಸಿ ಮನೆ ಬೀಗ ತೆಗೆದು ಒಳ ಹೋಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿರಲ್ಲಿಲ್ಲ. ಮಗು ಸೋಪಾ ಮೇಲೆ ಮಲಗಿದ್ದು, ಉಸಿರುಗಟ್ಟಿದೆ. ನಂತರ ಅಸ್ಪತ್ರೆಗೆ ಹೋದಾಗ ಸಾವನ್ನಪ್ಪಿದ ವಿಚಾರ ತಿಳಿದಿದೆ. ಗಂಡ ಹೆಂಡತಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮನೆ ಮಾಲೀಕರು ಹೇಳುತ್ತಾರೆ.

Pest control goes awry girl dies in vasanthnagara Bengaluru mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Bengaluru Traffic: ಈ ಚಿಹ್ನೆಯ ಅರ್ಥವೇನು? ಬೆಂಗಳೂರು ಪೊಲೀಸರಿಂದ ಟ್ರಾಫಿಕ್ ಪಾಠ!

ಈ ಸಂಬಂಧ ಅಹನಾ ಚಿಕ್ಕಮ್ಮ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಮನೆಯ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304 (ಎ) ಮತ್ತು 337ರ ಅಡಿಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ.
Published by:Mahmadrafik K
First published: