ಧಾರವಾಡ: ಇಂದು ಬೆಳಗಾವಿಯಲ್ಲಿ (Belagavi) ನಡೆದಿದ್ದ ಕಾಂಗ್ರೆಸ್ (Congress) ಯುವ ಕ್ರಾಂತಿ (Yuva Kranthi) ಸಮಾವೇಶಕ್ಕೆ ತೆರಳಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ (Accident) ಸಾವನ್ನಪ್ಪಿರುವ ಘಟನೆ ಧಾರವಾಡ (Dharwad) ತಾಲೂಕಿನ ತೇಗೂರ ಸಮೀಪದ ರಾಷ್ಟ್ರೀಯ ಹೆದ್ದಾರಿ ನಂ. 4ರಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅಬ್ದುಲ್ ಖಾದರ್ ಮುಜಾತಿ (70) ಎಂದು ಗುರುತಿಸಲಾಗಿದ್ದು, ಹುಬ್ಬಳ್ಳಿಯ (Hubballi) ಎಸ್.ಎಂ. ಕೃಷ್ಣ ನಗರದ ನಿವಾಸಿಯಾಗಿದ್ದಾರೆ. ಯುವ ಕ್ರಾಂತಿ ಸಮಾವೇಶದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಲು ಅಬ್ದುಲ್ ತಮ್ಮ ಕ್ರೂಸರ್ (Cruiser) ವಾಹನದಲ್ಲಿ ತೆರಳಿದ್ದರು.
ಅಪಘಾತದ ಬಳಿಕ ಕಾರು ನಿಲ್ಲಿಸದೆ ಚಾಲಕ ಎಸ್ಕೇಪ್
ಯುವಕ್ರಾಂತಿ ಸಮಾವೇಶಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ನೋಡಲು ತೆರಳಿದ್ದ ಅಬ್ದುಲ್ ಖಾದರ್ ಮುಜಾತಿ ಕಾರ್ಯಕ್ರಮ ಮುಗಿದ ಬಳಿಕ ಹುಬ್ಬಳಿಗೆ ವಾಪಸ್ ಹೊರಟಿದ್ದರು.
ಆದರೆ ದಾರಿಯ ನಡುವೆ ಧಾರವಾಡ ತಾಲೂಕಿನ ತೇಗೂರ ಹತ್ತಿರ ಊಟ ಮಾಡಲು ಎಂದು ಕ್ರೂಸರ್ ನಿಲ್ಲಿಸಿ ರಸ್ತೆ ದಾಟಲು ಮುಂದಾದ ವೇಳೆ ದುರ್ಘಟನೆ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ಅಬ್ದುಲ್ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಇನ್ನು, ಅಬ್ದುಲ್ ಅವರಿಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ಕಾರು ನಿಲ್ಲಿಸಿದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಗರಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: BS Yediyurappa: ಶಾಸಕಿಯ ಹೆಗಲ ಮೇಲೆ ಕೈಹಾಕಿ ನನ್ನ ಜೊತೆಗಿದ್ದಾರೆ ಎಂದ ಮಾಜಿ ಸಿಎಂ ಬಿಎಸ್ವೈ
ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದ ಎಎಸ್ಐ ಸಾವು
ಅನಾರೋಗ್ಯದ ಹಿನ್ನೆಲೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿ ನಡೆದಿದೆ. ಜೈ ಶ್ರೀನಿವಾಸ್(59) ಮೃತ ಎಎಸ್ಐ ಆಗಿದ್ದಾರೆ.
ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈ ಶ್ರೀನಿವಾಸ್ ಅವರು, ವಾರದ ಹಿಂದೆ ಬೈಕ್ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಲೋಬಿಪಿಯಿಂದ ಬಳಲಿ ಬೈಕ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ