ಧಾರವಾಡದಲ್ಲಿ ಜಮೀನು ವಿವಾದದಲ್ಲಿ ವ್ಯಕ್ತಿಯ ಕೊಲೆ : ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮೃತನ ಪತ್ನಿ ಪತಿ ಕಾಣೆಯಾಗಿದ್ದಾನೆ ಎಂದು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಆದರೆ ಕೊಲೆ ಮಾಡಿದ ವ್ಯಕ್ತಿಗಳು ಯಾರಿಗೂ ಅನುಮಾನ ಬಾರದಂತೆ ಗ್ರಾಮದಲ್ಲಿಯೇ ಓಡಾಡಿಕೊಂಡಿದ್ದರು.

G Hareeshkumar | news18-kannada
Updated:November 27, 2019, 3:01 PM IST
ಧಾರವಾಡದಲ್ಲಿ ಜಮೀನು ವಿವಾದದಲ್ಲಿ ವ್ಯಕ್ತಿಯ ಕೊಲೆ : ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
  • Share this:
ಧಾರವಾಡ(ನ.27): ಜಮೀನ ವಿವಾದದ ಹಿನ್ನಲೆ ಮೂರು ತಿಂಗಳ ಹಿಂದೆ‌ ಕೊಲೆ‌ಮಾಡಿ ನದಿಗೆ ಶವ ಎಸೆದು ಯಾರು ಅನುಮಾನ ಬಾರದಂತೆ ಗ್ರಾಮದಲ್ಲಿ ಓಡಾಡಿಕೊಂಡಿದ್ದ ಐವರು ಕೊಲೆ ಆರೋಪಿಗಳನ್ನ ಪೊಲೀಸರು ಬಂಧಿಸಿರುವ ಘಟನೆ ಧಾರವಾಡದಲ್ಲಿ‌ ನಡೆದಿದೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮಾರುತಿ ರಾಮಪ್ಪ ಚನ್ನದಾಸರ್ ಕೊಲೆಯಾದ ವ್ಯಕ್ತಿಯಾಗಿದ್ದು, ಇದೇ ಗ್ರಾಮದ ವಿರುಪಾಕ್ಷಪ್ಪ ಗಾಣಿಗೇರ್, ಶಂಕ್ರಪ್ಪಗಾಣಿಗೇರ, ವಸಂತ ಗದ್ದಿಗೌಡರ್, ಕುಮಾರ ಗದ್ದಿಗೌಡರ್, ಸಯ್ಯದ್ ಸಾಬ್ ಮುಲ್ಲಾನವರ್ ಈ ಐವರು ಸೇರಿಕೊಂಡು ಮಾರುತಿ ರಾಮಪ್ಪ ಚನ್ನದಾಸರ್ ನನ್ನು ಜಮೀನಲ್ಲಿ‌ ಕೊಲೆ‌ಮಾಡಿದ್ದರು.

ನಂತರ ಮೃತದೇಹವನ್ನು ಕೃಷ್ಣಾ ನದಿಯ ಕುರ್ತಿಕೋಲಾರ್ ಹಿನ್ನಿರಿನಲ್ಲಿ ಎಸೆದು ಹೋಗಿದ್ರು. ಆದರೆ ಮೃತನ ಪತ್ನಿ ಪತಿ ಕಾಣೆಯಾಗಿದ್ದಾನೆ ಎಂದು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಆದರೆ ಕೊಲೆ ಮಾಡಿದ ವ್ಯಕ್ತಿಗಳು ಯಾರಿಗೂ ಅನುಮಾನ ಬಾರದಂತೆ ಗ್ರಾಮದಲ್ಲಿಯೇ ಓಡಾಡಿಕೊಂಡಿದ್ದರು.

ಕಾಣೆಯಾದ ವ್ಯಕ್ತಿ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮಾರುತಿ ಚನ್ನದಾಸರ್ ಮೃತನಾದ ಬಗ್ಗೆ ಮಾಹಿತಿ ಸಿಗುತ್ತದೆ. ಮೊದಲು ಆತ್ಮಹತ್ಯೆ ಎಂದುಕೊಂಡ ಪೊಲೀಸರು ಮುತುವರ್ಜಿವಹಿಸಿ ಸತತ ಮೂರು ತಿಂಗಳ ತನಿಖೆ ಮಾಡಿದ ಬಳಿಕ ಕೊಲೆ‌ಮಾಡಿದ ಬಗ್ಗೆ ದೃಢಪಡಿಸಿಕೊಂಡು ಕೊಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲ ಸತ್ಯಾಂಶಗಳು ಹೊರ ಬರುತ್ತವೆ.

ಇದನ್ನೂ ಓದಿ : ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಆಮೆಗತಿಯಲ್ಲಿ ತನಿಖೆ; ಆಸಕ್ತಿ ಕಳೆದುಕೊಂಡರಾ ಪೊಲೀಸರು?

ಸದ್ಯ ಕೊಲೆ ಮಾಡಿದ ಐವರು ಕಂಬಿ ಹಿಂದೆ ಇದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ಜೂಲಿಕಟ್ಟಿ ಅವರ ವಿಶೇಷ ತನಿಖೆಯಿಂದ ಪ್ರಕಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
 
First published: November 27, 2019, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading