ಮೌಢ್ಯಕ್ಕೆ ಸೆಡ್ಡು ಹೊಡೆದ ಯುವಕ-ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶರಣು ಶರಣು ಬರಗಲ್

news18
Updated:August 1, 2018, 3:07 PM IST
ಮೌಢ್ಯಕ್ಕೆ ಸೆಡ್ಡು ಹೊಡೆದ ಯುವಕ-ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶರಣು ಶರಣು ಬರಗಲ್
news18
Updated: August 1, 2018, 3:07 PM IST
- ಮಹೇಶ ವಿ.ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ (ಆಗಸ್ಟ್ .01 ):  ಹುಟ್ಟುಹಬ್ಬವೆಂದರೆ ಸಾಕು ಅದ್ದೂರಿಯಾಗಿ ಆಚರಿಸಿಕೊಳ್ಳುವುದು ಸಾಮಾನ್ಯ.  ಮನೆ, ಮಠ, ಹೊಟೇಲು ಹಾಗೂ ಇನ್ನತರೆ ಕಲ್ಯಾಣ ಮಂಟಪಗಳಲ್ಲಿ ಜನ್ಮದಿಗಳನ್ನು ಆಚರಿಸುವುದು ಮಾಮೂಲು.  ಆದರೆ. ವಿಜಯಪುರದ ಯುವಕಯೊಬ್ಬ ತನ್ನ ಜನ್ಮದಿನವನ್ನು ಸ್ಮಶಾನದಲ್ಲಿ ಆಚರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಲಘಾಣದ ಯುವಕ ಶರಣು ಬರಗಲ್ ತನ್ನ 25ನೇ ಜನ್ಮದಿನವನ್ನು ಗ್ರಾಮದ ಪಕ್ಕದಲ್ಲಿರುವ ಸ್ಮಶಾನದಲ್ಲಿ ಆಚರಿಸಿಕೊಂಡಿದ್ದಾನೆ.  ನಾನಾ ದಲಿತ ಸಂಘಟನೆಗಳ ಕಾರ್ಯಕರ್ತರ ಸಮ್ಮುಖದಲ್ಲಿ ರುದ್ರಭೂಮಿಯಲ್ಲಿಯೇ ಕ್ಯಾಂಡಲ್ ಹಚ್ಚಿ ಕೇಕ್ ಕತ್ತರಿಸಿದ್ದಾನೆ.

ಅಷ್ಟೇ ಅಲ್ಲ, ಸ್ಮಶಾನದಲ್ಲಿಯೇ ಅಡುಗೆ ತಯಾರಿಸಿ ತನ್ನ ಜನ್ಮದಿನಕ್ಕೆ ಬಂದವರಿಗೆ ಬಡಿಸಿ ಊಟ ಮಾಡಿಸಿದ್ದಾನೆ. ಈ ಮೂಲಕ ಸ್ಮಶಾನವೆಂದರೆ ಹೆದರುವ ಜನರಲ್ಲಿರುವ ಮೌಢ್ಯವನ್ನು ತೊಲಗಿಸಲು ವಿನೂತನ ಪ್ರಯೋಗ ಮಾಡಿದ್ದಾನೆ

ಮೌಢ್ಯಕ್ಕೆ ಸೆಡ್ಡು ಹೊಡೆದದ ಜನ್ಮದಿನ ಆಚರಿಸಿಕೊಂಡ ಯುವಕನಿಗೆ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿದ್ದ ದಲಿತ ಸಂಘಟನೆಗಳ ಮುಖಂಡ ವೈ. ಸಿ. ಮಯೂರ ಹಾಗೂ ಸ್ನೇಹಿತರು ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಅಲ್ಲದೇ, ಈತನ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಸಿಂದಗಿ ತಾಲೂಕಿನ ದಲಿತ ಮುಖಂಡರು ಹಾಗೂ ಮಲಘಾಣ ತಾಲೂಕು ಪಂಚಾಯಿತಿ ಸದಸ್ಯ ಶಾಂತಗೌಡ ಸೇರಿದಂತೆ ಸುಮಾರು 250 ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಕೋರಿದರು

ದಲಿತ ಸಂಘಟನೆ ಗ್ರಾಮ ಘಟಕದ ಮುಖಂಡನೂ ಆಗಿರುವ ಈ ಯುವಕ ಕೂಲಿ ಕಾರ್ಮಿಕನಾಗಿದ್ದಾನೆ. ತಾನು ಈ ರೀತಿ ಜನ್ಮದಿನ ಆಚರಿಸಿಕೊಳ್ಳಲು ಪ್ರಮುಖ ಕಾರಣ, ಬುದ್ಧ, ಬಸವ ಮತ್ತು ಅಂಬೇಡ್ಕರ ತತ್ವಗಳನ್ನು ಜಗತ್ತಿಗೆ ಸಾರುವುದು. ಮೌಢ್ಯಗಳನ್ನು ತೊಲಗಿಸುವುದು ಎಂದು ಹೇಳಿರುವುದು ಈತನ ಸಮಾಜ ಪರ ಚಿಂತನೆಗೆ ಸಾಕ್ಷಿಯಾಗಿದೆ.
Loading...

 

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...