• Home
  • »
  • News
  • »
  • state
  • »
  • Shivamogga: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

Shivamogga: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಶೋಕ್ ಪ್ರಭು ಮುಖದ ಭಾಗಕ್ಕೆ ಗಾಯವಾಗಿದೆ. ದುಷ್ಕರ್ಮಿಗಳು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಅಶೋಕ್ ಪ್ರಭು ಮಾಹಿತಿ ನೀಡಿದ್ದಾರೆ. ಅಶೋಕ್ ಪ್ರಭು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  • News18 Kannada
  • Last Updated :
  • Shimoga, India
  • Share this:

ಕಲ್ಲು ತೂರಾಟದ (Stone Pelting) ಬಳಿಕ ಶಾಂತವಾಗಿರುವ  ಶಿವಮೊಗ್ಗದಲ್ಲಿ (Shivamogga) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಹರಿತವಾದ ವಸ್ತುವಿನಿಂದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದ  ಸಮೀಪದ ರಾಯಲ್ ಆರ್ಕೇಡ್ ಹೋಟೆಲ್ ಬಳಿ ಭಾನುವಾರ ರಾತ್ರಿ ಘಟನೆ ನಡೆದಿತ್ತು. ಸದ್ಯ ಗಾಯಾಳು ಅಶೋಕ್​ ಪ್ರಭು ಎಂಬವರನ್ನು ಮೆಗ್ಗಾನ್ ಆಸ್ಪತ್ರೆಗೆ (Hospital) ಶಿಫ್ಟ್ ಮಾಡಲಾಗಿದೆ. ಸುಮಾರು ನಾಲ್ಕು ಜನರ ಗುಂಪಿನಿಂದ ಈ ದಾಳಿ ನಡೆದಿದೆ. ದುಷ್ಕರ್ಮಿಗಳ ಗುಂಪು ಮೊದಲೇ ರಸ್ತೆಯಲ್ಲಿ ನಿಂತುಕೊಂಡಿತ್ತು. ಈ ವೇಳೆ ಅಶೋಕ್ ಪ್ರಭು ಮೇಲೆ ದಾಳಿ ನಡೆಸಿದ್ದಾರೆ. ಅಶೋಕ್ ಪ್ರಭು ಕೆಳಗೆ ಬೀಳುತ್ತಿದ್ದಂತೆ ಮೊಬೈಲ್ ಕಿತ್ತುಕೊಳ್ಳಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ಅಶೋಕ್ ಪ್ರಭು ಪ್ರತಿರೋಧ ಒಡ್ಡಿದಾಗ ಹರಿತವಾದ ವಸ್ತುವಿನಿಂದ ದಾಳಿ ನಡೆಸಿದ್ದಾರೆ. ಕೊನೆಗೆ ಅಶೋಕ್ ಪ್ರಭು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ.


ಅಶೋಕ್ ಪ್ರಭು ಮುಖದ ಭಾಗಕ್ಕೆ ಗಾಯವಾಗಿದೆ. ದುಷ್ಕರ್ಮಿಗಳು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಅಶೋಕ್ ಪ್ರಭು ಮಾಹಿತಿ ನೀಡಿದ್ದಾರೆ. ಅಶೋಕ್ ಪ್ರಭು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು


ಮೃತ ಹಿಂದೂ ಕಾರ್ಯಕರ್ತ ಹರ್ಷ (Hindu Activist Harsha) ಸೋದರಿ ಅಶ್ವಿನಿ ಸೇರಿದಂತೆ 15 ಜನರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ (Doddapet, Shivamogga) ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ. ಅಕ್ಟೋಬರ್ 22ರಂದು ಶಿವಮೊಗ್ಗ ನಗರದಲ್ಲಿ ವೀರ ಸಾವರ್ಕರ್ ಸಾಮ್ರಾಜ್ಯ (Veer Savarkar Program) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ (Veer Savarkar Grand Son Sathyaki) ಆಗಮಿಸಿದ್ದರು.


ಇದನ್ನೂ ಓದಿ:  Boy Death: ಗಲ್ಲಿಗೇರುವ ಸೀನ್‌ ಅಭ್ಯಾಸದ ವೇಳೆ ನಡೆಯಿತು ದುರಂತ, ಭಗತ್ ಸಿಂಗ್ ಪಾತ್ರ ಮಾಡಿದ್ದ ವಿದ್ಯಾರ್ಥಿ ಸಾವು!


ಕಾರ್ಯಕ್ರಮ ಹಿನ್ನೆಲೆ ನಗರದಲ್ಲಿ ಬೈಕ್ ಜಾಥಾ (Bike Rally) ಸಹ ಆಯೋಜಿಸಲಾಗಿತ್ತು. ಬೈಕ್ ಜಾಥಾ ವೇಳೆ ಸೈಯದ್ ಫರ್ವೇಜ್ ಎಂಬವರ ಕಾರ್​ ಗೆ ಹಾನಿಯುಂಟ ಮಾಡಲಾಗಿದೆಯಂತೆ. ಈ ಸಂಬಂಧ ಸೈಯದ್ ಫರ್ವೇಜ್ ನೀಡಿದ ದೂರಿನ ಆಧಾರದ ಮೇಲೆ 15 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಹರ್ಷ ಸೋದರಿ ಸಹ ಭಾಗಿಯಾಗಿದ್ದರು.


ಶಾಸಕರ ಹೆಸರು ಬರೆದು ಆತ್ಮಹತ್ಯೆ ಯತ್ನ


ಧಾರವಾಡದಲ್ಲಿ ಮಹಿಳೆಯೊಬ್ಬರು ಶಾಸಕ ಅರವಿಂದ ಬೆಲ್ಲದ್ (MLA Arvind Bellad) ಹೆಸರನ್ನು ಡೆತ್ನೋಟ್ನಲ್ಲಿ (Deathnote) ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಶಕುಂತಲಾ ಮನಸೂರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.


ಇನ್ನು ಶಕುಂತಲಾ ಕಿರಿಯ ಸಹಾಯಕಿಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದಾರೆ. ಆದ್ರೆ ಕಳೆದ 4 ತಿಂಗಳ ಹಿಂದೆ ಶಕುಂತಲಾ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲಸದಿಂದ ತೆಗೆದಿದ್ದಕ್ಕೆ ಶಾಸಕ ಬೆಲ್ಲದಗೆ ಮನವಿ ಮಾಡಲು ಶಕುಂತಲಾ ಮುಂದಾಗಿದ್ರು. ಈ ವೇಳೆ ಶಾಸಕರು ನನಗೇ ಅಪಮಾನ ಮಾಡಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಶಾಸಕರೇ ನನ್ನನ್ನು ಕೆಲಸದಿಂದ ತೆಗೆಸಿದ್ದಾರೆ ಎಂದು ಆರೋಪಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.


ಇದನ್ನೂ ಓದಿ:  Chitradurga: ಸೆಲ್ಫಿ ವಿಡಿಯೋ ಮಾಡಿ ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ; ಭಗತ್ ಸಿಂಗ್ ಪಾತ್ರಾಭಿನಯ ತಂದ ಸಾವು


ಇನ್ನು ತಮ್ಮ ವಿರುದ್ಧದ ಆರೋಪಕ್ಕೆ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಾನೇನು ಹೇಳಲ್ಲ, ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Published by:Mahmadrafik K
First published: