Hijab Controversy: ಈ ಎರಡು ದಿನಗಳಾದ್ರೂ ಹಿಜಾಬ್‌ಗೆ ಅವಕಾಶ ಕೊಡಿ ಎಂದ ವಕೀಲರು, ಹೈಕೋರ್ಟ್ ಹೇಳಿದ್ದೇನು?

ಹಿಜಾಬ್ ಕುರಿತ ಅರ್ಜಿ ವಿಚಾರಣೆ ನಿನ್ನೆ ಕೂಡ ಹೈಕೋರ್ಟ್‌ನಲ್ಲಿ ನಡೆದಿತ್ತು. ರಾಜ್ಯದ ಮುಸ್ಲಿಂ ಯುವತಿಯರ ಪರವಾಗಿ ಅರ್ಜಿ ಸಲ್ಲಿಸಿರುವ ಡಾ. ವಿನೋದ್‌ ಕುಲಕರ್ಣಿ, ಕಡೆಯ ಪಕ್ಷ ಶುಕ್ರವಾರ ಮತ್ತು ಸದ್ಯದಲ್ಲೇ ಬರುವಂತಹ ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಯುವತಿಯರಿಗೆ ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಹೈಕೋರ್ಟ್‌ ಹೇಳಿದ್ದೇನು? ಇಂದು ಮಧ್ಯಾಹ್ನ ಅರ್ಜಿ ವಿಚಾರಣೆ ಏನಾಗಲಿದೆ? ಈ ಬಗ್ಗೆ ವಿವರ ಇಲ್ಲಿದೆ.

ಕರ್ನಾಟಕ ಹೈಕೋರ್ಟ್​​

ಕರ್ನಾಟಕ ಹೈಕೋರ್ಟ್​​

 • Share this:
  ಬೆಂಗಳೂರು: ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಹಿಜಾಬ್‌ (Hijab) ವಿಚಾರದ ಜಂಜಾಟ ಸದಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹಿಜಾಬ್‌ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ (Court) ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ಶುಕ್ರವಾರ (Friday) ಮತ್ತು ಪವಿತ್ರ ರಂಜಾನ್‌ (Ramzan) ತಿಂಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕೆಂದು ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯೊಂದು (New Petition) ಸಲ್ಲಿಸಲಾಗಿದೆ. ಹಿಜಾಬ್‌ ಧರಿಸುವ ವಿಚಾರದ ಕುರಿತು ವಿಚಾರಣೆ ನಡೆಯುತ್ತಿರುವ ಕಾರಣ ಹೈಕೋರ್ಟ್‌ ಅಂತಿಮ ತೀರ್ಪು ನೀಡುವವರೆಗೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಅಥವಾ ಕೇಸರಿ ಶಾಲುಗಳನ್ನು ಧರಿಸುವಂತಿಲ್ಲ ಎಂದು ಹೈಕೋರ್ಟ್‌ ಮಧ್ಯಂತರ ತೀರ್ಪು ನೀಡಿದೆ. ಈ ನಡುವೆ ರಾಜ್ಯದ ಮುಸ್ಲಿಂ ಯುವತಿಯರ ಪರವಾಗಿ ಅರ್ಜಿ ಸಲ್ಲಿಸಿರುವ ಡಾ. ವಿನೋದ್‌ ಕುಲಕರ್ಣಿ, ಕಡೆಯ ಪಕ್ಷ ಶುಕ್ರವಾರ ಮತ್ತು ಸದ್ಯದಲ್ಲೇ ಬರುವಂತಹ ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಯುವತಿಯರಿಗೆ ಹಿಜಾಬ್‌ ಧರಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಹೀಗಾಗಿ ಇಂದಿನ ಹೈಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. 

  ಹಿಜಾಬ್ ಧರಿಸಲು ಅವಕಾಶ ನೀಡಿ

  ಈ ವಾದವನ್ನು ಆಲಿಸಿದ ನ್ಯಾಯಮೂರ್ತಿ ರಿತುರಾಜ್‌ ಆವಸ್ಥಿ, ಮುಸ್ಲಿಂ ಯುವತಿಯರು ಸೂಚಿಸಿರುವ ಮನವಿಯು ಸಮವಸ್ತ್ರ ಧರಿಸುವ ವಿಚಾರಕ್ಕೆ ವಿರುದ್ಧವಾಗಿದೆ ಎಂದರು. ಈ ವೇಳೆ ಖುದ್ದು ವಾದ ಮಂಡಿಸಿದ ಡಾ. ಕುಲಕರ್ಣಿ, ಹಿಜಾಬ್‌ ಸಮವಸ್ತ್ರದ ಭಾಗವಾಗಿದ್ದು, ಯಾವುದೇ ಕಾರಣಕ್ಕೂ ಹಿಜಾಬ್‌ ನಿಷೇಧಿಸಬಾರದು ಎಂದರು.

  ಒಂದೊಮ್ಮೆ ಹಿಜಾಬ್‌ ಧರಿಸುವುದನ್ನು ನಿಷೇಧಿಸಿದರೆ ಅದು ಕುರಾನ್‌ ಅನ್ನೇ ನಿಷೇಧಿಸಿದಂತೆ ಎಂದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ಈ ವಿಚಾರವನ್ನು ಹೆಚ್ಚಾಗಿ ಎಳೆಯಲಾಗುತ್ತಿದೆ ಎಂದು ಪ್ರತಿಪಾದಿಸಿದರು.

  ಎರಡು ದಿನ ಧರಿಸಲಾದರೂ ಅವಕಾಶ ನೀಡಿ

  ಸದ್ಯ ಕುರಾನ್‌ನಲ್ಲಿ ಹಿಜಾಬ್‌ ಅನ್ನು ಶಿಫಾರಸ್ಸು ಮಾಡಲಾಗಿದೆಯೇ ಎಂಬ ಕುರಿತಂತೆ ಚರ್ಚೆ ನಡೆಯುತ್ತಿದೆ. ಕುರಾನ್‌ನಲ್ಲಿ ಹಿಜಾಬ್‌ ವಿಚಾರದ ಬಗ್ಗೆ ಎಲ್ಲಿ ಹೇಳಲಾಗಿದೆ ಎಂಬುದನ್ನು ತೋರಿಸಬಹುದೇ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.

  ಇದನ್ನೂ ಓದಿ: ಮೂರು ವರ್ಷದಿಂದ Hijab ಧರಿಸಿ ಪಾಠ ಮಾಡಿದ್ದೇನೆ, ಈಗ ತೆಗೆಯಲು ಸಾಧ್ಯವಿಲ್ಲ: ರಾಜೀನಾಮೆ ನೀಡಿದ ಉಪನ್ಯಾಸಕಿ: ಕುಂಕುಮ ಹಚ್ಚಿದ ವಿದ್ಯಾರ್ಥಿಗೆ ತಡೆ

  ಇದಕ್ಕೆ ಉತ್ತರಿಸಿದ ಡಾ. ಕುಲಕರ್ಣಿ, ನಾನು ಧರ್ಮನಿಷ್ಠ ಬ್ರಾಹ್ಮಣನಾಗಿದ್ದು, ನನ್ನ ಸಲ್ಲಿಕೆಯ ವಿಚಾರ ಕುರಾನ್‌ನಲ್ಲಿ ಇಲ್ಲದಿರಬಹುದು. ಆದರೆ ಶುಕ್ರವಾರ ಮತ್ತು ರಂಜಾನ್‌ ಸಂದರ್ಭದಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವ ಬಗ್ಗೆ ಆದೇಶ ನೀಡಿ ಎಂಬುದು ನನ್ನ ಸಲ್ಲಿಕೆಯಾಗಿದೆ ಎಂದರು.

  ಅರ್ಜಿ ವಿಚಾರಣೆ ಮುಂದೂಡಿದ್ದ ಕೋರ್ಟ್

  ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಶುಕ್ರವಾರದಂದು ಮುಸ್ಲಿಂ ಯುವತಿಯರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡಲು ಅನುಮತಿ ನೀಡಬೇಕೆಂದು ನೀವು ಬಯಸುತ್ತೀರಾ, ನಿಮ್ಮ ವಾದವನ್ನು ನಾವು ಪರಿಗಣಿಸುತ್ತೇವೆ ಎಂದು ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.

  ಹಿಜಾಬ್ ಗಲಾಟೆ ಸದ್ಯಕ್ಕೆ ನಿಲ್ಲುತ್ತಿಲ್ಲ

  ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವ ಕುರಿತು ಎದ್ದಿರುವ ವಿವಾದ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಈಗಾಗಲೇ ಈ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸುವ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿದ್ದು, ನ್ಯಾಯಾಲಯ ಸಹ ಈ ಅರ್ಜಿಗಳ ವಿಚಾರಣೆ ನಡೆಸುತ್ತಿವೆ.

  ಇದರ ನಡುವೆ ಶುಕ್ರವಾರ ಮತ್ತು ರಂಜಾನ್‌ ತಿಂಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಹೊಸ ಅರ್ಜಿ ಸಲ್ಲಿಕೆ ಆಗಿರುವುದು ಹಿಜಾಬ್‌ ವಿಚಾರವಾಗಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ.

  ಇದನ್ನೂ ಓದಿ: Temple bells: ದೇವಸ್ಥಾನಕ್ಕೆ ಘಂಟೆ, ಜಾಗಟೆ ಸದ್ದಿಗೆ ನೀಡಿದ್ದ ನೋಟಿಸ್ ವಾಪಸ್: ಗೃಹಸಚಿವ ಆರಗ ಜ್ಞಾನೇಂದ್ರ ಮಾಹಿತಿ

  ಹಿಜಾಬ್ ಪರ-ವಿರೋಧ ಚರ್ಚೆ

  ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ವಿಚಾರವಾಗಿ ಈಗಾಗಲೇ ರಾಜ್ಯದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ದೊಡ್ಡಮಟ್ಟದ ಚರ್ಚೆಗೆ ಕಾರಣ ಆಗಿರುವ ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದಾರೆ.

  ಸದ್ಯ ಈ ವಿವಾದ ನ್ಯಾಯಾಲಯದಲ್ಲಿರುವ ಪರಿಣಾಮ ಹಿಜಾಬ್‌ ವಿವಾದಕ್ಕೆ ತಾತ್ಕಾಲಿಕ ತೆರೆಬಿದ್ದಂತಾಗಿದ್ದು, ಬೂದಿಮುಚ್ಚಿದ ಕೆಂಡದಂತಿದೆ.
  Published by:Annappa Achari
  First published: