• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hubballi: ಈದ್ಗಾ ಮೈದಾನದಲ್ಲಿ ಕಾಮಣ್ಣನಿಗೆ ಸಿಗದ ಅನುಮತಿ, ಹಿಂದೂ ಸಂಘಟನೆಗಳ ಆಕ್ರೋಶ

Hubballi: ಈದ್ಗಾ ಮೈದಾನದಲ್ಲಿ ಕಾಮಣ್ಣನಿಗೆ ಸಿಗದ ಅನುಮತಿ, ಹಿಂದೂ ಸಂಘಟನೆಗಳ ಆಕ್ರೋಶ

ಈದ್ಗಾ ಮೈದಾನ

ಈದ್ಗಾ ಮೈದಾನ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಿಸಲಾಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ದಿನದ ಮಟ್ಟಿಗಾದ್ರೂ ಮೂರ್ತಿ ಪ್ರತಿಷ್ಠಾಪನೆ ಮಾಡ್ತಿವಿ ಅಂತ ಪಟ್ಟು ಹಿಡಿದಿದ್ದು, ಈದ್ಗಾದ ಸುತ್ತ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ(ಮಾ.10): ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಕೊನೆಗೂ ಅನುಮತಿ ಸಿಕ್ಕಿಲ್ಲ. ಮೋದಿ ಕಾರ್ಯಕ್ರಮ, ಭದ್ರತೆ ಕಲ್ಪಿಸೋ ವಿಚಾರ ಇತ್ಯಾದಿಗಳನ್ನು ಮುಂದಿಟ್ಟು ಅನುಮತಿ ನಿರಾಕರಿಸಲಾಗಿದೆ. ಆದರೆ ಒಂದು ದಿನದ ಮಟ್ಟಿಗೆ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ.


ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಹಗ್ಗ ಜಗ್ಗಾಟ ತಾರ್ಕಿಕ ಅಂತ್ಯ ಕಂಡಿಲ್ಲ. ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಅನುಮತಿ ನಿರಾಕರಿಸಿದ್ದು, ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು. ಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಪೊಲೀಸ್ ಆಯುಕ್ತ ರಮಣ್ ಗುಪ್ತಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು. ಅರ್ಜಿಯನ್ನು ಪರಿಶೀಲಿಸಿದ ನಂತರ ಅನುಮತಿ ನೀಡಲು ನಿರಾಕರಿಸಲಾಗಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.


ಇದನ್ನೂ ಓದಿ: Holi 2023: ಇವರೇ ಚಿಗುರು ಮೀಸೆಯ ಮನ್ಮಥ, ಸುಂದರ ಕಾಂತಿಯ ರತಿಯ ಸೃಷ್ಟಿಕರ್ತರು!


ಸಭೆಯ ನಂತರ ಮಾತನಾಡಿದ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜಯ ಬಡಸ್ಕರ್, ಪಾಲಿಕೆ ಮತ್ತು ಪೊಲೀಸ್ ಆಯುಕ್ತರ ವಿರುದ್ಧ ಕಿಡಿಕಾರಿದರು. ನಮ್ಮ ಹಿರಿಯ ನಾಯಕರ ನಿರ್ದೇಶನ ಮೇರೆಗೆ ಕಾಮಣ್ಣ ಪ್ರತಿಷ್ಠಾನೆಗೆ ಅರ್ಜಿ ಸಲ್ಲಿಸಿದ್ದೆವು. ಪಾಲಿಕೆ ಮೇಯರ್ ಅನುಮತಿ ನೀಡಿದ್ದರು. ಆದರೆ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ.




ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅರ್ಜಿ ವಾಪಸ್ ಪಡೆಯಲು ಹೇಳಿದ್ದಾರೆ. ಆದರೆ ನಾವು ಒಂದು ದಿನವಾದರೂ ಪ್ರತಿಷ್ಠಾನೆ ಮಾಡುತ್ತೇವೆ. ಮಾರ್ಚ್ 11 ರೊಳಗೆ ಒಂದು ದಿನ ಅವಕಾಶ ಕೇಳಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವಿಫಲವಾಗಿದೆ. ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿಯೇತೀರ್ತೇವೆ ಎಂದು ಎಚ್ಚರಿಸಿದರು.


ಇದೇ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗಾಗಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಮನವಿ ಕೊಟ್ಟಿತ್ತು. ಸೂಕ್ತ ಬಂದೋಬಸ್ತ ಕಲ್ಪಿಸಲು ಆಗದ ಕಾರಣ ನಾವು ಅನುಮತಿ ಕೊಟ್ಟಿಲ್ಲ. ಮೋದಿ ಬರೋ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಅರ್ಜಿಯನ್ನು ಪರಿಗಣಿಸಿಲ್ಲ. ಮೇಯರ್ ಅವರು ಸದಸ್ಯರೊಂದಿಗೆ ಚರ್ಚೆ ಮಾಡಿ ಅವರ ನಿಲುವು ಹೇಳಿದ್ದಾರೆ. ಆದ್ರೆ ಅಂತಿಮವಾಗಿ ಆಯುಕ್ತರೇ ಅನುಮತಿ ಕೊಡಬೇಕಾದವರು. ಭದ್ರತಾ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಮೋದಿ ಕಾರ್ಯಕ್ರಮ ಬಂದೋಬಸ್ತ್ ಗಾಗಿ ಪೊಲೀಸ್ ಸಿಬ್ದಂದಿ ಧಾರವಾಡಕ್ಕೆ ಹೋಗ್ತಾರೆ. ಅಲ್ಲದೆ ಮನವಿ ತಡವಾಗಿ ಕೊಟ್ಟಿರೋದ್ರಿಂದ ಪರಿಗಣಿಸಲಾಗಿಲ್ಲ. ನನಗೆ ಯಾವುದೇ ರಾಜಕೀಯ ನಾಯಕರು ಒತ್ತಡ ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಇದನ್ನೂ ಓದಿ: ಮದುವೆ, ಮಕ್ಕಳು ಆಗದಿದ್ರೆ ತಪ್ಪದೇ ಕಾಮಣ್ಣನ ಆಶೀರ್ವಾದ ಪಡೆಯಿರಿ! ಈ ಊರಲ್ಲಿದೆ ದೇಗುಲ


ಇದೇ ವೇಳೆ ಮಾತನಾಡಿದ ಪೊಲೀಸ್ ಕಮೀಷನರ್ ರಮಣ್ ಗುಪ್ತಾ, ಆಯೋಜಕರು ಕನಿಷ್ಠ 10 ದಿನ ಮೊದಲೇ ಮನವಿ ಕೊಡಬೇಕಿತ್ತು. ಏಕಾಏಕಿ ಕೊಟ್ಟಿರೋದ್ರಿಂದ ಬಂದೋ ಬಸ್ತ್ ಗೆ ಸಮಸ್ಯೆಯಾಗ್ತಿದೆ. ಮೊದಲೇ ಮನವಿ ಕೊಟ್ಟಿದ್ರೆ, ಎಲ್ಲೆಲ್ಲಿ ಪೊಲೀಸ್ ನಿಯೋಜನೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡ್ತಿದ್ವಿ. ಈಗಾಗಲೇ ನಗರದಲ್ಲಿ 472 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದ್ರೆ ಇವೆಲ್ಲ ಒಂದೇ ದಿನ ಪ್ರತಿಷ್ಠಾಪನೆ ಆಗಿವೆ. ನಮ್ಮ ಪೊಲೀಸ್ ಸಿಬ್ಬಂದಿ ಡಿವೈಡ್ ಆಗಿದೆ. ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕೆಲವು ಮಾಹಿತಿ ಬಂದಿವೆ. ಕಾನೂನು ಸುವ್ಯವಸ್ಥೆ ವಿಚಾರವಾಗಿ ಮಾಹಿತಿ ಬಂದಿದೆ. ಗುಪ್ತಚರ ಇಲಾಖೆ ಮೂಲಗಳ ಮಾಹಿತಿ ಬಂದಿದೆ. ಹೀಗಾಗಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡ್ತಿಲ್ಲ ಎಂದಿದ್ದು, ಆಯುಕ್ತರ ಹೇಳಿಕೆ ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಒಂದು ದಿನ ಆಗಲಿ, ಒಂದು ಕ್ಷಣ ಆಗಲಿ ಅಷ್ಟೇ ಬಂದೋಬಸ್ತ್ ಮಾಡಬೇಕಾಗುತ್ತೆ. ಹೀಗಾಗಿ ಅವಕಾಶ ಕೊಡ್ತಿಲ್ಲ ಎಂದ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



ಒಟ್ಟಾರೆ ಮೇಯರ್ ಈರೇಶ ಅಂಚಟಗೇರಿ ಹೆಳಿಕೆಯಿಂದ ಅನುಮತಿ ಸಿಕ್ಕಿಯೇ ಬಿಟ್ಟಿತೆಂದು ಕಾಮಣ್ಣ ಪ್ರತಿಷ್ಠಾಪನೆಗೆ ಮುಂದಾಗಿದ್ದವರಿಗೆ ತೀವ್ರ ನಿರಾಸೆಯಾಗಿದೆ. ಇಷ್ಟರ ನಡುವೆಯೂ ರಂಗ ಪಂಚಮಿ ಮುಗಿಯುವುದರೊಳಗಾಗಿ ಒಂದು ದಿನದ ಮಟ್ಟಿಗಾದ್ರೂ ಕಾಮಣ್ಣ ಪ್ರತಿಷ್ಠಾಪನೆ ಮಾಡುವುದಾಗಿ ಎಚ್ಚರಿಸಿದ್ದು, ಈದ್ಗಾ ಮೈದಾನದ ಸುತ್ತ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

Published by:Precilla Olivia Dias
First published: