ಬೆಳಗಾವಿ ಜಿಲ್ಲೆಯ ಪ್ರಮುಖ ನದಿಗಳ ಒತ್ತುವರಿ ಸಮೀಕ್ಷೆ ಬಳಿಕ ಶಾಶ್ವತ ಯೋಜನೆ; ಸಚಿವ ರಮೇಶ ಜಾರಕಿಹೊಳಿ

ನದಿಗಳ ಒತ್ತುವರಿಯಿಂದ ಸತತ ಎರಡು ವರ್ಷಗಳಿಂದ ಪ್ರವಾಹ ಸೃಷ್ಠಿಯಾಗಿದೆ. ಇದರಿಂದ ರಾಮದುರ್ಗ, ಗೋಕಾಕ್ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ

ಸಚಿವ ರಮೇಶ್ ಜಾರಕಿಹೊಳಿ

  • Share this:
ಬೆಳಗಾವಿ(ಸೆಪ್ಟೆಂಬರ್20): ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಎರಡು ವರ್ಷಗಳಿಂದ ಪ್ರವಾಹ  ಉಂಟಾಗಿದೆ. ಇದರಿಂದ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮನೆ, ಬೆಳೆಗಳ ಹಾನಿ ಸಂಭವಿಸಿದೆ. ಇದೀಗ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಚಿವ ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ. ಜಿಲ್ಲೆಯ ಪ್ರಮುಖ ನದಿಗಳ ಒತ್ತುವರಿ ಸಮೀಕ್ಷೆಗೆ ಮುಂದಾಗಿದ್ದು, ಒಂದು ಮೊದಲ ಸಭೆಯನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ, ಘಟಪ್ರಭಾ ಹಿರಣ್ಯಕೇಶಿ, ಮಾರ್ಕಂಡಯ್ಯ ಹಾಗೂ ಬಳ್ಳಾರಿ ನಾಲಾಗಳ ಸಮೀಕ್ಷೆಗೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನಿರ್ಧರಿಸಿದ್ದಾರೆ. ಇಂದು ಈ ಬಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ಸಭೆಯನ್ನು ನಡೆಸಲಾಯಿತು. ಸಮಗ್ರ ಸಮೀಕ್ಷೆಯ ಬಳಿಕ ಮುಖ್ಯಮಂತ್ರಿಗಳ ಜತಗೆ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ನದಿಗಳ ಸರ್ವೆ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ಡ್ರೋನ್ ಮೂಲಕ ಮೊದಲ ಹಂತದ ಸರ್ವೆ ಕಾರ್ಯ ಮಾಡಬೇಕಿದೆ. ಅರಣ್ಯ, ಕಂದಾಯ ಹಾಗೂ ವಿವಿಧ ಇಲಾಖೆಗಳ ಒಳಗೊಂಡ ಸಮಿತಿಯೊಂದನ್ನು ರಚನೆ ಮಾಡಿ ಸರ್ವೆ ಕಾರ್ಯವನ್ನು ನಡೆಸಲು ಸಿದ್ಧತೆಯನ್ನು ನಡೆಸಲಾಗಿದೆ.

ಹಾಸನ: ಎಚ್​​ಡಿ ರೇವಣ್ಣ ಸರ್ವಾಧಿಕಾರಿ ಧೋರಣೆಗೆ ಜೆಡಿಎಸ್​ ಶಾಸಕ ಎಟಿ ರಾಮಸ್ವಾಮಿ ಬೇಸರ

ನದಿಗಳ ಒತ್ತುವರಿಯಿಂದ ಸತತ ಎರಡು ವರ್ಷಗಳಿಂದ ಪ್ರವಾಹ ಸೃಷ್ಠಿಯಾಗಿದೆ. ಇದರಿಂದ ರಾಮದುರ್ಗ, ಗೋಕಾಕ್ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಲಕ್ಷಾಂತರ ಹೆಕ್ಟೇರ್​​​​ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ಸಂತ್ರಸ್ತರು ಇದ್ದಾರೆ.

ಸಭೆಯ ಬಳಿಕ ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಗಳ ಜತೆಗೆ ಮಾತನಾಡಿದರು. ಬೆಳಗಾವಿ ಜಿಲ್ಲೆಯ ನದಿಗಳ ಸರ್ವೆ ಕಾರ್ಯವನ್ನು ಆರಂಭಿಸಲು ಚರ್ಚೆ ನಡೆಸಲಾಗಿದೆ. ವರದಿ ಬಂದ ಬಳಿಕ ಮತ್ತೊಮ್ಮೆ ಜನಪ್ರತಿನಿಧಿಗಳ ಸಭೆಯನ್ನು ನಡೆಸಲಾಗುವುದು. ನಂತರ ಒತ್ತುವರಿ ತೆರವುಗೊಳಿಸಲಾವುದು. ಇದಕ್ಕಾಗಿ ಸಿಎಂ ಜತೆಗೆ ಚರ್ಚೆ ಸಹ ನಡೆಸುತ್ತೇವೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಲಿದೆ. ನದಿಗಳ ಒತ್ತುವರಿಯಿಂದ ಡ್ಯಾಂಗಳ ಮೇಲೆ ಸಹ ದುಷ್ಪರಿಣಾಮ ಬೀರುತ್ತಿದೆ. ಡ್ಯಾಂ ನಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ ಎಂದರು.

ಸಭೆಯಲ್ಲಿ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ, ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್, ಬೆಳಗಾವಿ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಸೇರಿ ಅನೇಕರು ಪಾಲ್ಗೊಂಡಿದ್ದರು.
Published by:Latha CG
First published: