Yallamma Devi: ಮನೆ ಗೋಡೆ ಮೇಲೆ ಮೂಡಿತಂತೆ ಯಲ್ಲಮ್ಮ ದೇವಿ ಮುಖ! ಉಧೋ ಉಧೋ ಎಂದು ಕೈಮುಗಿದ ಗ್ರಾಮಸ್ಥರು

ಗ್ರಾಮದ ಮನೆಯೊಂದರ ಗೋಡೆ (Wall) ಮೇಲೆ ಮೂಡಿದ್ಯಂತೆ. ಇದನ್ನು ನೋಡಿದ ಗ್ರಾಮಸ್ಥರೆಲ್ಲ ದೇವಿ ಪವಾಡ ಅಂತ ಹೇಳುತ್ತಿದ್ದಾರೆ. ಗ್ರಾಮಸ್ಥರು ಇದನ್ನು ನೋಡೋಕೆ ಅಂತ ತಂಡೋಪತಂಡವಾಗಿ ಬಂದು ಉಧೋ ಉಧೋ ಯಲ್ಲಮ್ಮ ಉಧೋ ಅಂತಿದ್ದಾರೆ. ಗ್ರಾಮದ ಮಹಿಳೆಯರು ಗೋಡೆಗೆ ಆರತಿ ಬೆಳಗಿ, ತಾಯಿ ಕಾಪಾಡವ್ವ ಅಂತ ಕೈ ಮುಗಿದಿದ್ದಾರೆ!

ಸವದತ್ತಿ ಯಲ್ಲಮ್ಮ

ಸವದತ್ತಿ ಯಲ್ಲಮ್ಮ

  • Share this:
ಯಾದಗಿರಿ: ಗಣೇಶನ ಮೂರ್ತಿ (Ganesh Statue) ಹಾಲು (Milk) ಕುಡಿಯುವುದು, ಬೇವಿನ ಮರದಿಂದ (neem tree) ಹಾಲು ಬರುವುದು, ಹನುಮಂತನ (Hanuman) ಮೂರ್ತಿ ಕಣ್ಣು ಬಿಡುವುದು, ಸಾಯಿಬಾಬಾ (Sai Baba) ಮೂರ್ತಿಯಿಂದ ವಿಭೂತಿ ಬರುವುದು, ದೇವಿ ಮೂರ್ತಿಯಿಂದ (Devi Statue) ಕಣ್ಣೀರು ಸುರಿಸುವುದು ಇತ್ಯಾದಿ ಸುದ್ದಿಗಳನ್ನು ನೀವು ಕೇಳೇ ಇರುತ್ತೀರಿ. ಇದು ಸತ್ಯವೋ, ಸುಳ್ಳೋ, ದೇವರ ಪವಾಡವೋ, ಮೂಢ ನಂಬಿಕೆಯೋ ಎನ್ನುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಇದೀಗ ಯಾದಗಿರಿಯಲ್ಲೂ (Yadagiri) ಇಂತದ್ದೇ ಪವಾಡ (Miracle) ನಡೆದಿದೆಯಂತೆ. ಯಲ್ಲಮ್ಮ ದೇವಿ (Yallamma Devi) ಮುಖವೊಂದು ಗ್ರಾಮದ ಮನೆಯೊಂದರ ಗೋಡೆ (Wall) ಮೇಲೆ ಮೂಡಿದ್ಯಂತೆ. ಇದನ್ನು ನೋಡಿದ ಗ್ರಾಮಸ್ಥರೆಲ್ಲ ದೇವಿ ಪವಾಡ ಅಂತ ಹೇಳುತ್ತಿದ್ದಾರೆ. ಗ್ರಾಮಸ್ಥರು ಇದನ್ನು ನೋಡೋಕೆ ಅಂತ ತಂಡೋಪತಂಡವಾಗಿ ಬಂದು ಉಧೋ ಉಧೋ ಯಲ್ಲಮ್ಮ ಉಧೋ ಅಂತಿದ್ದಾರೆ. ಗ್ರಾಮದ ಮಹಿಳೆಯರು ಗೋಡೆಗೆ ಆರತಿ ಬೆಳಗಿ, ತಾಯಿ ಕಾಪಾಡವ್ವ ಅಂತ ಕೈ ಮುಗಿದಿದ್ದಾರೆ.

ಗೋಡೆ ಮೇಲೆ ಮೂಡಿತು ಯಲ್ಲಮ್ಮ ದೇವಿ ಮುಖ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಪವಾಡವೊಂದು ನಡೆದಿದ್ಯಂತೆ. ಇಲ್ಲಿನ ಶೇಖಮ್ಮ ಹೆಳವರ ಎಂಬುವರ ಮನೆಯ ಗೋಡೆ ಮೇಲೆ ಚಿಕ್ಕನಹಳ್ಳಿ ಯಲ್ಲಮ್ಮ ದೇವಿ ನೆಲೆಸಿದ್ದಾಳೆ ಎಂಬ ಸುದ್ದಿ ಹಬ್ಬಿದೆ. ಇವರ ಮನೆಯ ಗೋಡೆಯ ಮೇಲೆ ಯಲ್ಲಮ್ಮ ದೇವರ ಚಿತ್ರ ಮೂಡಿದ್ಯಂತೆ.



ವಿಸ್ಮಯ ನೋಡಲು ಮುಗಿಬಿದ್ದ ಗ್ರಾಮಸ್ಥರು

ಶೇಖವ್ವ ಮನೆಯ ಗೋಡೆ ಮೇಲೆ ಯಲ್ಲಮ್ಮ ದೇವಿ ಮುಖ ಮೂಡಿದ್ಯಂತೆ ಎಂಬ ಸುದ್ದಿ ಗ್ರಾಮದಲ್ಲೆಲ್ಲ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿ ಸಿಕ್ಕಿದ್ದೇ ತಡ, ಗ್ರಾಮಸ್ಥರೆಲ್ಲ ತಂಡೋಪತಂಡವಾಗಿ ಶೇಖವ್ವ ಹೆಳವರ್ ಮನೆಗೆ ಬರುತ್ತಿದ್ದಾರೆ. ಬಂದವರು ಗೋಡೆ ನೋಡಿ, ಕೈ ಮುಗಿದು ಉಧೋ ಉಧೋ ಯಲ್ಲವ್ವ ಉಧೋ ಎನ್ನುತ್ತಿದ್ದಾರೆ.

ಇದನ್ನೂ ಓದಿ: Yellamma Devi: ಮಾಟ ಮಾಡಿದವರಿಗೆ ಶಿಕ್ಷೆ ಕೊಟ್ರೆ 50,001 ರೂಪಾಯಿ ಹುಂಡಿಗೆ ಹಾಕ್ತೀನಿ! ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ಮಹಿಳೆಯರಿಂದ ಗೋಡೆಗೆ ಪೂಜೆ

ಇನ್ನು ಅಕ್ಕಪಕ್ಕದ ಮನೆಯ ಮಹಿಳೆಯರು ಶೇಖವ್ವನ ಮನೆಗೆ ಬಂದು, ಗೋಡೆಗೆ ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ, ಊದಿನ ಕಡ್ಡಿ ಹಚ್ಚಿ, ಕರ್ಪೂರ ಬೆಳಗಿ ಪೂಜೆ ಮಾಡಿದ್ದಾರೆ. ಯಲ್ಲವ್ವ ನಮ್ಮನ್ನೆಲ್ಲ ಕಾಪಾಡವ್ವ ಅಂತ ಭಕ್ತಿಯಿಂದ ಬೇಡಿ ಕೊಂಡಿದ್ದಾರೆ.

ಕಾಫಿನಾಡಿನ ಈಚಲು ಮರದಲ್ಲಿ ಗಣೇಶನ ದರ್ಶನ

ಅತ್ತ ಚಿಕ್ಕಮಗಳೂರಿನಲ್ಲಿ ಈಚಲು ಮರದಲ್ಲಿ ಗಣಪ ಉದ್ಭವವಾಗಿರೋದನ್ನ ಕಂಡು ಜನ ಮೂಕವಿಸ್ಮಿತರಾಗಿದ್ದಾರೆ. ನಗರದ ಪಟಾಕಿ ಮೈದಾನದ ಪಕ್ಕದಲ್ಲಿರೋ ಒಂದು ಹೊಲದ ಬಳಿ ಗಣಪನನ್ನೇ ಹೋಲುವ ಸೊಂಡಿಲ, ಕಣ್ಣು, ಕೈಗಳು, ದೇಹ ಎಲ್ಲವನ್ನೂ ನೋಡಿದ ಜನರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ: Tree Ganesha: ಕಾಫಿನಾಡಿನ ಈಚಲು ಮರದಲ್ಲಿ ಗಣೇಶನ ದರ್ಶನ; ವಿಸ್ಮಯ ನೋಡಲು ಮುಗಿಬಿದ್ದ ಜನ

ಗಣಪನನ್ನೇ ಹೋಲುವ ರೂಪ

ಗಣಪನನೇ ಹೋಲುವ ಸೊಂಡಿಲು, ಕಣ್ಣು, ಕೈಗಳು, ದೇಹ ಎಲ್ಲವನ್ನೂ ಕಂಡ ಜನ ಈಚಲು ಮರದಲ್ಲಿ ಗಣಪ ದರ್ಶನ ಕೊಟ್ಟಿರುವುದನ್ನ ಕಂಡು ಸಂತಸಗೊಂಡು ಎಲ್ಲರಿಗೂ ಹೇಳುತ್ತಿದ್ದಾರೆ. ವಿಷಯ ತಿಳಿದವರು ಎಲ್ಲರೂ ಬಂದು ಈ ಈಚಲು ಮರದ ಗಣಪನನ್ನ ನೋಡಿ ಕೈಮುಗಿದು ಬೇಡಿಕೊಳ್ತಿದ್ದಾರೆ. ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದರೂ ಕೂಡ ಎಲ್ಲವೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದ ಉದ್ಭವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತರವಾದ ಭಕ್ತಿಗೆ ಕಾರಣವಾಗಿದೆ.
Published by:Annappa Achari
First published: