ರಾತ್ರಿ ಕಂಡ ಬಾವಿಗೆ, ಹಗಲು ಯಾರೂ ಬೀಳಲ್ಲ, ಶೋಭಾ ಕರಂದ್ಲಾಜೆಗೆ ಜನ ಮತಹಾಕಲ್ಲ; ಮಧ್ವರಾಜ್​

ಶೋಭಾ ಕರಂದ್ಲಾಜೆ ಕ್ಷೇತ್ರದ ಹಾಲಿ ಸಂಸದೆಯಾಗಿದ್ದು, ಈ ಬಾರಿ ಪ್ರಮೋದ್​ ಮಧ್ವರಾಜ್​ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಶೋಭಾ ಕರಂದ್ಲಾಜೆಯವರಿಗೆ ಟಿಕೆಟ್​ ಲಭ್ಯವಾಗುವುದಿಲ್ಲ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು

news18
Updated:April 18, 2019, 9:17 AM IST
ರಾತ್ರಿ ಕಂಡ ಬಾವಿಗೆ, ಹಗಲು ಯಾರೂ ಬೀಳಲ್ಲ, ಶೋಭಾ ಕರಂದ್ಲಾಜೆಗೆ ಜನ ಮತಹಾಕಲ್ಲ; ಮಧ್ವರಾಜ್​
ಶೋಭಾ ಕರಂದ್ಲಾಜೆ-ಪ್ರಮೋದ್​​ ಮಧ್ವರಾಜ್​​
news18
Updated: April 18, 2019, 9:17 AM IST
ಉಡುಪಿ: ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್​ ಮಧ್ವರಾಜ್​ ಮತಚಲಾವಣೆ ಮಾಡಿದ ನಂತರ ಮಾಧ್ಯಮದ ಜತೆ ಮಾತನಾಡಿ ಶೋಭಾ ಕರಂದ್ಲಾಜೆಯವರಿಗೆ ಯಾರೂ ಮತ ಹಾಕುವುದಿಲ್ಲ ಎಂದಿದ್ದಾರೆ. ರಾತ್ರಿ ಕಂಡ ಬಾವಿಗೆ ಹಗಲು ಯಾರೂ ಬೀಳುವುದಿಲ್ಲ. ಅದರಂತೆಯೇ ಶೋಭಾ ಕರಂದ್ಲಾಜೆ ಅವರಿಗೆ ಜನ ಈ ಬಾರಿ ಮತ ಹಾಕುವುದಿಲ್ಲ ಎಂಬ ವಿಶ್ವಾಸವನ್ನು ಪ್ರಮೋದ್​ ಮಧ್ವರಾಜ್​ ಪ್ರದರ್ಶಿಸಿದ್ದಾರೆ.

"ನಾನು ಮೈತ್ರಿ ಅಭ್ಯರ್ಥಿ ಆದಾಗ ಅಪಸ್ವರವಿತ್ತು. ಈಗ ಕಾರ್ಯಕರ್ತರಿಗೆ ಒಳ್ಳೆಯ ನಿರ್ಧಾರ ಎಂಬ ಭಾವನೆ ಬಂದಿದೆ. ಕಾರ್ಯಕರ್ತರು ನಾಯಕರಿಗೆ ಮನವರಿಕೆ ಮಾಡಲಾಗಿದೆ. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಫೀಲ್ಡ್ ವರ್ಕ್ ಆಗಿದೆ. ಎಲ್ಲಾ ಪ್ರಚಾರದಲ್ಲೂ ಮುಂಚೂಣಿಯಲ್ಲಿದ್ದೇವೆ. ಮೋದಿ ಹೆಸರಿನಲ್ಲಿ ಕೆಟ್ಟ ಜನಪ್ರತಿನಿಧಿ ಆಯ್ಕೆ ಮಾಡುವುದರಿಂದ ಅವರಿಗೇ ನಷ್ಟ ಎಂದು ಜನರಿಗೆ ಮನವರಿಕೆಯಾಗಿದೆ," ಎಂದು ಮಧ್ವರಾಜ್​ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಹೆಲಿಕಾಪ್ಟರ್​ ಪರಿಶೀಲಿಸಿ ಅಮಾನತ್ತಾದ ಐಎಎಸ್​ ಅಧಿಕಾರಿ

ಮೈತ್ರಿ ಅಭ್ಯರ್ಥಿಯಾದ ತಮ್ಮ ಚಿಹ್ನೆ ಬಗ್ಗೆ ಮತದಾರರಿಗೆ ಕಾರ್ಯಕರ್ತರು ಮನದಟ್ಟು ಮಾಡಿದ್ದಾರೆ ಎಂದ ಅವರು, ಮೈತ್ರಿ ಧರ್ಮದಲ್ಲಿ ಚೆಹ್ನೆ ಯಾವುದು ಎಂಬುದು ಪ್ರಮುಖವಲ್ಲ ಎಂದಿದ್ದಾರೆ. ಜಾತ್ಯತೀತ ಶಕ್ತಿಗಳು ಒಂದುಗೂಡುವುದು ಮುಖ್ಯ ಎಂದು ಅಭಿಪ್ರಾಯ ಪಟ್ಟ ಅವರು, ಮೊದಲ ಬಾರಿಗೆ ಜೆ.ಡಿ.ಎಸ್ ಚಿಹ್ನೆಗೆ ಮತ ಹಾಕಿರುವುದು ಸಂತೋಷ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ: Lok Sabha Elections 2019: ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ; ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ

ಶೋಭಾ ಕರಂದ್ಲಾಜೆ ಕ್ಷೇತ್ರದ ಹಾಲಿ ಸಂಸದೆಯಾಗಿದ್ದು, ಈ ಬಾರಿ ಪ್ರಮೋದ್​ ಮಧ್ವರಾಜ್​ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಶೋಭಾ ಕರಂದ್ಲಾಜೆಯವರಿಗೆ ಟಿಕೆಟ್​ ಲಭ್ಯವಾಗುವುದಿಲ್ಲ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದರೂ, ಬಿಜೆಪಿ ಹೈಕಮಾಂಡ್​ ಅವರಿಗೇ ಟಿಕೆಟ್​ ನೀಡುವ ಮೂಲಕ ಊಹಾಪೋಹಗಳಿಗೆ ತಡೆಹಾಕಿತ್ತು.
First published:April 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ