ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣ: ಮೈಸೂರಿನಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಮೈಸೂರು ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಗ್ರಾಮಸ್ಥರು ಪ್ರತಿದಿನ ಅನಾರೋಗ್ಯಕ್ಕಿಡಾಗುತ್ತಿದ್ದು ವಾಂತಿ ಭೇದಿ, ಜ್ಚರ ,ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಂದ ಬರೋಬ್ಬರಿ 80 ಜನ ಆಸ್ಪತ್ರೆ ಸೇರಿದ್ದಾರೆ.

news18-kannada
Updated:January 22, 2020, 3:06 PM IST
ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣ: ಮೈಸೂರಿನಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಒಳಚರಂಡಿಯಲ್ಲಿರುವ ಕಲುಷಿತ ನೀರು
  • Share this:
ಮೈಸೂರು(ಜ.22) :  ಮೈಸೂರಿನಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು ತಾಲೂಕಿನ ಕಡಕೊಳ ಗ್ರಾಮದಲ್ಲಿ‌ ಆತಂಕ ಸೃಷ್ಟಿಯಾಗಿದೆ. ಗ್ರಾಮದಲ್ಲಿ ಪ್ರತಿದಿನ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗುತ್ತಿದ್ದಾರೆ. ದಿನೇ ದಿನೇ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಒಂದೆ ರೀತಿಯ ರೋಗ ಲಕ್ಷಣಗಳು ಕಾಣುತ್ತಿದ್ದು, ಪ್ರತಿ ದಿನ 20 ರಿಂದ 30 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಕಡಕೋಳ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಗ್ರಾಮಸ್ಥರು ಪ್ರತಿದಿನ ಅನಾರೋಗ್ಯಕ್ಕಿಡಾಗುತ್ತಿದ್ದು ವಾಂತಿ ಭೇದಿ, ಜ್ಚರ ,ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಂದ ಈಗಾಗಲೇ 80 ಜನ ಆಸ್ಪತ್ರೆ ಸೇರಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ ಕಡಕೋಳ ಗ್ರಾಮದ ಗ್ರಾಮಸ್ಥರು ಮೂರು ದಿನಗಳಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಕಡಕೋಳ ಗ್ರಾಮದ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಜನತಾ ಕಾಲೋನಿಯ ಹೊರವಲಯದಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿ ಪರಿಣಾಮವಾಗಿ ಚರಂಡಿಯ ನೀರಿನ ಜೊತೆ ಒಳಚರಂಡಿಯ ಕಲುಷಿತ ನೀರು ಗ್ರಾಮದ ಎಣ್ಣೆಹೊಳೆಗೆ ಸೇರುತ್ತಿದೆ. ಎಣ್ಣೆಹೊಳೆ ಸಮೀಪದಲ್ಲಿರುವ ತೆರೆದ ಬಾವಿಯಿಂದ ಜನತಾ ಕಾಲೋನಿಗೆ 60 ವರ್ಷಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಇದೀಗ ಒಳಚರಂಡಿ ನೀರು ಅಂತರ್ಜಲದ ಮೂಲಕ ಬಾವಿ ಸೇರಿದೆ.

ಈ ಬಗ್ಗೆ ದೂರು ನೀಡಿ ಜಿಲ್ಲಾ ಪಂಚಾಯಿತ್ ಅಧಿಕಾರಿಗಳು ಇಲ್ಲಿನ‌ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದ್ದರು. ಗ್ರಾಮಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಪರಿಣಾಮ ಕಳೆದ ನಾಲ್ಕೈದು ದಿನದಿಂದ ಪ್ರತಿದಿನ 20 ರಿಂದ  30 ಮಂದಿ ಅನಾರೋಗ್ಯ ತುತ್ತಾಗುತ್ತಿದ್ದು ಎಲ್ಲರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಘಟನೆ ನಂತರ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯ ಪರಿಸರ ಮಾಲಿನ್ಯ ಮಂಡಳಿ‌‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಲುಷಿತ ನೀರಿನಿಂದ ರೋಗ ಉಲ್ಭಣಗೊಳ್ಳುವ ಶಂಕೆ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ‌ ಸ್ಯಾಂಪಲ್ ಸಂಗ್ರಹಿಸಿದ ಅಧಿಕಾರಿಗಳು ಲ್ಯಾಬ್‌ನಿಂದ ತುರ್ತು ವರದಿ ಕೇಳಿದ್ದಾರೆ. ಗ್ರಾಮದಾದ್ಯಂತ ಕಣ್ಮೆರೆಯಾದ ಸ್ವಚ್ಛತೆಗೆ ಬೇಸರ ವ್ಯಕ್ತಪಡಿಸಿರುವ ಆರೋಗ್ಯಾಧಿಕಾರಿಗಳು ತಕ್ಷಣ ಗ್ರಾಮವನ್ನ ಶುಚಿಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಕಡಕೋಳ ಗ್ರಾಮದ ಜನತಾ ಕಾಲೋನಿಯಲ್ಲಿ ಸದ್ಯಕ್ಕೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದು, ಅನಾರೋಗ್ಯಕ್ಕಿಡಾದ ಕುಟುಂಬಸ್ಥರ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸುವಂತೆ ಮನವಿ ಮಾಡಲಾಗಿದೆ. ಈವರೆಗೆ 80ಕ್ಕು ಹೆಚ್ಚು ಜನರು ಅನಾರೋಗ್ಯಕ್ಕಿಡಾಗಿರುವುದರಿಂದ ಮತ್ತಷ್ಟು ಜನರು ಅನಾರೋಗ್ಯಕ್ಕಿಡಾಗುವ ಸಾಧ್ಯತೆ ಶಂಕಿಸಲಾಗಿದೆ. ಲ್ಯಾಬ್‌ನಿಂದ ವರದಿ ಕೇಳಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳಿಯ ವಾಟರ್ ಮ್ಯಾಕ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಾಗಿ ಎಚ್ಚರಿಕೆ ನೀಡಿದ್ದಾರೆ.

ಜನತಾ ಕಾಲೋನಿಯಲ್ಲಿ ಸದ್ಯಕ್ಕೆ 600 ಮನೆಗಳಿದ್ದು 1500ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಸದ್ಯಕ್ಕೆ ಎಲ್ಲರಿಗೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಿದ್ದು ಟ್ಯಾಂಕರ್ ವಾಹನದಲ್ಲಿ ಕುಡಿಯುವ ನೀರು ಒದಗಿಸಲಾಗಿದೆ.ಇದನ್ನೂ ಓದಿ : ಅನರ್ಹ ಶಾಸಕ ಪ್ರತಾಪ್​​​ ಗೌಡ ಪಾಟೀಲ್ ವಿರುದ್ದ ಮತ್ತೊಂದು ಪ್ರಕರಣ ದಾಖಲು

ಮುಂದಿನ ಒಂದು ವಾರದೋಳಗೆ ಕುಡಿಯುವ ನೀರಿನ ಕಲುಷಿತ ನೀರು ಸೇರ್ಪಡೆಗೊಳ್ಳುವುದನ್ನ ತಪ್ಪಿಸಿ ಪರ್ಯಾಯ ಕುಡಿಯು ನೀರು ಒದಗಿಸಬೇಕು ಇಲ್ಲವಾದಲ್ಲ ಹೊಸದಾಗಿ ಬೋರ್‌ ವೆಲ್‌ವೊಂದನ್ನ ಕೊರೆಸಿ ಜನತಾ ಕಾಲೋನಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಅನಾರೋಗ್ಯ ಪೀಡಿತ ಗ್ರಾಮಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಹೇಳಿರುವ ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ