ಕೊರೋನಾ ಬಗ್ಗೆ ಇನ್ನೂ ಎಚ್ಚೆತ್ತಿಲ್ಲ ಬೆಂಗಳೂರು; ಚಿಕನ್​-ಮಟನ್ ಖರೀದಿಗೆ ಮುಗಿಬಿದ್ದ ಜನತೆ

ಇಂದು ಯುಗಾದಿ ಹಬ್ಬದ ಹೊಸತಡುಕು. ಈ ಸಮಯದಲ್ಲಿ ನಾನ್​ವೆಜ್​ ಅಡುಗೆ ಮಾಡೋದು ಸಂಪ್ರದಾಯ. ಹೀಗಾಗಿ, ಮಟನ್ ಮತ್ತು ಚಿಕನ್ ಶಾಪ್​ಗಳಿಗೆ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

news18-kannada
Updated:March 26, 2020, 9:57 AM IST
ಕೊರೋನಾ ಬಗ್ಗೆ ಇನ್ನೂ ಎಚ್ಚೆತ್ತಿಲ್ಲ ಬೆಂಗಳೂರು; ಚಿಕನ್​-ಮಟನ್ ಖರೀದಿಗೆ ಮುಗಿಬಿದ್ದ ಜನತೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮಾ.26): ಕೊರೋನಾ ವೈರಸ್​ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಆದರೆ, ಜನರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ.

ಇಂದು ಯುಗಾದಿ ಹಬ್ಬದ ಹೊಸತಡುಕು. ಈ ಸಮಯದಲ್ಲಿ ನಾನ್​ವೆಜ್​ ಅಡುಗೆ ಮಾಡೋದು ಸಂಪ್ರದಾಯ. ಹೀಗಾಗಿ, ಮಟನ್ ಮತ್ತು ಚಿಕನ್ ಶಾಪ್​ಗಳಿಗೆ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಕೊರೋನಾ ವೈರಸ್​ ಹರಡುವುದನ್ನು ತಡೆಯಲು ಕನಿಷ್ಠ ಮೂರು ಆಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಆದರೆ, ಇದನ್ನು ಲೆಕ್ಕಿಸದ ಜನರು ನಾಮುಂದು-ತಾಮುಂದು ಎಂದು ಚಿಕನ್​ ಮಟನ್​ ಖರಿಸಿದ್ದಾರೆ. ಇನ್ನು, ಗ್ರಾಹಕರು ಅಂತರ ಕಾಯ್ದುಕೊಳ್ಳಲು ಚಿಕನ್​-ಮಟನ್​ ಶಾಪ್​ ಅಂಗಡಿಗಳು ಕೂಡ ಯಾವುದೆ ವ್ಯವಸ್ಥೆ ಮಾಡಿಲ್ಲ.

ಕೊರೋನಾ ವೈರಸ್​ ಹರಡದಂತೆ ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಲಾಕ್​ಡೌನ್​ ಆದೇಶ ಹೊರಡಿಸಿತ್ತು. ಆದಾಗ್ಯೂ ಜನರು ರಸ್ತೆಯಮೇಲೆ ಹಾಯಾಗಿ ತಿರುಗಾಡುತ್ತಿದ್ದಾರೆ. ಚಿಕನ್​ ಶಾಪ್​ಗಳಿಗೆ ತೆರಳಿ ಮುಗಿ ಬಿದ್ದು ಚಿಕನ್​ ಕೊಳ್ಳುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ 21 ದಿನಗಳ ಕರ್ಫ್ಯೂ ಕೂಡ ವ್ಯರ್ಥವಾಗಲಿದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading