ರೋಡ್ ರೋಮಿಯೋ ಕಾಂಟ್ರ್ಯಾಕ್ಟರ್‌ಗೆ ಬಿತ್ತು ಸಖತ್​ ಗೂಸಾ, ಚಪ್ಪಲಿ ಏಟು; ವಿಡಿಯೋ ವೈರಲ್

ಯುವತಿಯ ಫೋಟೋ ತೆಗೆದು ಕಿರಿಕಿರಿ ಮಾಡುತ್ತಿದ್ದ.  ಕೇಳಿದಷ್ಟು ಹಣ ಕೊಡುತ್ತೇನೆ.  ಹಾಸಿಗೆಗೆ ಬಾ ಎಂದು ಕರೆಯುತ್ತಿದ್ದ.ಇದರಿಂದ ರೋಸಿ ಹೋದ ಯುವತಿ, ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ. 

news18-kannada
Updated:January 15, 2020, 11:49 AM IST
ರೋಡ್ ರೋಮಿಯೋ ಕಾಂಟ್ರ್ಯಾಕ್ಟರ್‌ಗೆ ಬಿತ್ತು ಸಖತ್​ ಗೂಸಾ, ಚಪ್ಪಲಿ ಏಟು; ವಿಡಿಯೋ ವೈರಲ್
ಕಂಟ್ರ್ಯಾಕ್ಟರ್​ಗೆ ಥಳಿಸುತ್ತಿರುವ ದೃಶ್ಯ
  • Share this:
ವಿಜಯಪುರ(ಜ. 15): ರೋಡ್ ರೋಮಿಯೊ ಥರ ಯುವತಿಯ ಬೆನ್ನು ಹತ್ತಿದ್ದ  ಗುತ್ತಿಗೆದಾರನಿಗೆ ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಉರುಳಾಡಿಸಿ ಗೂಸಾ ನೀಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿ ನಡೆದಿದೆ.

ಮೋತಿಸಾಬ್ ತಳೇವಾಡ ಎಂಬ ಕಟ್ಟಡ ನಿರ್ಮಿಸುವ ಗುತ್ತಿಗೆದಾರನಿಗೆ ಈಗಾಗಲೇ ಮದುವೆಯಾಗಿತ್ತು. ಆದರೆ, ಬೇರೊಬ್ಬ ಯುವತಿಯ ಹಿಂದೆ ಮೋತಿಸಾಬ್​​​ ಬಿದ್ದಿದ್ದ.  ಹಣ ಕೊಡ್ತಿನಿ, ಬರ್ತಿಯಾ ಎಂದು ಕಾಲೇಜು ಯುವತಿಗೆ ಕೇಳಿದ್ದ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ನಿಡಗುಂದಿ ಪಟ್ಟಣದ ಹೊರ ವಲಯಕ್ಕೆ ಕರೆದೊಯ್ದು ಚಪ್ಪಲಿಯಿಂದ ಬಾರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಮುಂದುವರಿದ ಕಸರತ್ತು: ಸೋನಿಯಾ ಬೆನ್ನಲ್ಲೇ ಸಿದ್ದರಾಮಯ್ಯ ರಾಹುಲ್​ ಜತೆ ಚರ್ಚೆ

ಈ ಯುವತಿ ಗುತ್ತಿಗೆದಾರ ಮೋತಿಸಾಬ್ ತಳೇವಾಡ್ ಗೆ ಪರಿಚಯವಿದ್ದರೂ ಆಕೆಯ ಹಿಂದೆ ಬಿದ್ದು ಚುಡಾಯಿಸುವುದನ್ನು ಮುಂದುವರೆಸಿದ್ದ.  ಅಷ್ಟೇ ಅಲ್ಲದೇ, ಯುವತಿಯ ಫೋಟೋ ತೆಗೆದು ಕಿರಿಕಿರಿ ಮಾಡುತ್ತಿದ್ದ.  ಕೇಳಿದಷ್ಟು ಹಣ ಕೊಡುತ್ತೇನೆ.  ಹಾಸಿಗೆಗೆ ಬಾ ಎಂದು ಕರೆಯುತ್ತಿದ್ದ.

ಇದರಿಂದ ರೋಸಿ ಹೋದ ಯುವತಿ, ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ.   ಸಿಟ್ಟಾದ ಯುವತಿಯ ಸಂಬಂಧಿಕರು ಕಟ್ಟಡ ಗುತ್ತಿಗೆದಾರ ಮೋತಿಸಾಬ್ ತಳೇವಾಡನನ್ನು ನಿಡಗುಂದಿ ಪಟ್ಟಣದ ಹೊರವಲಯಕ್ಕೆ ಕರೆದೊಯ್ದು ನೆಲದ ಮೇಲೆ ಉರುಳಾಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.  ಜಾಡಿಸಿ ಒದ್ದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಇಂಟರ್ನೆಟ್​ ಸೌಲಭ್ಯ ಪುನರಾರಂಭ; ಸಾಮಾಜಿಕ ಜಾಲತಾಣದ ಬಳಕೆಗಿಲ್ಲ ಅವಕಾಶ

ಅಷ್ಟೇ ಅಲ್ಲ, ಚಪ್ಪಲಿಯಿಂದ ಹೊಡೆಯುವ ಮೂಲಕ ಚಳಿ ಬಿಡಿಸಿದ್ದಾರೆ.  ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading