• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Priyanka Gandhi: ನಂದಿನಿ ಕನ್ನಡಿಗರದ್ದು, ಯಾವುದೇ ಕಾರಣಕ್ಕೂ ಮುಗಿಸಲು ಬಿಡೋದಿಲ್ಲ! ಚಾಮರಾಜನಗರದಲ್ಲಿ ಪ್ರಿಯಾಂಕಾಗಾಂಧಿ ವಾಗ್ದಾನ

Priyanka Gandhi: ನಂದಿನಿ ಕನ್ನಡಿಗರದ್ದು, ಯಾವುದೇ ಕಾರಣಕ್ಕೂ ಮುಗಿಸಲು ಬಿಡೋದಿಲ್ಲ! ಚಾಮರಾಜನಗರದಲ್ಲಿ ಪ್ರಿಯಾಂಕಾಗಾಂಧಿ ವಾಗ್ದಾನ

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ

ಚಾಮರಾಜನಗರದ ಹನೂರಿನಲ್ಲಿ ಮಹಿಳೆಯರ ಜೊತೆಗೆ ಪ್ರಿಯಾಂಕಾ ಗಾಂಧಿ ಸಂವಾದ ನಡೆಸಿದರು. ಗಿರಿಜನ, ಬೇಡಗಂಪಣ ಮಹಿಳೆಯರ ಕಷ್ಟ, ಸಮಸ್ಯೆಗಳನ್ನು ಆಲಿಸಿದರು.

 • Share this:

ಚಾಮರಾಜನಗರ: ಕರ್ನಾಟಕದಲ್ಲಿ ಚುನಾವಣಾ (Karnataka Elections 2023) ಕಣ ರಂಗೇರುತ್ತಿದೆ. ಬಿಜೆಪಿ (BJP) ಪರ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಹಲವು ಕೇಂದ್ರ ಸಚಿವರು ಕರ್ನಾಟಕಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸತ್ತಿದ್ದಾರೆ. ಇನ್ನು ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ (Rahul Gandhi) ಹಾಗೂ ಪ್ರಿಯಾಂಕ ಗಾಂಧಿ (Priyanka Gandhi) ಕೂಡ ರಾಜ್ಯಕ್ಕೆ ಆಗಮಿಸಿ ಅಭ್ಯರ್ಥಿಗಳ ಪ್ರಚಾರ ಕೈಗೊಂಡಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಭಾನುವಾರ ಮೊದಲ ದಿನ ವಿಜಯಪುರ ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ಕರ್ನಾಟಕ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಚಾಮರಾಜನಗರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಚಾಮರಾಜನಗರದ ಹನೂರಿನಲ್ಲಿ ಮಹಿಳೆಯರ ಜೊತೆಗೆ ಪ್ರಿಯಾಂಕಾ ಗಾಂಧಿ ಸಂವಾದ ನಡೆಸಿದರು. ಗಿರಿಜನ, ಬೇಡಗಂಪಣ ಮಹಿಳೆಯರ ಕಷ್ಟ, ಸಮಸ್ಯೆಗಳನ್ನು ಪ್ರಿಯಾಂಕ ಗಾಂಧಿಯವರು ಆಲಿಸಿದರು. ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಪ್ರಿಯಾಂಕಾ ಜೊತೆ ರಂದೀಪ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್, ಹನೂರು ಕೈ ಅಭ್ಯರ್ಥಿ ನರೇಂದ್ರ, ಚಾಮರಾಜನಗರ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ, ಗುಂಡ್ಲುಪೇಟೆ ಅಭ್ಯರ್ಥಿ ಗಣೇಶ್ ಪ್ರಸಾದ್, ತಮಿಳುನಾಡು–ಕೇರಳ ಶಾಸಕರು ಭಾಗಿಯಾಗಿದ್ದರು.


ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ಶ್ಲಾಘನೆ


ಈ ವೇಳೆ ಮಾತನಾಡಿದ ಪ್ರಿಯಾಂಕ, ರಾಜ್ಯದಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮನ್ನೆಲ್ಲಾ ನೋಡಿ‌ ನನಗೆ ಖುಷಿಯಾಗುತ್ತಿದೆ. ಯಾವುದಾದರೂ ಸಂಘರ್ಷದ ಬದುಕು ಇದ್ದರೆ ಅದು ಹೆಣ್ಣು ಮಗಳ ಬದುಕು ಮಾತ್ರ. ಈ ಸಂಘರ್ಷದ ಬದುಕು ಎಷ್ಟು‌ ಕಷ್ಟ ಎಂಬುದು ನನಗೆ ಗೊತ್ತಿದೆ. ಹೆಣ್ಣುಮಗಳು ಗಂಡಸರಿಗಿಂತ ಹೆಚ್ಚು ಕಷ್ಟ ಪಡ್ತಾಳೆ, ಆದರೆ ಅದಕ್ಕೆ ಬೆಲೆ ಸಿಗಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಹೆಣ್ಣು ಮಗಳಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುತ್ತೇವೆ
ನಿಮ್ಮ ಅಕೌಂಟ್‌ಗೆ ನೇರವಾಗಿ ಹಣ ಬರುತ್ತದೆ ಎಂದರು ಭರವಸೆ ನೀಡಿದರು.


ಇದನ್ನೂ ಓದಿ: BJP: ಬಿಎಸ್​ವೈ ನಿವಾಸಕ್ಕೆ ಬಿಎಲ್​ ಸಂತೋಷ್; ಆ ಇಬ್ಬರನ್ನು ಸೋಲಿಸಲು ರಾಜಾಹುಲಿಗೆ ಟಾಸ್ಕ್


ಕಾಂಗ್ರೆಸ್ ನಾಯಕರು ನಿಮ್ಮ ವಿಶ್ವಾಸ ಉಳಿಸಿಕೊಂಡಿದ್ದಾರೆ


ನೆರೆದಿದ್ದ ಮಹಿಳೆಯರನ್ನ ನನ್ನ ಮೇಲೆ ನಿಮಗೆ ಯಾಕೆ ವಿಶ್ವಾಸವಿದೆ? ಎಂದು ಪ್ರಿಯಾಂಕ ಗಾಂಧಿ ಪ್ರಶ್ನೆ ಮಾಡಿದರು, ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಇಂಧಿರಾಗಾಂಧಿ ಎಂದು ಕೂಗಿದರು. ಮಾತು ಮುಂದುವರೆಸಿ, ನೀವು ಏಕೆ ಇಂದಿರಾ ಗಾಂಧಿ‌ ಮೇಲೆ ವಿಶ್ವಾಸ ಇಟ್ಟಿದ್ದೀರಾ ಅಂದ್ರೆ, ಅವರು ನಿಮ್ಮ ಬದುಕನ್ನು ಕಟ್ಟಿಕೊಟ್ಟವರು, ನಿಮ್ಮ ವಿಶ್ವಾಸಕ್ಕೆ ಧಕ್ಕೆ ತರಲಿಲ್ಲ‌. ಇಂದಿರಾ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ನಿಮ್ಮ‌ ಕೆಲಸ ಮಾಡಿಕೊಟ್ಟಿದ್ದಾರೆ. ಎಲ್ಲರೂ ನಿಮ್ಮ ವಿಶ್ವಾಸ ಉಳಿಸಿಕೊಂಡಿದ್ದಾರೆ, ಮುಂದೆಯೂ ಉಳಿಸಿಕೊಳ್ಳುತ್ತಾರೆ ಎಂದರು.


ನೀವು ಕಷ್ಟಪಟ್ಟು ದುಡಿದ ಹಣ ರಾಜಕಾರಣಿಗಳ ಪಾಲಾಗುತ್ತಿದೆ


ಹಳ್ಳಿಗಳಲ್ಲಿ ರಸ್ತೆಗಳಿಲ್ಲ, ಆಸ್ಪತ್ರೆಗಳಿಲ್ಲ, ಶಾಲೆಗಳಿಲ್ಲ, ಪ್ರತಿಯೊಂದು ಕೆಲಸಗಳಲ್ಲೂ 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ನಾವು ಹಗಲು ರಾತ್ರಿ ಕಷ್ಟಪಟ್ಟು ದುಡಿತೀವಿ, ಆ ಹಣವನ್ನು ತೆರಿಗೆ ರೂಪದಲ್ಲಿ  ಸರ್ಕಾರಕ್ಕೆ ಕಟ್ಟುತ್ತೇವೆ. ಆದರೆ ರಾಜಕಾರಣಿಗಳು ಎಲ್ಲದರಲ್ಲೂ 40 ಪರ್ಸೆಂಟ್ ಕಮಿಷನ್ ತೆಗೆದುಕೊಂಡು ಜನರ ನಂಬಿಕೆ ಕರೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.


ಯಾವುದೇ ಸರ್ಕಾರಿ ಕೆಲಸಕ್ಕೂ ಲಂಚ ಕೊಡಬೇಕು. ಈ ಸರ್ಕಾರ ಒಂದೂವರೆಲಕ್ಷ ಕೋಟಿ ಲೂಟಿ ಮಾಡಿದೆ. ಇಷ್ಟು ದುಡ್ಡು ತೆಗೆದುಕೊಂಡು ಏನು ಮಾಡಿದ್ದಾರೆ?, ನಾನಾಗಿದ್ದರೆ ಈ ಹಣದಲ್ಲಿ ನಾನು 100 ಏಮ್ಸ್ ಆಸ್ಪತ್ರೆ ಕಟ್ಟಿಸುತ್ತಿದ್ದೆ, ಮೂವತ್ತು ಸಾವಿರ ಸ್ಮಾರ್ಟ್ ಕ್ಲಾಸ್ ಕಟ್ಟಿಸಿಬಹುದಾಗಿತ್ತು, ಬಡವರಿಗೆ 30 ಲಕ್ಷ ಮನೆ ಕಟ್ಟಿಸಬಹುದಾಗಿತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನಂದಿನಿ ಪರ ಬ್ಯಾಟಿಂಗ್ ಬೀಸಿದ ಪ್ರಿಯಾಂಕ


ನಂದಿನಿ ಕರ್ನಾಟಕದ ಜನರದ್ದು, ಆದರೆ ಇಲ್ಲಿಗೆ ಗುಜರಾತಿನ ಅಮುಲ್‌ ತರಲು ಹೊರಟಿದ್ದಾರೆ. ಏಕೆ ಎಂದು ಕೇಳಿದರೆ ಕರ್ನಾಟಕದಲ್ಲಿ ಹಾಲು ಕಡಿಮೆಯಾಗಿದೆ ಎಂದು ಹೇಳುತ್ತಾರೆ‌. ಕಾಂಗ್ರೆಸ್ ಇದ್ದಾಗ ಹಾಲು ಹೆಚ್ಚಾಗಿದೆ ಎಂದು ಸರ್ಕಾರಿ ಶಾಲಾ‌ಮಕ್ಕಳಿಗೆ ಬಿಸಿಹಾಲು ಕೊಟ್ಟಿದ್ದೆವು. ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಡ್ತಿದ್ದೆವು. ಆದರೆ ಈ ಸರ್ಕಾರ ನಂದಿನಿ ಮುಗಿಸಲು ಗುಜರಾತಿ ಅಮುಲ್ ತರಲು ಹೊರಟಿದ್ದಾರೆ‌. ಪ್ರತಿಯೊಂದರಲ್ಲು ಕರ್ನಾಟಕಕ್ಕೆ ಅಪಮಾನ ಮಾಡುತ್ತಿದ್ದಾರೆ. ಆರ್.ಎಸ್.ಎಸ್ ಎಂಬ ಸಂಸ್ಥೆ ನಮ್ಮ ಬಸವಣ್ಣ, ನಾರಾಯಣಗುರುಗಳ ಬಗ್ಗೆ ತಪ್ಪು ವದಂತಿ ಹಬ್ಬಿಸುತ್ತಿದೆ ಎಂದು ಕಿಡಿ ಕಾರಿದರು.


ಇದನ್ನೂ ಓದಿ: Congress: ರಾಹುಲ್ ಬಳಿಕ ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ


ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಹಾಕಿ


ನೀವು ನಿಮ್ಮ ಮಕ್ಕಳ ಬದುಕು, ಭವಿಷ್ಯ, ಆರೋಗ್ಯ ಎಲ್ಲದರ ಮೇಲೂ ಗಮನವಿಟ್ಟು ಮತ ಹಾಕಬೇಕು. ನಿಮ್ಮ ಕಷ್ಟಕ್ಕೆ ಗೌರವ ಸಿಗಬೇಕು. ಅವರು ಸ್ವಾರ್ಥಕ್ಕೋಸ್ಕರ ನಮ್ಮಲ್ಲಿ ಜಗಳ ಹತ್ತಿಸಿ ಹೊಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಚುನಾವಣೆಯಲ್ಲಿ ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಮೇಲೆ ಯಾವುದನ್ನು ಈಡೇರಿಸಲ್ಲ. ಹಿಂದೆ ಬಿಜೆಪಿ ಕೊಟ್ಟಿದ್ದ 25 ಭರವಸೆಗಳಲ್ಲಿ 24 ಅನ್ನು ಈಡೇರಿಸಿಲ್ಲ. ಲಕ್ಷಾಂತರ ಕೆಲಸಗಳು ಖಾಲಿ ಇವೆ. ಆದರೆ ನಿಮಗೆ ಕೊಡಲು ಈ ಸರ್ಕಾರ ತಯಾರಿಲ್ಲ. ಹಾಗಾಗಿ ಜನರು ಮಾತಿಗೆ ಮರುಳಾಗಿ ಮತ ಹಾಕಬೇಡಿ ಆತ್ಮಸಾಕ್ಷಿಗೆ ಮೇಲೆ ಮತ ಹಾಕಿ ಎಂದು ಮನವಿ ಮಾಡಿದರು.

top videos


  ಆದರೆ ಕಾಂಗ್ರೆಸ್ ಕೊಟ್ಟ ಮಾತಿಗೆ ತಪ್ಪಲ್ಲ‌ ರಾಜಾಸ್ಥಾನ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಬಂತು. ಅಲ್ಲಿ ರೈತರ ಸಾಲ‌ ಮನ್ನಾ ಮಾಡಿದ್ದೇವೆ‌. ನಾವು ಏನೇನು‌ ಭರವಸೆ ನೀಡಿದ್ದೆವೋ ಅದನ್ನು ಈಡೇರಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಫ್ರೀ ವಿದ್ಯುತ್, ಪ್ರತಿ ತಿಂಗಳು 2000 ಕೊಡ್ತೀವಿ. ನಂದಿನಿ ಸಂಸ್ಥೆಯನ್ನು ಮತ್ತಷ್ಟು ಗಟ್ಟಿಯಾಗಿ ಮಾಡುತ್ತೇವೆ ಎಂದು ಹೇಳಿದರು.

  First published: