• Home
  • »
  • News
  • »
  • state
  • »
  • FASTag: ಫಾಸ್ಟ್ಯಾಗ್ ಕಡ್ಡಾಯ ಹಿನ್ನೆಲೆ; ದುಪ್ಪಟ್ಟು ದರಕ್ಕೆ ಹೆದರಿದ ವಾಹನ ಸವಾರರು

FASTag: ಫಾಸ್ಟ್ಯಾಗ್ ಕಡ್ಡಾಯ ಹಿನ್ನೆಲೆ; ದುಪ್ಪಟ್ಟು ದರಕ್ಕೆ ಹೆದರಿದ ವಾಹನ ಸವಾರರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ವಾಹನ ಸವಾರರು ಫಾಸ್ಟ್ಯಾಗ್​​ ಕಡ್ಡಾಯ ಮತ್ತು ದುಪ್ಪಟ್ಟು ದರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಫಾಸ್ಟ್ಯಾಗ್ ಅಳವಡಿಸಿ ಅಕೌಂಟಿನಲ್ಲಿ ಹಣವಿದ್ದರೂ ಟೋಲ್ ಕೇಂದ್ರಗಳಲ್ಲಿ ಕೆಲವೊಮ್ಮೆ ಸ್ಕ್ಯಾನ್ ಆಗುವುದಿಲ್ಲ. ಈ ವೇಳೆ ಟೋಲ್ ಸಿಬ್ಬಂದಿ ಮಾತ್ರ ನಮ್ಮ ಮಾತು ಕೇಳುವುದಿಲ್ಲ, ಬದಲಿಗೆ ದುಪ್ಪಟ್ಟು ದರ ನೀಡಬೇಕು

ಮುಂದೆ ಓದಿ ...
  • Share this:

ಆನೇಕಲ್(ಫೆ.17): ಹೆದ್ದಾರಿ ಟೋಲ್​ಗಳಲ್ಲಿ ಸಂಚರಿಸುವ ವಾಹನಗಳಿಗೆ ಇದೇ ತಿಂಗಳು 15ರಿಂದ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ್ದು, ಫಾಸ್ಟ್ಯಾಗ್ ಇಲ್ಲದ  ವಾಹನಗಳಿಗೆ ದುಪ್ಪಟ್ಟು ದರ ನಿಗದಿ ಪಡಿಸಲಾಗಿದೆ. ಪಾಸ್ಟ್ಯಾಗ್ ಕಡ್ಡಾಯ ಮತ್ತು ದುಪ್ಪಟ್ಟು ದರ ಬಗ್ಗೆ ವಾಹನ ಸವಾರರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಟೋಲ್ ಪ್ಲಾಜಾಗಳಲ್ಲಿ ಸುಂಕ ವಸೂಲಿಗೆ ಫಾಸ್ಟ್ಯಾಗ್ ಜಾರಿಗೆ ತಂದಿತ್ತು. ವಾಹನ ಸವಾರರಿಗೆ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಮೂರು ಬಾರಿ ಕಾಲಾವಕಾಶ ನೀಡಲಾಗಿತ್ತು. ಇದೇ ತಿಂಗಳ 15ನೇ ತಾರೀಖಿಗೆ ಅಂತಿಮ ಗಡುವು ಮುಗಿದಿದ್ದು, ಇದೀಗ ಹೆದ್ದಾರಿ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.  ಹಾಗಾಗಿ ಫಾಸ್ಟ್ಯಾಗ್ ಇದ್ದರೆ ಮಾತ್ರ ನಿಗದಿತ ಶುಲ್ಕ ಪಾವತಿಸಬೇಕು. ಇಲ್ಲವಾದರೆ ದುಪ್ಪಟ್ಟು ದರ ಪಾವತಿಸಬೇಕು ಎಂಬ ಕೇಂದ್ರ ಸರ್ಕಾರದ ಕ್ರಮ ಉತ್ತಮವಾದದ್ದು, ಸಮಯ, ಇಂಧನ ಮತ್ತು ಹಣ ಉಳಿಸಬಹುದಾಗಿದೆ ಎಂದು ಕೆಲ ವಾಹನ ಸವಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಯುವ ಜೋಡಿಯ ಪ್ರೀತಿಗೆ ಪೋಷಕರಿಂದ ಒಪ್ಪಿಗೆ; ಮದುವೆ ಮಾಡೋಣ ಅನ್ನೋಷ್ಟರಲ್ಲಿ ಆಗಿದ್ದೇನು?


ಇನ್ನೂ ಕೆಲವು ವಾಹನ ಸವಾರರು ಫಾಸ್ಟ್ಯಾಗ್​​ ಕಡ್ಡಾಯ ಮತ್ತು ದುಪ್ಪಟ್ಟು ದರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಫಾಸ್ಟ್ಯಾಗ್ ಅಳವಡಿಸಿ ಅಕೌಂಟಿನಲ್ಲಿ ಹಣವಿದ್ದರೂ ಟೋಲ್ ಕೇಂದ್ರಗಳಲ್ಲಿ ಕೆಲವೊಮ್ಮೆ ಸ್ಕ್ಯಾನ್ ಆಗುವುದಿಲ್ಲ. ಈ ವೇಳೆ ಟೋಲ್ ಸಿಬ್ಬಂದಿ ಮಾತ್ರ ನಮ್ಮ ಮಾತು ಕೇಳುವುದಿಲ್ಲ, ಬದಲಿಗೆ ದುಪ್ಪಟ್ಟು ದರ ನೀಡಬೇಕು. ಇಲ್ಲವಾದರೆ ಅವಕಾಶ ನೀಡುದಿಲ್ಲ. ಫಾಸ್ಟ್ಯಾಗ್ ಅಳವಡಿಸಿ ಅಕೌಂಟಿನಲ್ಲಿ ಹಣವಿದ್ದು, ಸ್ಕ್ಯಾನ್ ಆಗದಿದ್ದಾಗ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.


ಒಟ್ಟಿನಲ್ಲಿ ಫಾಸ್ಟ್ಯಾಗ್ ಜಾರಿಗೆ ಬಂದ ದಿನದಿಂದಲೂ ಅನುಕೂಲದ ಜೊತೆಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತಿದ್ದು, ಫಾಸ್ಟ್ಯಾಗ್ ಬಳಕೆಯಲ್ಲಿನ ತಾಂತ್ರಿಕ ತೊಂದರೆಗಳ ಬಗ್ಗೆ ಮತ್ತಷ್ಟು ಗಮನಹರಿಸುವ ಅಗತ್ಯವಿದೆ.

Published by:Latha CG
First published: