ಹಾವೇರಿ: ಕುಡಿಯಲು ನೀರಿಲ್ಲ (Drinking Water), ಹೀಗಾಗಿ ಬೋರ್ ವೆಲ್ (Borewell) ಹಾಕಿಸಿ ಅಂತ ಗ್ರಾಮ ಪಂಚಾಯಿತಿ (Gram Panchayat Member) ಅಧ್ಯಕ್ಷರೊಬ್ಬರು, ಹಿರೆಕೇರೂರು ಕ್ಷೇತ್ರದ ಶಾಸಕ (Hirekerur), ಕೃಷಿ ಸಚಿವ ಬಿ.ಸಿ ಪಾಟೀಲ್ (Minister B.C Patil) ಅವರಿಗೆ ಫೋನ್ ಮಾಡಿ ಮನವಿ ಮಾಡಿದ್ದಾರೆ. ಆದರೆ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್, ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಗುಂಡಾವರ್ತನೆ ಮೆರೆದಿದ್ದಾರೆ. ಹಾವೇರಿ (Haveri) ಜಿಲ್ಲೆಯ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಭು ಅವರಿಗೆ ಸಚಿವರ ಅಳಿಯ ಬಾಯಿಗೆ ಬಂದ ಹಾಗೇ ಮಾತಾಡಿ ಅವಾಜ್ ಆಗಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರ್ವೇಲ್ ಹಾಕಿಸಿವಂತೆ ಮನವಿ ಮಾಡಿದ್ದಾರೆ. ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಈಗಾಗಲೇ ಬೋರ್ ವೆಲ್ ಮಾಡಿಸಿಕೊಡುತ್ತೇವೆಂದು ಭರವಸೆ ಕೊಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಲು ಕರೆ ಮಾಡಿದಾಗ ಪ್ರತಾಪ್ ಅವರು, ಏನ್ ಗ್ರಾಮ ಪಂಚಾಯಿತಿ ಸದಸ್ಯರೆಲ್ಲಾ **** ಹರಿಯೋಕಿದಾರಾ ಎಂದು ಕೆಟ್ಟ ಪದ ಬಳಕೆ ಮಾಡಿದ್ದಾರೆ. ಸಚಿವರ ಅಳಿಯನ ಗುಂಡಾವರ್ತನೆಯ ವಿಡಿಯೋ ಸಾಮಾಜಿಕ ಜಾತಾಣದಲ್ಲಿ ವೈರಲ್ ಆಗಿದೆ.
ಇನ್ನು, ಪ್ರತಾಪ್ ಅವರ ಮಾತಿಗೆ ಗರಂ ಆದ ಸಾತೆನಹಳ್ಳಿ ಗ್ರಾಂ ಪಂ ಅಧ್ಯಕ್ಷರು, ಏನ್ ಮಾತಾಡ್ತಾ ಇದ್ದೀರಾ? ನಾನು ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಇದ್ದಿನಿ, ನಾವು **** ಹರಿಯೋಕೆ ಹೋಗ್ತೇವಿ, ಹಾಗಾದ್ರೆ ನೀವೂ ಎಂಎಲ್ಎ ಆಗಿರೋದು ಅದಕ್ಕೆನಾ ಅಂತ ತಿರುಗಿ ಬಿದ್ದಿದ್ದಾರೆ. ಮಾತಾಡುವಾಗ ನಾಲಿಗೆ ಬಿಗಿ ಇಟ್ಟುಕೊಂಡು ಮಾತಾಡೋದು ಕಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗರಂ ಆಗುತ್ತಿದ್ದಂತೆ ಉತ್ತರಿಸಲು ತಡಬಡಾಯಿಸಿರೋ ಪ್ರತಾಪ್, ನಾವು ಆಗಲ್ಲ ಅಂತ ಹೇಳಿಲ್ಲ. ನಾವು ಸರ್ಕಾರಕ್ಕೆ ಅನುಮತಿ ಹೇಳಿದ್ದೀವಿ. ಸರ್ಕಾರ ಕೆಲಸ ಹೇಗಿದೆ ಅಂತ ನಿಮಗೂ ಗೊತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು, ಸರ್ಕಾರಿ ಕೆಲಸ ಆಗಬೇಕು ಎಂದರೇ ಸಮಯ ಬೇಕಾಗುತ್ತದೆ ಎಂದು ಸಮಾಜಾಯಿಷಿ ಕೊಡಲು ಮುಂದಾಗಿದ್ದಾರೆ.
ಇದನ್ನೂ ಓದಿ: Chitradurga: ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ನಕಲಿ ಗೊಬ್ಬರದ ಹಾವಳಿ; ಮಹಾ ವಂಚನಗೆ ಬಲಿಯಾದ ರೈತರು
ಇದಕ್ಕೆ ಸಮಾಧಾನಗೊಳ್ಳದ ಗ್ರಾಮ ಪಂಚಾಯಿತಿ ಅಧ್ಯಕ್ಷ, ನಾವು ನಿಮಗೆ ಮರ್ಯಾದೆ ಕೊಟ್ಟು ಮಾತನಾಡಿದ್ದೀವಿ. ಆದರೆ ನೀವು ನಮಗೆ ಕೊಡುವ ಮರ್ಯಾದೆ ಇದೇನಾ? ನೀವು ವೋಟ್ ಕೇಳಲು ಯಾಕೆ ಬರ್ತಿರಾ? ನಾವು ಏನಾದರೂ ಜನರ ನಡುವೆ ಹೋಗಬೇಕು ಎಂದರೇ ಎಷ್ಟು ಜನರಿಗೆ ಉತ್ತರ ಕೊಡ್ಬೇಕು ಗೊತ್ತಾ? ಮತ್ತೆ ಚುನಾವಣೆ ಬಂದಾಗ ಅವರ ಬಳಿ ಹೋಗ್ಬೇಕು ಅಲ್ವಾ ಅಂತ ಅಸಮಾಧಾನ ತೊಡಿಕೊಂಡಿದ್ದಾರೆ.
ಇನ್ನು, ಸಚಿವರ ಅಳಿಯನ ಮಾತನಿಂದ ಅಸಮಾಧಾನಗೊಂಡಿರುವ ಕ್ಷೇತ್ರದ ಜನರು ನಾಳೆ ಸಚಿವ ಬಿ.ಸಿ ಪಾಟೀಲ್ ಅಳಿಯ ಪ್ರತಾಪ್ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾ. ಸದಾಶಿವ ಆಯೋಗದ ವರದಿ ವಿರುದ್ಧ ಪ್ರತಿಭಟನೆ
ನ್ಯಾ.ಸದಾಶಿವ ಮೂರ್ತಿ ಆಯೋಗ ಜಾರಿಗೆ ತರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಬಂಜಾರ ಮತ್ತು ಲಂಬಾಣಿ ಸಮುದಾಯ ಜನರು ಇಂದು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲೆ ಶಿಗ್ಗಾಂವಿಯ ಪಟ್ಟಣದ ಹೊರವಲಯದಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದ ಎದುರು ಪ್ರತಿಭಟನೆ ನಡೆಸಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭಟನೆಗಾಗಿ ನೂರಾರು ಜನರು ಆಗಮಿಸಿದ್ದರು.
ಬಂಜಾರ, ಲಂಬಾಣಿ ಸಮುದಾಯದ ನವನಗರ ಹುಬ್ಬಳ್ಳಿ ಪೀಠಾಧ್ಯಕ್ಷರಾದ ತಿಪ್ಪೆರುದ್ರ ಸ್ವಾಮಿಜಿಗಳ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ವರದಿ ಜಾರಿಗೆ ಬರುವುದರಿಂದ ಕೊರವ, ಕೊರಚ, ಲಂಬಾಣಿ ಹಾಗೂ ಹಲವು ಸಮುದಾಯದ ಜನರಿಗೆ ಅನ್ಯಾಯವಾಗಲಿದೆ. ಹೀಗಾಗಿ ನ್ಯಾ.ಸದಾಶಿವಮೂರ್ತಿ ಆಯೋಗ ಶಿಪಾರಸ್ಸು ಮಾಡಬೇಡಿ. ಇದರಿಂದ ನಮ್ಮ ಅನ್ನವನ್ನು, ಸೌಲಭ್ಯಗಳನ್ನ ಕಿತ್ತುಕೊಂಡ ಹಾಗೇ ಆಗುತ್ತದೆ. ಇಲ್ಲಿಯತನಕ ಯಾವ ಸಿಎಂ ಕೂಡಾ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿಲ್ಲ. ಇದೇ ರೀತಿ ಸಿಎಂ ಬೊಮ್ಮಾಯಿ ಅವರು ಕೇದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲ್ಲ ಎಂಬ ಭರವಸೆ ಇದೆ ಎಂದು ಪ್ರತಿಭಟನಾಕಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ