ಕೆಆರ್​ಎಸ್​ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ಪ್ರಗತಿಪರರ ವಿರೋಧ, ಪ್ರತಿಭಟನೆ

ಮೈಸೂರು, ಮಂಡ್ಯದ ವಿವಿಧ ಪ್ರಗತಿ ಪರ ಸಂಘಟನೆ ಮುಖಂಡರಿಂದ ಹೋರಾಟ ನಡೆಯುತ್ತಿದೆ. ಅಲ್ಲದೆ, ಈ ಭಾಗದಲ್ಲಿ ನಾಲ್ವಡಿ ಅವರ ಪ್ರತಿಮೆ ಮಾತ್ರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.

news18-kannada
Updated:July 8, 2020, 2:03 PM IST
ಕೆಆರ್​ಎಸ್​ನಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ಪ್ರಗತಿಪರರ ವಿರೋಧ, ಪ್ರತಿಭಟನೆ
ವಿಶ್ವೇಶ್ವರ
 • Share this:
ಮೈಸೂರು (ಜು.8): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್​ಎಸ್​ ಅಣೆಕಟ್ಟು ಜಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಹಾಗೂ ವಿಶ್ವೇಶ್ವರಯ್ಯ ಅವರ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಪ್ರಗತಿಪರರು ವಿರೋಧ ವ್ಯಕ್ತಪಡಿಸಿದ್ದು, ನಾಲ್ವಡಿ ಅವರ ಏಕ ಮಾತ್ರ ಪ್ರತಿಮೆ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.  

ಈ ವಿಚಾರಕ್ಕೆ ಸಂಬಂಧಿಸಿ ಕೆಆರ್​ಎಸ್​​ನಲ್ಲಿ ಪ್ರಗತಿಪರರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಲ್ವಡಿಗೆ ಸಮನಾಗಿ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಕ್ಕೆ ಆಗಬಾರದು ಎನ್ನುವುದು ಇವರ ಆಗ್ರಹ. ಕೆಆರ್​ಎಸ್​ ಅಣೆಕಟ್ಟು ನಿರ್ಮಾಣಕ್ಕೆ ನಾಲ್ವಡಿಯವರ ಕೊಡುಗೆ ಅಪಾರವಾಗಿದೆ. ಮೈಸೂರು ಆಸ್ಥಾನದಲ್ಲಿ ವಿಶ್ವೇಶ್ವರಯ್ಯ ದಿವಾನರಾಗಿದ್ದವರು. ವಿಶ್ವೇಶ್ವರಯ್ಯ ಅವರಂತೆ ಏಳೆಂಟು ಮಂದಿ ದಿವಾನರು ಕೆಲಸ ಮಾಡಿದ್ದಾರೆ. ಹೀಗಾಗಿ ನಾಲ್ವಡಿಯವರ ಸರಿಸಮಾನಕ್ಕೆ ವಿಶ್ವೇಶ್ವರಯ್ಯ ಅವರರ ಪ್ರತಿಮೆ ನಿರ್ಮಾಣ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಮೈಸೂರು, ಮಂಡ್ಯದ ವಿವಿಧ ಪ್ರಗತಿ ಪರ ಸಂಘಟನೆ ಮುಖಂಡರಿಂದ ಹೋರಾಟ ನಡೆಯುತ್ತಿದೆ. ಅಲ್ಲದೆ, ಈ ಭಾಗದಲ್ಲಿ ನಾಲ್ವಡಿ ಅವರ ಪ್ರತಿಮೆ ಮಾತ್ರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.

ನಾಲ್ವಡಿ ಅವರ ಸಾಧನೆ:

 • 902ರಲ್ಲಿ ಏಷ್ಯಾದಲ್ಲೆ ಪ್ರಥಮ ವಿದ್ಯುತ್ ಉತ್ಪಾಧನ ಘಟಕ ಸ್ಥಾಪಿಸಿದರು
 • 1903ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ಮಾಣ

 • 1905ರಲ್ಲಿ ಬೆಂಗಳೂರಿಗೆ ವಿದ್ಯುತ್ ಸಂಪರ್ಕ (ಏಷ್ಯಾದಲ್ಲೆ ಪ್ರಥಮ)

 • 1907ರಲ್ಲಿ ವಾಣಿವಿಲಾಸ ಸಾಗರ ( ಮಾರ್ಕೊನಹಳ್ಳಿ ಡ್ಯಾಮ್ ) ನಿರ್ಮಾಣ

 • 1907ರಲ್ಲಿ ಮೊದಲ ಶಾಸನ ಸಭೆಗೆ ಆಯ್ಕೆ

 • 1908ರಲ್ಲಿ ಮೈಸೂರಿಗೆ ವಿದ್ಯುತ್

 • 1909ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ

 • 1909ರಲ್ಲಿ ಭಾರತದ ಮೊದಲ ಬಾಯ್ಸ್ ಸ್ಕೌಟ್ಸ್ ತರಬೇತಿ

 • 1910ರಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶಂಕುಸ್ಥಾಪನೆ

 • 1913ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

 • 1913ರಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ

 • 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ

 • 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ

 • 1916ರಲ್ಲಿ ಯುವರಾಜ ಕಾಲೇಜು

 • 1916ರಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಆರಂಭ

 • 1917ರಲ್ಲಿ ಮಹಾರಾಣಿ ಮಹಿಳಾ ಕಾಲೇಜು ನಿರ್ಮಾಣ

 • 1918ರಲ್ಲಿ ಜಸ್ಟಿಸ್ ಮಿಲ್ಲರ್ ಸಮಿತಿ ಸ್ಥಾಪನೆ

 • 1918ರಲ್ಲಿ ಕೃಷ್ಣರಾಜ ಆಸ್ಪತ್ರೆ ನಿರ್ಮಾಣ

 • 1921ರಲ್ಲಿ ಲಲಿತ ಮಹಲ್ ಅರಮನೆ ಸ್ಥಾಪನೆ

 • 1921ರಲ್ಲಿ ವಿಜ್ಞಾನ ಕಾಲೇಜು ಬೆಂಗಳೂರು ಶುರು

 • 1923ರಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪ್ರಾರಂಭ

 • 1924ರಲ್ಲಿ ಮೈಸೂರು ಮೆಡಿಕಲ್ ಕಾಲೇಜು ನಿರ್ಮಾಣ

 • 1925ರಲ್ಲಿ ಕೃಷ್ಣರಾಜನಗರ ಸ್ಥಾಪನೆ

 • 1925ರಲ್ಲಿ ನಿಮಾನ್ಸ್ ಆಸ್ಪತ್ರೆ ಸ್ಥಾಪನೆ

 • 1927ರಲ್ಲಿ ಯುವರಾಜ ಕಾಲೇಜು ಆರಂಭ

 • 1928ರಲ್ಲಿ ಬೆಂಗಳೂರು ಕೆ.ಆರ್ ಮಾರುಕಟ್ಟೆ ಸ್ಥಾಪನೆ

 • 1930ರಲ್ಲಿ ಮಾರ್ಕೋನಹಳ್ಳಿ ಡ್ಯಾಮ್ ತುಮಕೂರು ಸ್ಥಾಪನೆ

 • 1933ರಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ ಸ್ಥಾಪನೆ

 • 1933ರಲ್ಲಿ ಕೆ ಆರ್ ಮಿಲ್ ಶುರು

 • 1933ರಲ್ಲಿ ಬೆಂಗಳೂರು ಟೌನ್ ಹಾಲ್ ನಿರ್ಮಾಣ

 • 1933ರಲ್ಲಿ ಸಂತ ಫಿಲೊಮಿನ ಚರ್ಚ್ ಮೈಸೂರು ಉದ್ಘಾಟನೆ

 • 1934ರಲ್ಲಿ ವಾಣಿವಿಲಾಸ ಮಕ್ಕಳ ಆಸ್ಪತ್ರೆ ನಿರ್ಮಾಣ

 • 1935ರಲ್ಲಿ ಮೈಸೂರು ಪೇಪರ್ ಮಿಲ್ ಭದ್ರಾವತಿ ಪ್ರಾರಂಭ

 • 1936ರಲ್ಲಿ ಮೈಸೂರು ಲ್ಯಾಂಪ್ಸ್ ನಿರ್ಮಾಣ

 • 1937ರಲ್ಲಿ ಮೈಸೂರು ಪೆಂಟ್ ಅಂಡ್ ವಾರ್ನಿಷ್ ಶುರು

 • 1937ರಲ್ಲಿ ಪೆಪರ್ ಮಿಲ್ ಬೆಳಗೊಳ ಆರಂಭ

 • 1938ರಲ್ಲಿ ಮಹಾರಾಣಿ ಮಹಿಳಾ ಕಾಲೇಜು ನಿರ್ಮಾಣ

 • 1939ರಲ್ಲಿ ಮಂಡ್ಯ ಜಿಲ್ಲೆ ನಿರ್ಮಾಣ

Published by: Rajesh Duggumane
First published: July 8, 2020, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading