Uttara Kannada: ಉತ್ತರ ಕನ್ನಡ ಜಿಲ್ಲೆಗೆ ಬೇಕಿದೆ ಆಸ್ಪತ್ರೆ, ಇಂದು ಹೊನ್ನಾವರದಲ್ಲಿ ಬೃಹತ್ ಹೋರಾಟ

ಹೊನ್ನಾವರದಲ್ಲಿ ಇವತ್ತು ಬೃಹತ್ ಹೋರಾಟ ನಡೆಸಲಾಯಿತು. ಜತೆಗೆ ಸಾವನಪ್ಪಿದ ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ಸರಕಾರ ನೀಡಬೇಕೆಂದು ಒತ್ತಾಯಿಸಲಾಯಿತು.

ಹೊನ್ನಾವರದಲ್ಲಿ ಪ್ರತಿಭಟನೆ

ಹೊನ್ನಾವರದಲ್ಲಿ ಪ್ರತಿಭಟನೆ

  • Share this:
ಉತ್ತರ ಕನ್ನಡ ಜಿಲ್ಲೆಗೆ (Uttara Kannada District) ಒಂದು ಸುಸಜ್ಜಿತ ಹೈಟೆಕ್ ಆಸ್ಪತ್ರೆ  (Well Equipped Hi-tech Hospital) ಬೇಕು ಎಂಬ ಕೂಗು ಈಗ ಹಂತ ಹಂತವಾಗಿ ಜೋರಾಗುತ್ತಿದೆ. ಇತ್ತಚಿಗಷ್ಟೆ ಉಡುಪಿ ಜಿಲ್ಲೆಯ ಶಿರೂರು ಬಳಿ ನಡೆದ ಅಂಬುಲೆನ್ಸ್ ಅಪಘಾತದ (Ambulance Accident) ಬಳಿಕ ಆಸ್ಪತ್ರೆ ಕೂಗು ಜಿಲ್ಲೆಯಾದ್ಯಂತ ವ್ಯಾಪಿಸಿಕೊಂಡು ಹತ್ತಾರು ಆಯಾಮದಲ್ಲಿ ಹೋರಾಟಗಳು (Protest) ನಡೆಯುತ್ತಿದೆ ಇದರ ಭಾಗವಾಗಿ ಇವತ್ತು ರಾಜ್ಯ ರಾಜಧಾನಿ ಬೆಂಗಳೂರಲ್ಲಿಯೂ (Bengaluru) ಉತ್ತರ ಕನ್ನಡ ಜಿಲ್ಲೆಯ ಬೆಂಗಳೂರು ನಿವಾಸಿಗರು ಪ್ರತಿಭಟನೆ ಕೈಗೊಂಡ್ರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿಯೂ (Honnavara) ಬೃಹತ್ ಪ್ರತಿಭಟನೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಕೈ ಜೋಡಿಸಿ ಪ್ರತಿಭಟನೆ ತೀವ್ರಗೊಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಇವತ್ತು ಆಸ್ಪತ್ರೆಗಾಗಿ ಹೋರಾಟ ನಡೆಯಿತು. ಪಕ್ಷಾತೀತವಾಗಿ ನಡೆದ ಹೋರಾಟದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳು ಕೈ ಜೋಡಿಸಿ ಸುಸಜ್ಜಿತ ಆಸ್ಪತ್ರೆ ಬೇಕೆ ಬೇಕು ಎಂದು ಆಗ್ರಹಿಸಿದ್ರು.

ದಿನದಿಂದ ದಿನಕ್ಕೆ ತೀವ್ರವಾಗ್ತಿರೋ ಹೋರಾಟ

ಹೊನ್ನಾವರ ಶರಾವತಿ ವೃತ್ತದಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಸುಸಜ್ಜಿತ ಆಸ್ಪತ್ರೆಗಾಗಿ ಧ್ವನಿಗೂಡಿಸಿದರು. ಶಿರೂರು ಅಂಬುಲೆನ್ಸ್ ದುರಂತದಲ್ಲಿ ಧಾರುಣವಾಗಿ ಸಾವು ಕಂಡವರು ಇದೆ ಹೊನ್ನಾವರ ತಾಲೂಕಿನ ಹಾಡಗೇರಿ ಗ್ರಾಮದವರು.

ಇದನ್ನೂ ಓದಿ:  Uttara Kannada: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಅಭಿಯಾನ, ಪಾಲ್ಗೊಳ್ಳೋದು ಹೇಗೆ?

People protest for multi specialty hospital in uttara kannada district
ಹೊನ್ನಾವರದಲ್ಲಿ ಪ್ರತಿಭಟನೆ


ಈ ‌ಹಿನ್ನಲೆಯಲ್ಲಿ ಹೊನ್ನಾವರದಲ್ಲಿ ಇವತ್ತು ಬೃಹತ್ ಹೋರಾಟ ನಡೆಸಲಾಯಿತು. ಜತೆಗೆ ಸಾವನಪ್ಪಿದ ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ಸರಕಾರ ನೀಡಬೇಕೆಂದು ಒತ್ತಾಯಿಸಲಾಯಿತು.

ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗಿಯಾದ ಸಾವಿರಾರು ಜನರು ಉತ್ತರ ಕನ್ನಡ ಜಿಲ್ಲೆಗೆ ಆಸ್ಪತ್ರೆ ಬೇಕೆ ಬೇಕು ಎಂದು ಘೋಷಣೆ ಕೂಗಿ ಆಡಳಿತ ವ್ಯವಸ್ಥೆ ಮುಂದೆ ತಮ್ಮ ಬೇಡಿಕೆ ಇಟ್ಟರು.

ತಾಲೂಕು ಆಡಳಿತ ಸೌಧದ ಮುಂದೆ ಉಪವಾಸ ಸತ್ಯಾಗ್ರಹ

ಇನ್ನು ಶರಾವತಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆಗಮಿಸಿ ತಾಲೂಕು ಆಡಳಿತ ಸೌಧದ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ನಿರಂತರ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆಗಾಗಿ ಸಾಕಷ್ಟು ಹೋರಾಟ ಮಾಡಲಾಗಿದೆ .ಜತೆಗೆ ಸರಕಾರಕ್ಕೆ ಜಿಲ್ಲೆಯ ಸಮಸ್ಯೆಯನ್ನ ಮನದಟ್ಟು ಮಾಡುವ ಪ್ರಯತ್ನ ಕೂಡಾ ಮಾಡಲಾಗಿದೆ. ಆದ್ರೆ ಸರಕಾರ ಮಾತ್ರ ಇದ್ಯಾವದಕ್ಕೂ ತಲೆಕೆಡಿಸಿಕೊಳ್ಳದೇ ಕೇವಲ‌ ಭರವಸೆ ಮಹಾಪುರ ನೀಡುತ್ತಿರೋದು ಜಿಲ್ಲೆಯ ಜನರನ್ನ ಆಕ್ರೋಷಿತರನ್ನಾಗಿಸಿದೆ.

People protest for multi specialty hospital in uttara kannada district
ಹೊನ್ನಾವರದಲ್ಲಿ ಪ್ರತಿಭಟನೆ


ಸಣ್ಣ ಪುಟ್ಟ ರೋಗಕ್ಕೂ ಪಕ್ಕದ ಜಿಲ್ಲೆಗೆ ತೆರಳಬೇಕು

ಜಿಲ್ಲೆಯ ಜನರು ಸಣ್ಣ ಪುಟ್ಟ ರೋಗಕ್ಕೂ ಪಕ್ಕದ ಮಂಗಳೂರು, ಉಡುಪಿ, ಹುಬ್ಬಳ್ಳಿ, ಶಿವಮೊಗ್ಗ ಆಸ್ಪತ್ರೆಗೆ ಹೋಗುವಂತ ದುಸ್ಥಿತಿ ಇದೆ ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಆದ್ರೆ ಎಲ್ಲದಕ್ಕೂ ಎಲ್ಲರಿಗೂ ಅನುಕೂಲ ಎಂದು ಪ್ರತಿಭಟನೆಯಲ್ಲಿ ಸೇರಿದ ಜನರು ತಮ್ಮ ತಮ್ಮ ಅಭಿಪ್ರಾಯ ಹೇಳಿದರು.

ಟ್ವಿಟ್ಟರ್ ಅಭಿಯಾನ

ಉತ್ತರ ಕನ್ನಡ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಬಗ್ಗೆ ಸರಕಾರದ ಕಿವಿ ಹಿಂಡಲು ಉತ್ತರ ಕನ್ನಡ ಜಿಲ್ಲೆಯ ಜನ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಈ ಹೋರಾಟ ನಡೆಯುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಟ್ವೀಟ್ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!

ರಕ್ತದಲ್ಲಿ ಪತ್ರ ಬರೆಯುವ ಅಭಿಯಾನ

ಇನ್ನು ಇದರ ಜತೆಗೆ ಅಗಸ್ಟ್ 1ನೇ ತಾರೀಖಿನಿಂದ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯುವ ಅಭಿಯಾನ ಕೂಡಾ ನಡೆಯಲಿದೆ. ಹೀಗೆ ಆಸ್ಪತ್ರೆಗಾಗಿ ಸರಕಾರಕ್ಕೆ ಚುರುಕು ಮುಟ್ಟಿಸಲು ವಿವಿಧ ಆಯಾಮದಲ್ಲಿ ಹೋರಾಟಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ‌. ಈ ಹೋರಾಟದ ತೀವ್ರತೆ ಜೋರಾಗುವ ಮೊದಲೇ ಸರಕಾರ ಇದಕ್ಕೊಂದು ಪರಿಹಾರ‌ ನೀಡಬೇಕಿದೆ.
Published by:Mahmadrafik K
First published: