ಈ ಗ್ರಾಮದ ಪ್ರತಿ ಮನೆಯಲ್ಲಿ ತಯಾರಾಗುತ್ತೆ ಸಾವಿರಾರು ಗಣೇಶ ಮೂರ್ತಿ..!

G Hareeshkumar | news18
Updated:September 2, 2018, 8:24 PM IST
ಈ ಗ್ರಾಮದ ಪ್ರತಿ ಮನೆಯಲ್ಲಿ ತಯಾರಾಗುತ್ತೆ ಸಾವಿರಾರು ಗಣೇಶ ಮೂರ್ತಿ..!
G Hareeshkumar | news18
Updated: September 2, 2018, 8:24 PM IST
- ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ 

 ಮಂಡ್ಯ ( ಸೆ.02) :  ಗೌರಿ ಗಣೇಶ ಹಬ್ಬ ಹತ್ತಿರ ಬಂತು‌ ಎಂದ್ರೆ ಆ ಊರಿನ ಜನರಿಗೆ  ಬಿಡುವಿಲ್ಲದ ಕೆಲಸ. ಊರಿನ ಬಹುತೇಕ ಜನರು ಈ ಕಸುಬನ್ನೆ ನಂಬಿ ಜೀವನ ಸಾಗಿಸ್ತಾರೆ. ಆರು ತಿಂಗಳು ಇವರಿಗೆ ಈ ಕೈ ಕಸುಬು ಈ ‌ಕೈ ಹಿಡಿದ್ರೆ, ಇನ್ನಾರು ತಿಂಗಳು ಬೇರೆ ಉದ್ಯೋಗ ನೋಡ್ಕೋಂಡು ಜೀವನ ಸಾಗಿಸ್ತಾರೆ. ಆಗಿದ್ರೆ ಏನಿವರ ಕಸುಬು ಅಂತೀರಾ ? ಈ ಸುದ್ದಿ ಓದಿ...

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕ ಮುಲಗೂಡು ಗ್ರಾಮದಲ್ಲಿ ಗೌರಿ ಗಣೇಶ ಹಬ್ಬ ಹತ್ತಿರ ಬರ್ತಿದ್ದಂತೆ ಈ ಊರಿನ ಬಹುತೇಕರ ಮನೆಯಲ್ಲಿ ಬಣ್ಣ ಬಣ್ಣದ ಮಣ್ಣಿನ ಗಣಪತಿಯ ವಿಗ್ರಹಗಳನ್ನು ಕಾಣಬರುತ್ತವೆ. ಈ ಊರಿನಲ್ಲಿರುವ ಬಹುತೇಕ ಕುಟುಂಬಗಳು ಮಣ್ಣಿನ ಗಣಪತಿ ತಯಾರು ಮಾಡುವ ಕಸುಬು ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.

ಇಲ್ಲಿರುವ ಬಹುತೇಕ ಕುಟುಂಬಗಳು ಕುಂಬಾರ ಜನಾಂಗಕ್ಕೆ ಸೇರಿದವರಾಗಿದ್ದು, ಈ ಊರಿನ ಪ್ರತಿ ಮನೆಯಲ್ಲೂ ಕೂಡ ಗೌರಿ ಗಣಪತಿ ಹಬ್ಬದ ಸೀಜನ್‌ನಲ್ಲಿ ಸಾವಿರಾರು ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನ ತಯಾರು ಮಾಡ್ತಾರೆ. ಅಲ್ಲದೇ ಕುಟುಂಬದ ಎಲ್ಲಾ ಸದಸ್ಯರು ಕೂಡ ಆರು ತಿಂಗಳು ಇದೇ ಉದ್ಯೋಗ ಮಾಡುತ್ತಾ ಕುಟುಂಬದವರಿಗೆ ಸಹಾಯ ಮಾಡ್ತಾ ಬರುತ್ತಿದ್ದಾರೆ.

ಇನ್ನು ಈ ಗ್ರಾಮದಲ್ಲಿ ಗೌರಿ ಗಣಪತಿ ಹಬ್ಬ ಇನ್ನು ಮೂರು ತಿಂಗಳು ಇರುವ ಮುಂಚೆ ಇಲ್ಲಿನ ಗ್ರಾಮದ ಕುಟುಂಬಗಳು ಈ ಗಣಪತಿ ಮೂರ್ತಿ ತಯಾರು ಮಾಡುವ ಕೆಲಸಕ್ಕೆ ಕೈ ಹಾಕ್ತಾರೆ. ಈ ಊರಿನಲ್ಲಿ ತಯಾರಾಗುವ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬಹಳ ಬೇಡಿಕೆ ಇದ್ದು ಮಂಡ್ಯ, ಬೆಂಗಳೂರು, ಮೈಸೂರು ,ರಾಮನಗರ, ಕೊಡಗು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಗೆ ಇಲ್ಲಿಂದ ಗಣಪತಿ ಮೂರ್ತಿಗಳನ್ನು ತೆಗೆದುಕೊಂಡು ಹೋಗ್ತಾರೆ.

ಇಲ್ಲಿ ನುರಿತ ಕೆಲಸಗಾರರಿದ್ದು ಗಣಪತಿ ಮೂರ್ತಿ ತಯಾರಿಕೆ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅಲ್ಲದೇ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈ ಊರಿನವರು ಗಣಪತಿ ತಯಾರಿಕೆ ಮಾಡಿ ಕೊಡ್ತಾರೆ. ಆದ್ರಿಂದ ಇಲ್ಲಿ ತಯಾರೋ ಗಣಪತಿಗೆ ಬಹಳ ಬೇಡಿಕೆ ಇದೆ. ಅಲ್ದೆ ಇಲ್ಲಿ ವೈವಿಧ್ಯಮಯ ಗಣಪತಿಗಳು ತಯಾರಿಸಿ ಕೊಡೋದು ಇಲ್ಲಿನ ಕೆಲಸಗಾರ ವಿಶೇಷ. ಹೀಗಾಗಿ ಈ ಗ್ರಾಮ ಮಂಡ್ಯ ಜಿಲ್ಲೆಯಲ್ಲಿ ಗಣಪತಿ ಗ್ರಾಮವೆಂದು ಪ್ರಸಿದ್ದಿ ಪಡೆದಿದೆ.

ಪ್ಯಾರಿಸ್ ಆಫ್ ಪ್ಲಾಸ್ಟರ್ ನ ಗಣಪತಿಗಳನ್ನು ಸರ್ಕಾರ ನಿಷೇಧ ಮಾಡಿದ ಮೇಲೆ ಇವರ ಮಣ್ಣಿನ ಗಣಪತಿಗೆ ಹೆಚ್ಚಿ‌ನ ಬೇಡಿಕೆ ಬಂದಿದೆ. ಅಲ್ದೆ ಇದೀಗ ಎಲ್ಲರಲ್ಲೂ ಪರಿಸರದ ಬಗೆ‌ ಕಾಳಜಿ ಮೂಡಿದ್ದು ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರಲ್ಲೂ ಈ ಬಾರಿ ಪರಿಸರ ಗಣಪ ಕೂರಿಸುವ ಪ್ರಯತ್ನ ನಡೆದಿದೆ. ಅಲ್ದೆ ಎಲ್ಲರೂ ಪರಿಸರ ಗಣಪನಿಗೆ ಆದ್ಯತೆ ನೀಡುತ್ತಿರುವುದು ಇದೀಗ ಇವ್ರ ಕೆಲಸಕ್ಕೆ ಶ್ರಮ ಸಿಕ್ಕಿದ್ದಂತಾಗಿದೆ.
Loading...

ಒಟ್ಟಾರೆ ಮಣ್ಣಿನ ಗಣಪತಿ ನಿರ್ಮಾಣ ಕಲೆಯಿಂದಲೇ‌ ಮಂಡ್ಯ ಜಿಲ್ಲೆಯ ಈ ಗ್ರಾಮ ಗಣಪತಿ‌ ಗ್ರಾಮವೆಂದೇ ಪ್ರಸಿದ್ದಿ ಪಡೆದಿದೆ. ಈ ಊರಿನ ಜನ್ರಲ್ಲಿರುವ ಈ ಕಲೆಯನ್ನು ಉಳಿಸಿ ಬೆಳೆಸಿಕೊಳ್ಳಲಿಕ್ಕೆ ಸರ್ಕಾರದ ನೆರವಿನ ಸಹಾಯಹಸ್ತ ಮತ್ತು ಜನರ ಪ್ರೋತ್ಸಾಹ ಬೇಕಿದ್ದು, ಪರಿಸರ ಸ್ನೇಹಿ ಗಣಪನ ತಯಾರಿಸೋ ಈ ಜನರು ನಿಲ್ಲಬೇಕಿದೆ.

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ