ಮಂಡ್ಯ ಜನಕ್ಕೆ ಪ್ರೀತಿ ಕೊಡೋದು ಗೊತ್ತು, ವಾಪಸ್​ ಕಿತ್ಕೊಳೋದು ಗೊತ್ತು; ನಿಖಿಲ್​ ಸೋಲಿನ ಬಗ್ಗೆ ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಯಾವ ಸಂದರ್ಭದಲ್ಲೂ ಗಾಸಿಪ್​ಗಳಿಗೆ ಮಂಡ್ಯದ ಜನ ಹೆಚ್ಚು ಸಮಯ ಕೊಡುವುದಿಲ್ಲ. ಪ್ರೀತಿ ಕೂಡ ಕೊಡ್ತಾರೆ, ವಾಪಸ್ ಕೂಡ ಪಡೀತಾರೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು ಅಂದು ನಿರ್ಧರಿಸಿದ್ದರು. ಹೀಗಾಗಿ ನಮ್ಮನ್ನ ತಿರಸ್ಕರಿಸಿ ಅವರಿಗೆ ಮತ ಹಾಕಿದ್ದರು. ಅಂದು ಇಷ್ಟಪಟ್ಟರು, ಈಗ ಅವರನ್ನೂ ತಿರಸ್ಕರಿಸಿದ್ದಾರೆ - ಚಲುವರಾಯಸ್ವಾಮಿ

Sharath Sharma Kalagaru | news18
Updated:May 27, 2019, 1:10 PM IST
ಮಂಡ್ಯ ಜನಕ್ಕೆ ಪ್ರೀತಿ ಕೊಡೋದು ಗೊತ್ತು, ವಾಪಸ್​ ಕಿತ್ಕೊಳೋದು ಗೊತ್ತು; ನಿಖಿಲ್​ ಸೋಲಿನ ಬಗ್ಗೆ ಚಲುವರಾಯಸ್ವಾಮಿ
ಚೆಲುವರಾಯ ಸ್ವಾಮಿ-ಎಚ್​​ಡಿಕೆ
Sharath Sharma Kalagaru | news18
Updated: May 27, 2019, 1:10 PM IST
ಮಂಡ್ಯ: ಕಾಂಗ್ರೆಸ್​ ಮುಖಂಡ ಮತ್ತು ಮಾಜಿ ಶಾಸಕ ಚಲುವರಾಯಸ್ವಾಮಿ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿಯನ್ನು ಇಂದೂ ಮುಂದುವರೆಸಿದ್ದಾರೆ. ಜೆಡಿಎಸ್​ ಪಕ್ಷ ತೊರೆದು ಕಾಂಗ್ರೆಸ್​ಗೆ ಬಂದಾಗಿನಿಂದ ದ್ವೇಷ ಸಾಧಿಸುತ್ತಿರುವ ಚಲುವರಾಯಸ್ವಾಮಿ ಅವರಿಗೆ ಸುಮ್ಮನಿರುವಂತೆ ಸಿದ್ದರಾಮಯ್ಯ ಸೂಚಿಸಿದ್ದರೂ ಸಹ ನಿಲ್ಲುವಂತೆ ಕಾಣುತ್ತಿಲ್ಲ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ರಿಗೆ ಪರೋಕ್ಷ ಬೆಂಬಲ ನೀಡಿದ್ದ ಚಲುವರಾಯಸ್ವಾಮಿ, ಜೆಡಿಎಸ್​ ವಿರುದ್ಧ ಕೆಲಸ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇಂದು ಮಾತನಾಡಿದ ಚಲುವರಾಯಸ್ವಾಮಿ, ಮಂಡ್ಯ ಜನರಿಗೆ ಪ್ರೀತಿ ಕೊಡಲು ಗೊತ್ತಿದೆ. ಅದೇ ರೀತಿ ಕಿತ್ತುಕೊಳ್ಳುವುದೂ ಗೊತ್ತಿದೆ ಎನ್ನುವ ಮೂಲಕ ನಿಖಿಲ್​ ಸೋಲನ್ನು ವರ್ಣಿಸಿದ್ದಾರೆ.

"ಮಂಡ್ಯ ಜಿಲ್ಲೆಯ ಜನ ಪ್ರಬುದ್ಧರಿದ್ದಾರೆ. ಯಾವ ಸಂದರ್ಭದಲ್ಲೂ ಗಾಸಿಪ್​ಗಳಿಗೆ ಮಂಡ್ಯದ ಜನ ಹೆಚ್ಚು ಸಮಯ ಕೊಡುವುದಿಲ್ಲ. ಪ್ರೀತಿ ಕೂಡ ಕೊಡ್ತಾರೆ, ವಾಪಸ್ ಕೂಡ ಪಡೀತಾರೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು ಅಂದು ನಿರ್ಧರಿಸಿದ್ದರು. ಹೀಗಾಗಿ ನಮ್ಮನ್ನ ತಿರಸ್ಕರಿಸಿ ಅವರಿಗೆ ಮತ ಹಾಕಿದ್ದರು. ಅಂದು ಇಷ್ಟಪಟ್ಟರು, ಈಗ ಅವರನ್ನೂ ತಿರಸ್ಕರಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ರೆ ಹೀಗೇ ಆಗ್ತಿರಲಿಲ್ಲ," ಎಂದು ಕುಮಾರಸ್ವಾಮಿಯವರಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಮೈತ್ರಿ ಸೋಲಿಗೆ​ 'ಝೀರೋ ಟ್ರಾಫಿಕ್' ಡಿಸಿಎಂ ಪರಮೇಶ್ವರ್ ಕಾರಣ​​: ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​.ರಾಜಣ್ಣ ಲೇವಡಿ

ಕುಮಾರಸ್ವಾಮಿಯವರ ವಿರುದ್ಧ ಪರೋಕ್ಷ ಸಿಟ್ಟು ಹೊರಹಾಕಿದ ಪುಟ್ಟರಾಜು, ಸೋತಿರೋರನ್ನ ಯಾಕೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಂದಿದ್ರು, ಮೇ 23ಕ್ಕೆ ಉತ್ತರ ಕೊಡ್ತೀನಿ ಅಂದ್ರು, ಕೊಟ್ಟಿದ್ದಾರಾ? ಎಂದು ಪ್ರಶ್ನೆ ಮಾಡಿದರು. ಜತೆಗೆ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಸಿ.ಎಸ್​. ಪುಟ್ಟರಾಜು ರಾಜೀನಾಮೆಗೆ ಆಗ್ರಹಿಸುವುದಿಲ್ಲ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಇಂದು ಸಿಎಂ ಎಚ್​​ಡಿಕೆ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಮಹತ್ವದ ಯೋಜನೆಗಳಿಗೆ ಅಂಕಿತ?

ಸುಮಲತಾ ಬಂದು ನಾಲ್ಕು ದಿನವಾಯ್ತು, ನೀವು ನೆಟ್ಟಗೆ ಕೆಲಸ ಮಾಡಿ:
Loading...

ಮಂಡ್ಯ ಜಿಲ್ಲೆಗೆ ನೀರನ್ನು ಸುಮಲತಾ ಅವರು ಹರಿಸಲಿ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಚಲುವರಾಯಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು. ಸುಮಲತಾ ಅವರು ಸಂಸದರಾಗಿ ಕೇವಲ ನಾಲ್ಕು ದಿನಗಳಾಗಿವೆ. ಸರ್ಕಾರ ಇವರದ್ದೇ ಇದೆ. ಏಳು ಶಾಸಕರು ಮತ್ತು ಇಬ್ಬರು ಮಂತ್ರಿಗಳಿದ್ದಾರೆ. ಅವರ ಕೆಲಸವನ್ನು ಸರಿಯಾಗಿ ಮಾಡಲಿ. ಸುಮಲತಾ ಮಂಡ್ಯ ಜನತೆಯ ಪರವಾಗಿ ಕೆಲಸ ಮಾಡಲು ಸಮರ್ಥರಿದ್ದಾರೆ ಎಂಬುದು ಅವರ ನಡವಳಿಕೆಯಿಂದಲೇ ಸ್ಪಷ್ಟವಾಗಿದೆ, ಎಂದರು.

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...