Kodagu: ಮಳೆ, ಬೆಟ್ಟ ಇಲ್ಲದಿದ್ದರೂ ಭೂಕುಸಿತದ ಆತಂಕ, ಜಲಮಂಡಳಿ ಯಡವಟ್ಟಿನಿಂದ ಭಯ ಭಯ!

ಕೊಡಗಿನಲ್ಲಂತು ಮಳೆ ಬಂದರೆ ಸಾಕು ಭೂಕುಸಿತದ ಆತಂಕ ಹೆಚ್ಚಾಗ್ತಿದೆ. ಮೇಘಸ್ಫೋಟದ ಬಳಿಕ ಭೂಕುಸಿತದ ಭಯ ಕಾಡುತ್ತಿದೆ. ಇಲ್ಲಿ ಮಳೆ ಇಲ್ಲದಿದ್ದರೂ ಭೂಕುಸಿತದ ಆತಂಕ ಎದುರಾಗುವುದಕ್ಕೆ ಒಳಚರಂಡಿ ಕಾಮಗಾರಿ ಕಾರಣವಾಗಿದೆ.

ಕೊಡಗಿನಲ್ಲಿ ಭೂಕುಸಿತದ ಆತಂಕ

ಕೊಡಗಿನಲ್ಲಿ ಭೂಕುಸಿತದ ಆತಂಕ

  • Share this:
ಕಳೆದ ನಾಲ್ಕೈದು ದಿನಗಳಿಂದ ಮಳೆರಾಯನ ಅಬ್ಬರ (Rainfall) ಕಡಿಮೆಯಾಗಿದೆ. ಒಂದು ತಿಂಗಳಿನಿಂದ ಸುರಿಯುತ್ತಿದ್ದ ಮಳೆಗೆ ಜನರು ಹೈರಾಣು ಆಗಿದ್ದರು. ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮಳೆಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ, ಧಾರವಾಡ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕೊಡಗಿನಲ್ಲಂತು (Kodagu) ಮಳೆ ಬಂದರೆ ಸಾಕು ಭೂಕುಸಿತದ ಆತಂಕ (Tension) ಹೆಚ್ಚಾಗ್ತಿದೆ. ಮೇಘಸ್ಫೋಟದ (Cloud Burst) ಬಳಿಕ ಭೂಕುಸಿತದ ಭಯ ಕಾಡುತ್ತಿದೆ. ಇಲ್ಲಿ ಮಳೆ (Rain) ಇಲ್ಲದಿದ್ದರೂ ಭೂಕುಸಿತದ ಆತಂಕ ಎದುರಾಗುವುದಕ್ಕೆ ಒಳಚರಂಡಿ ಕಾಮಗಾರಿ ಕಾರಣವಾಗಿದೆ. ಸದ್ಯ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಇಲ್ಲಿ ತಡೆಗೋಡೆ ಮಾಡಿಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ.

ಕೊಡಗಿನಲ್ಲಿ ಮಳೆ ಪ್ರಮಾಣ ಒಂದಷ್ಟು ತಗ್ಗಿದೆ. ಆದರೆ ಭೂಕುಸಿತ ಆತಂಕಗಳು ಮಾತ್ರ ಕಡಿಮೆಯಾಗಿಲ್ಲ. ಇಲ್ಲಿ ಮಳೆ ಇಲ್ಲದಿದ್ದರೂ ಭೂಕುಸಿತದ ಆತಂಕ ಎದುರಾಗುವುದಕ್ಕೆ ಒಳಚರಂಡಿ ಕಾಮಗಾರಿ ಕಾರಣವಾಗಿದೆ. ಇಲ್ಲಿ ಭೂಕುಸಿತದ ಘಟನೆಗಳು ಕಾಮನ್ ಎನ್ನುವಂತಾಗಿದೆ.

ಒಳಚರಂಡಿಯಿಂದ ಭೂಕುಸಿತದ ಆತಂಕ

ಕೊಡಗಿನಲ್ಲಿ ಸಾಕಷ್ಟು ಮಳೆ ಸುರಿಯಿತ್ತೆಂದರೆ ಬೆಟ್ಟ ಪ್ರದೇಶದಲ್ಲಿ ಭೂಕುಸಿಯೋಕೆ ಶುರುವಾಗುತ್ತದೆ. ಆದರೆ ಸಮತಟ್ಟಾಗಿರುವ ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಭೂಕುಸಿತ ಎದುರಾಗುವುದಕ್ಕೆ ಒಳಚರಂಡಿ ಕಾಮಗಾರಿ ಕಾರಣವಾಗಿದೆ.

People of KODAGU Kuvempu area are suffering because of the mistake made by Jalmandaly
ಕೊಡಗಿನಲ್ಲಿ ಭೂಕುಸಿತ ಆತಂಕ


ಇದನ್ನೂ ಓದಿ: ಮಂಗಳೂರಲ್ಲೂ ಸಾವರ್ಕರ್ ಫೋಟೋ ವಿವಾದ, ಸ್ವಾತಂತ್ರ್ಯ ಸಂಭ್ರಮದ ನಡುವೆ ಪರ-ವಿರೋಧ!

ನದಿಯ ಬಳಿಯೇ ಭೂಕುಸಿತದ ಭಯ

ಹೊಳೆ ಮಧ್ಯಭಾಗದಿಂದ ನೂರು ಮೀಟರ್​ವರೆಗೆ ನದಿಯ ಸಂರಕ್ಷಿತ ಜಾಗ. ಆದರೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾತ್ರ ಅದ್ಯಾವುದನ್ನೂ ಲೆಕ್ಕಿಸದೆ ಕುಶಾಲನಗರ ಭಾಗದಲ್ಲಿ ಹೊಳೆಯಲ್ಲೇ ಒಳಚರಂಡಿಯ ಪೈಪ್ ಲೈನ್ ಮತ್ತು ಮ್ಯಾನ್‍ವೋಲ್‍ಗಳನ್ನು ಮಾಡಲಾಗಿದೆ.

People of KODAGU Kuvempu area are suffering because of the mistake made by Jalmandaly
ಕೊಡಗಿನಲ್ಲಿ ಭೂಕುಸಿತದ ಭಯ


ಕಾವೇರಿ ನದಿಪಾಲಾಗ್ತಿದೆ ಮಣ್ಣು

ಇದರಿಂದಾಗಿ ಕಾವೇರಿ ನದಿಯ ದಂಡೆಯಲ್ಲಿ ಭೂಕುಸಿತ ಉಂಟಾಗುತ್ತಿದೆ. ಒಳಚರಂಡಿ ಕಾಮಗಾರಿ ಮಾಡುವುದಕ್ಕೆ ಹೊಳೆಯ ದಂಡೆಯಲ್ಲೇ ಮಣ್ಣು ತೆಗೆದಿದ್ದರಿಂದ ಕುವೆಂಪು ಬಡಾವಣೆಗೆ ಹೊಂದಿಕೊಂಡಿದ್ದ ಜಾಗ ಈಗ ಕುಸಿದು ಹೋಗುತ್ತಿದೆ. ಈಗಾಗಲೇ ಸಾಕಷ್ಟು ಮಣ್ಣು ಕುಸಿದು ಕಾವೇರಿ ನದಿ ಪಾಲಾಗಿದ್ದು, ಸ್ಥಳದಲ್ಲಿದ್ದ ಬೃಹತ್ ಗಾತ್ರದ ಹೊಂಗೆ ಮರವು ಉರುಳಿ ಬಿದ್ದಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಧ್ವಜಾರೋಹಣದ ವೇಳೆ ಮಗು ಜನನ, ಧ್ವಜಸ್ತಂಭದ ಬಳಿ ತಂದು ಸಂಭ್ರಮ!

ಉದ್ಯಾನದಲ್ಲೂ ಬಿರುಕು, ಹೆಚ್ಚಿದ ಆತಂಕ

ಜೊತೆಗೆ ಪಕ್ಕದಲ್ಲಿಯೇ ಇರುವ ಚಿಕ್ಕ ಉದ್ಯಾನದಲ್ಲೂ ಈಗಾಗಲೇ ಬಿರುಕು ಬಿಟ್ಟಿದ್ದು ಮಳೆ ಜಾಸ್ತಿಯಾದಲ್ಲಿ ಉದ್ಯಾನವೂ ಕಾವೇರಿ ಪಾಲಾಗುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಆತಂಕ. ಕುವೆಂಪು ಬಡಾವಣೆಗೆ ಅತೀ ಹೆಚ್ಚು ಮಳೆಯಾಗಿ ಕಾವೇರಿ ನದಿ ಉಕ್ಕಿ ಹರಿದಾಗ ಮಾತ್ರ ಪ್ರವಾಹದ ಸ್ಥಿತಿ ನೀರು ಬಡಾವಣೆಗೆ ಬರುತ್ತಿತ್ತು. ಆದರೆ ಈಗ ಪ್ರವಾಹದ ಜೊತೆಗೆ ಭೂಕುಸಿತದ ಆತಂಕ ಎದುರಾಗಿದೆ.

ತಡೆಗೋಡೆ ನಿರ್ಮಿಸಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ

ಇಲ್ಲಿ ಇಷ್ಟರಲ್ಲಾ ಅವಾಂತರಕ್ಕೆ ಒಳಚರಂಡಿ ಮಂಡಳಿಯವರು ಕಾರಣ ಎನ್ನುವುದು ಜನರ ಆಕ್ರೋಶ. ಒಳಚರಂಡಿ ಮಂಡಳಿ ಹೊಳೆಗೆ ಹೊಂದಿಕೊಂಡಂತೆ ಯಾವುದೇ ಕಾಮಗಾರಿ ಮಾಡದಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎನ್ನುವುದು ಜನರ ಅಸಮಾಧಾನ. ಇಲ್ಲಿಗೆ ತಡೆಗೋಡೆ ನಿರ್ಮಿಸಿದರೆ ಮಾತ್ರವೇ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ ಅಕ್ಕಪಕ್ಕದಲ್ಲಿರುವ ಹಲವು ಕುಟುಂಬಗಳು ಸಮಸ್ಯೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಜನರ ಅಳಲು.

ತಡೆಗೋಡೆ ನಿರ್ಮಿಸಲು ಶಾಸಕರ ಒಪ್ಪಿಗೆ

ಸದ್ಯ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ತಡೆಗೋಡೆ ಮಾಡಿಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಬೇಕು ಎಂದು ಕುವೆಂಪು ಬಡಾವಣೆ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಒಂದು ವೇಳೆ ತಡೆಗೋಡೆ ಮಾಡಿದರೆ ನಮಗೆ ರಕ್ಷಣೆ ಸಿಗಲಿದೆ. ಇಲ್ಲದಿದ್ದರೆ ಮುಂದಿನ ಮಳೆಯಲ್ಲಿ ಇದೇ ರೀತಿ ಭೂಕುಸಿತವಾಗಿ ಎಲ್ಲವೂ ಕಾವೇರಿ ಹೊಳೆಗೆ ಹೋಗಲಿದೆ. ಇದರಿಂದ ಮೂರ್ನಾಲ್ಕು ಮನೆಗಳಿಗೆ ದೊಡ್ಡ ಸಮಸ್ಯೆಯಾಲಿದೆ ಎಂದು ಕುವೆಂಪು ಬಡಾವಣೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಇದುವರೆಗೆ ಕಾವೇರಿ ನದಿ ಉಕ್ಕಿ ಹರಿದಾಗಲೆಲ್ಲಾ ಪ್ರವಾಹದ ಪರಿಸ್ಥಿತಿ ಎದುರಿಸುತ್ತಿದ್ದ ಕುವೆಂಪು ಬಡಾವಣೆಗೆ ಒಳಚರಂಡಿ ಮಂಡಳಿ ಮಾಡಿದ ಎಡವಟ್ಟಿನಿಂದಾಗಿ ಭೂಕುಸಿತದ ಆತಂಕವನ್ನು ಎದುರಿಸಬೇಕಾದ ದುಃಸ್ಥಿತಿ ಎದುರಾಗಿದೆ.
Published by:Thara Kemmara
First published: