• Home
  • »
  • News
  • »
  • state
  • »
  • Karnataka-Maharashtra Dispute: ನಮಗೆ ಮಹಾರಾಷ್ಟ್ರ ಬೇಡ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ! 42 'ಮಹಾ' ಹಳ್ಳಿಗಳ ಜನರಿಂದ ಆಗ್ರಹ

Karnataka-Maharashtra Dispute: ನಮಗೆ ಮಹಾರಾಷ್ಟ್ರ ಬೇಡ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ! 42 'ಮಹಾ' ಹಳ್ಳಿಗಳ ಜನರಿಂದ ಆಗ್ರಹ

ಜತ್ತ ತಾಲೂಕಿನ ನಕ್ಷೆ (ಕೃಪೆ: Internet)

ಜತ್ತ ತಾಲೂಕಿನ ನಕ್ಷೆ (ಕೃಪೆ: Internet)

ಮಹಾರಾಷ್ಟ್ರಕ್ಕೆ ಅಲ್ಲಿನ ಗ್ರಾಮಸ್ಥರೇ ಶಾಕ್ ಕೊಟ್ಟಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ (Sangli) ಜಿಲ್ಲೆಯ ಜತ್ (Jat) ತಾಲೂಕಿನ ಸುಮಾರು 42 ಗ್ರಾಮಗಳ ಜನರು ಮಹಾರಾಷ್ಟ್ರ ಸರ್ಕಾರದವಿರುದ್ಧ ತಿರುಗಿ ಬಿದ್ದಿದ್ದಾರೆ. “ನಾವು ಮಹಾರಾಷ್ಟ್ರದಲ್ಲಿ ಇರುವುದಿಲ್ಲ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ” ಅಂತ ಪಟ್ಟು ಹಿಡಿದಿದ್ದಾರೆ!

ಮುಂದೆ ಓದಿ ...
  • News18 Kannada
  • Last Updated :
  • Maharashtra, India
  • Share this:

ಮಹಾರಾಷ್ಟ್ರ: ಬೆಳಗಾವಿ ಗಡಿ ವಿಚಾರದಲ್ಲಿ (Belagavi border issue) ಕರ್ನಾಟಕದ (Karnataka) ಜೊತೆ ಸದಾ ಕಿರಿಕ್ ಮಾಡುವ ಮಹಾರಾಷ್ಟ್ರ (Maharashtra), ಈಗ ಮತ್ತದೇ ಹಳೆ ತಗಾದೆ ತೆಗೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ಎಂಇಎಸ್‌ (MES) ಸೇರಿದಂತೆ ಕೆಲ ಸಂಘಟನೆಗಳು ಕರ್ನಾಟಕದ ಬಸ್‌ (KSRTC Bus) ಮೇಲೆ ಮಸಿ ಬಳಿದು, ಗೂಂಡಾವರ್ತನೆ ತೋರಿವೆ. ಮಹಾರಾಷ್ಟ್ರದ ದೌರ್ಜನ್ಯದ ವಿರುದ್ಧ ಇತ್ತ ಕನ್ನಡಿಗರು (Kannadigas) ಕೆರಳಿ ಕೆಂಡವಾಗಿದ್ದಾರೆ. ಇಂತ ಪರಿಸ್ಥಿತಿಯಲ್ಲೇ ಮಹಾರಾಷ್ಟ್ರಕ್ಕೆ ಅಲ್ಲಿನ ಗ್ರಾಮಸ್ಥರೇ (Villagers) ಶಾಕ್ ಕೊಟ್ಟಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ (Sangli) ಜಿಲ್ಲೆಯ ಜತ್ (Jat) ತಾಲೂಕಿನ ಸುಮಾರು 42 ಗ್ರಾಮಗಳ ಜನರು ಮಹಾರಾಷ್ಟ್ರ ಸರ್ಕಾರದ (Maharashtra government) ವಿರುದ್ಧ ತಿರುಗಿ ಬಿದ್ದಿದ್ದಾರೆ. “ನಾವು ಮಹಾರಾಷ್ಟ್ರದಲ್ಲಿ ಇರುವುದಿಲ್ಲ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ” ಅಂತ ಪಟ್ಟು ಹಿಡಿದಿದ್ದಾರೆ.


ಮಹಾಜನ್ ವರದಿಯಲ್ಲಿ ಏನಿದೆ?


ಹಿಂದೆ ಅರಸೊತ್ತಿಗೆಯ ಸಂಸ್ಥಾನವಾಗಿದ್ದ ಜತ್ ತಾಲೂಕು 93 ವರ್ಷಗಳ ಕಾಲ ಮಹಾರಾಷ್ಟ್ರದ ಸಾತಾರಾ ಮತ್ತು ಕೊಲ್ಲಾಪುರದಲ್ಲಿದ್ದರೆ, 36 ವರ್ಷಗಳ ಕಾಲ ವಿಜಯಪುರದ ಆಡಳಿತದಲ್ಲಿತ್ತು. 1957ರಲ್ಲಿ ಮಹಾರಾಷ್ಟ್ರ ರಾಜ್ಯವು ಭಾರತ ಸರಕಾರಕ್ಕೆ ಜತ್ ತಾಲೂಕಿನ 44 ಹಳ್ಳಿಗಳನ್ನು ಮೈಸೂರ ರಾಜ್ಯಕ್ಕೆ ಸೇರಿಸುವಂತೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರದೇಶದಲ್ಲಿ ಶೇ.72ರಷ್ಟು ಕನ್ನಡ ಭಾಷಿಕರಿದ್ದಾರೆ ಅಂತ ಮೈಸೂರು ರಾಜ್ಯ ಕೂಡ ಸಂಪೂರ್ಣ ಜತ್ ತಾಲೂಕಿಗೆ ಬೇಡಿಕೆ ಇಟ್ಟಿತ್ತು. ನಂತರ ಮಹಾಜನ ವರದಿ ಕೂಡ ಜತ್, ಅಕ್ಕಲಕೋಟೆ ಮತ್ತು ದಕ್ಷಿಣ ಸೊಲ್ಲಾಪುರ ತಾಲೂಕುಗಳು ಕರ್ನಾಟಕಕ್ಕೆ ಸೇರಬೇಕು ಅಂತ ವರದಿಯಲ್ಲಿ ಪ್ರಸ್ತಾಪಿಸಿತ್ತು. ಸದ್ಯ ಜತ್ ತಾಲೂಕು, ವಿಜಯಪುರದಿಂದ 70 ಕಿ.ಮೀ, ಅಥಣಿಯಿಂದ 40 ಮತ್ತು ಬೆಳಗಾವಿ ನಗರದಿಂದ 160 ಕಿಮೀ ದೂರದಲ್ಲಿದೆ.




ಕರ್ನಾಟಕಕ್ಕೆ ಸೇರಿಸಿ ಅಂತ 42 ಗ್ರಾಮಗಳ ಜನರ ಆಗ್ರಹ


ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಸುಮಾರು 42 ಗ್ರಾಮಗಳ ನಿವಾಸಿಗಳು ತಿರುಗಿ ಬಿದ್ದಿದ್ದಾರೆ. ಉಮದಿ ಗ್ರಾಮದಲ್ಲಿ ನಿನ್ನೆ ತಡರಾತ್ರಿವರೆಗೂ ಜತ್ತ ತಾಲೂಕು ನೀರಾವರಿ ಸಂಘರ್ಷ ಸಮಿತಿ ಸಭೆ ನಡೆದಿದ್ದು 6 ದಶಕಗಳಿಂದ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಜತ್ತ ತಾಲೂಕಿನ 42 ಹಳ್ಳಿಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಆಗ್ರಹಿಸಿದ್ದಾರೆ.


ಜತ್ ತಾಲೂಕಿನಲ್ಲಿ ನಡೆದ ಸಭೆ


ಇದನ್ನೂ ಓದಿ: Karnataka Bus: ಮಹಾರಾಷ್ಟ್ರದಲ್ಲಿ ಮತ್ತೆ ಕಿರಿಕ್; ನಿನ್ನೆ ಕರ್ನಾಟಕ ಬಸ್‌ಗೆ ಮಸಿ, ಇವತ್ತು ಕಲ್ಲು


ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ


ಜತ್ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಜತ್ತ ತಾಲೂಕಿನ 42 ಹಳ್ಳಿಗಳ ಜನರು ಉಮದಿ ಗ್ರಾಮದಲ್ಲಿ ಸಭೆ ಸೇರಿದ್ದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ತಾಲೂಕಿನಲ್ಲಿ ಬರಗಾಲ ಬಂದು, ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ ಮಹಾರಾಷ್ಟ್ರ ಸರ್ಕಾರ ನಮ್ಮನ್ನು ಕಡೆಗಣಿಸಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಹೋರಾಟಗಾರರಿಂದ 8 ದಿನಗಳ ಡೆಡ್‌ಲೈನ್


ಸಭೆ ಬಳಿಕ ಹೋರಾಟಗಾರರು ಮಹಾರಾಷ್ಟ್ರ ಸರ್ಕಾರಕ್ಕೆ ಎಂಟು ದಿನಗಳ ಗಡುವು ನೀಡಿದ್ದಾರೆ. ಎಂಟು ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಜತ್ತ ತಾಲೂಕಿಗೆ ಬರಬೇಕು. ಜತ್ತ ತಾಲೂಕಿನ ನೀರಿನ ಸಮಸ್ಯೆ ಕುರಿತು ಪರಿಹಾರ ಕಲ್ಪಿಸಬೇಕು. 8 ದಿನಗಳೊಳಗೆ ನಿರ್ಧಾರ ಕೈಗೊಳ್ಳದಿದ್ರೆ ಕರ್ನಾಟಕ ಮುಖ್ಯಮಂತ್ರಿಗಳನ್ನು ಜತ್ತ ತಾಲೂಕಿಗೆ ಆಹ್ವಾನಿಸಿ ಕರ್ನಾಟಕ ಸೇರಲು ನಿರ್ಧಾರ ಪ್ರಕಟಿಸುತ್ತೇವೆ ಅಂತ ಎಚ್ಚರಿಸಿದ್ದಾರೆ.


ಮಹಾರಾಷ್ಟ್ರ ಪುಂಡರ ದೌರ್ಜನ್ಯ


ಇದನ್ನೂ ಓದಿ: Karnataka: ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಸರ್ಕಾರದಿಂದ ಅನುದಾನ; ಸಿಎಂ ಬೊಮ್ಮಾಯಿ


ಸೂಕ್ತ ಮೂಲಸೌಕರ್ಯದ ಭರವಸೆ ನೀಡಿದ ಸಿಎಂ


ಜತ್, ಅಕಲಕೋಟೆ, ಕೊಲ್ಲಾಪುರ ಸೇರಿದಂತೆ ಸಾಂಗ್ಲಿ ಸುತ್ತಮುತ್ತ ಕನ್ನಡ ಮಾತನಾಡುವ 42ಕ್ಕೂ ಹೆಚ್ಚು ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬುದು ಈ ಹಿಂದಿನಿದಂಲೂ ಕೇಳಿ ಬಂದ ಕೂಗು. ಜತ್ ತಾಲ್ಲೂಕಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಹಾಗೂ ಆ ಭಾಗವನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು