Yadagiri: ಮಳೆಗಾಗಿ ದೇವರ ಮೊರೆ! ದೇವರಿಗೆ ನೀರು ಅರ್ಪಿಸಿ ಪ್ರಾರ್ಥನೆ

ಯಾದಗಿರಿ (Yadagiri) ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಕಾರಣ ಯಾದಗಿರಿ ಜನರು ಮಳೆಗಾಗಿ ಈಗ ದೇವರ (God) ಮೊರೆ ಹೋಗಿದ್ದಾರೆ. ಸುರಪುರ, ಹುಣಸಗಿ ತಾಲೂಕುಗಳು  ಹೊರತು ಪಡಿಸಿ ಉಳಿದ ನಾಲ್ಕು  ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ.

ನೀರಿನ ಅಭಿಷೇಕ

ನೀರಿನ ಅಭಿಷೇಕ

  • Share this:
ಯಾದಗಿರಿ(ಜು.06): ಒಂದು ಕಡೆ ದಕ್ಷಿಣ  ಭಾಗದಲ್ಲಿ ವರುಣನ ಅಬ್ಬರದಿಂದ ಜನರು ನಲುಗಿ ಹೋಗಿದ್ದರೆ  ಮತ್ತೊಂದೆಡೆ ಕಲ್ಯಾಣ ಕರ್ನಾಟಕ  (Karnataka)
ಭಾಗದಲ್ಲಿ ಮಳೆ ಕೊರತೆಯಿಂದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಯಾದಗಿರಿ (Yadagiri) ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಕಾರಣ ಯಾದಗಿರಿ ಜನರು ಮಳೆಗಾಗಿ ಈಗ ದೇವರ (God) ಮೊರೆ ಹೋಗಿದ್ದಾರೆ. 
ಸುರಪುರ, ಹುಣಸಗಿ ತಾಲೂಕುಗಳು  ಹೊರತು ಪಡಿಸಿ ಉಳಿದ ನಾಲ್ಕು  ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ. ವಡಗೇರಾ, ಯಾದಗಿರಿ, ಗುರುಮಿಠಕಲ್, ಶಹಾಪುರ ತಾಲೂಕಿನಲ್ಲಿ ಮಳೆ‌ ಕೊರತೆಯಾಗಿದೆ.ಜೂನ್ 1 ರಿಂದ ಜೂಲೈ 6 ರವರಗೆ ವಾಡಿಕೆ ಮಳೆ 115 ಎಂಎಂ ಮಳೆ ಬರಬೇಕಿತ್ತು,ಆದರೆ,105 ಎಂಎಂ ಮಳೆ ಬಂದಿದೆ.

ಬಿತ್ತನೆ ಮಾಡಲು ಹಿಂದೇಟು..!

ಗುರುಮಿಠಕಲ್ ತಾಲೂಕಿನಲ್ಲಿ 44 ಪ್ರತಿಶತ ಮಳೆ ಕೊರತೆ, ಯಾದಗಿರಿ ತಾಲೂಕಿನಲ್ಲಿ 38 ಪ್ರತಿಶತ ಮಳೆ ಕೊರತೆಯಾಗಿದೆ ‌.ಶಹಾಪುರ ತಾಲೂಕಿನಲ್ಲಿ 19 ಪ್ರತಿಶತ ಮಳೆ ಕೊರತೆಯಾಗಿದೆ .ವಡಗೇರಾ ತಾಲೂಕಿನಲ್ಲಿ 3 ಪ್ರತಿಶತ ಮಳೆ ಕೊರತೆಯಾಗಿದೆ.ಸುರಪುರ ತಾಲೂಕಿನಲ್ಲಿ 29 ಪ್ರತಿಶತ ಹಾಗೂ ಹುಣಸಗಿ ತಾಲೂಕಿನಲ್ಲಿ 20 ಪ್ರತಿಶತ ಮಳೆ ಹೆಚ್ಚಳವಾಗಿದೆ.

ರೈತರ ನಿರೀಕ್ಷೆ ಹುಸಿ

ಮುಂಗಾರು ಹಂಗಾಮಿನಲ್ಲಿ ಈ ಬಾರಿ ಉತ್ತಮ ಮಳೆ ಬರುತ್ತದೆ ಎಂದು ರೈತರು ನಿರೀಕ್ಷೆ ಮಾಡಿ,ರೈತರು ಬೀಜ ಹಾಗೂ ಗೊಬ್ಬರ ಖರೀದಿ ಮಾಡಿದರು. ಆದರೆ, ಮಳೆ ಕೈಕೊಟ್ಟ ಕಾರಣ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

392210 ಹೆಕ್ಟೇರ್ ಬಿತ್ತನೆ ಗುರಿ ಇದ್ದು ,73040 ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡಲಾಗಿದೆ. ತೊಗರಿ, ಹೆಸರು ಹಾಗೂ ಇನ್ನಿತರ ಬೀಜ ಬಿತ್ತನೆ ಮಾಡಬೇಕು. ಮಳೆ ಕೊರತೆಯಿಂದ ರೈತರು ಕಂಗಲಾಗಿದ್ದಾರೆ.ಮಳೆ ಕೊರತೆಯಿಂದ ಹತ್ತಿ,ತೊಗರಿ, ಹೆಸರು ಬೆಳೆ ಒಣಗುವ ಹಂತಕ್ಕೆ ಬಂದಿವೆ.

ದೇವರಿಗೆ ಮೊರೆ..!

ಮಳೆಗಾಗಿ ರೈತರು ಮುಗಿಲತ್ತ ಮುಖ ಮಾಡಿದ್ದಾರೆ. ಮಳೆ ಕೊರತೆಯಿಂದ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಜನರು ಕೃಷ್ಣಾ ನದಿಯಿಂದ 101 ಬಿಂದಿಗೆಯಲ್ಲಿ ವಾದ್ಯ ಮೇಳದೊಂದಿಗೆ ಗ್ರಾಮದ ದುರ್ಗಾದೇವಿ, ದ್ಯಾವಮ್ಮ,ಅಂಜನೇಯ ಹಾಗೂ ಕೃಷ್ಣಾ ನದಿಯ ನಡುಗಡ್ಡೆಯ ಗಡ್ಡೆ ಬಸವೇಶ್ವರ ಮಂದಿರಕ್ಕೆ ತೆರಳಿ ದೇವರಿಗೆ ನೀರು ಅರ್ಪಿಸಿದರು. ನಂತರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ಉತ್ತಮವಾಗಿ ಮಳೆ ಬರಲೆಂದು ಪ್ರಾರ್ಥನೆ ಮಾಡಿದರು.

ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ಇನ್ನೈದು ದಿನ ಮಳೆ; ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ನೀರು ಅರ್ಪಿಸಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರೆ ಮಳೆ ಬರುತ್ತದೆಂಬುದು ನಂಬಿಕೆ ಜನರಲ್ಲಿದೆ. ಈ ಬಗ್ಗೆ ಕೋಡಾಲ ಗ್ರಾಮದ ಮುಖಂಡ ಸಿದ್ದಣ್ಣಗೌಡ ಮಾಲಿಪಾಟೀಲ ಅವರು ಮಾತನಾಡಿ,ಜಿಲ್ಲೆಯಲ್ಲಿ ಮಳೆ ಕಡಿಮೆ ಬಂದ ಕಾರಣ ಬೆಳೆ ಬೆಳೆಯಲು ಕಷ್ಟವಾಗಿದೆ.ಬಿತ್ತನೆ ಮಾಡಿದ ಹತ್ತಿ,ಹೆಸರು, ತೊಗರಿ ಬೆಳೆ ಕೂಡ ಒಣಗುವ ಹಂತಕ್ಕೆ ಬಂದಿದೆ.ಹೀಗಾಗಿ ಕೃಷ್ಣಾ ನದಿಯಿಂದ ನೀರು ತಂದು ದೇವರಿಗೆ ಅರ್ಪಿಸಿ ,ಮಳೆ ಬರಲೆಂದು ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ.

ಕರಾವಳಿಯಲ್ಲಿ ಮಳೆಯ ಅಬ್ಬರ

ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ (Rain) ಮುಂದುವರಿಯಲಿದ್ದು, ಕರಾವಳಿ ಪ್ರದೇಶಗಳ (Coastal Area) ಜನರು ಎಚ್ಚರಿಕೆಯಿಂದ ಇರಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಿರುಗಾಳಿ ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ (BengaluruWeather) ಇಂದು ಮತ್ತು ನಾಳೆ ಮೋಡ ಮುಸುಕಿದ ವಾತಾವರಣ (Cloudy Weather) ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶಿವಮೊಗ್ಗದ ಮೂರು ತಾಲೂಕು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Kodagu Rains: ಬೆಟ್ಟ ಕುಸಿಯುತ್ತಿದೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ, ಹಲವು ಮನೆಗಳಿಗೆ ಹಾನಿ, ಗೋಡೆ ಕುಸಿದು ವೃದ್ಧೆಗೆ ಗಾಯ

ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮೂರು ತಾಲೂಕುಗಳ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಸಾಗರ, ಹೊಸನಗರ ಹಾಗು ತೀರ್ಥಹಳ್ಳಿಯ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಜೆ ಘೋಷಣೆ ಮಾಡಿ ಡಿಡಿಪಿಐ ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ.
Published by:Divya D
First published: