ಜನ ಹಿಂದುತ್ವದ ಮೇಲೆ ಮತ ಹಾಕ್ತಿದ್ದಾರೆಯೇ ವಿನಃ ಕೆಲಸದ ಮೇಲೆ ಅಲ್ಲ: Siddaramaiah ಹೇಳಿಕೆ

ಎಲ್ಲಾ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಇರುತ್ತವೆ. ಇದೇ ಈಶ್ವರಪ್ಪ ರಾಜ್ಯಪಾಲರಿಗೆ ಸಿಎಂ ವಿರುದ್ಧ ಪತ್ರ ಬರೆದಿದ್ದರು. ಯತ್ನಾಳ ಸರ್ಕಾರದ ವಿರುದ್ಧ ಮಾತನಾಡಿಲ್ವಾ, ಅದು ಭಿನ್ನಾಭಿಪ್ರಾಯ ಅಲ್ವಾ ಎಂದು ಪ್ರಶ್ನೆ ಮಾಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಕಲಬುರಗಿ ವಿಮಾನ ನಿಲ್ದಾಣದಲ್ಲಿ (Kalaburagi Airport) ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮಾಧ್ಯಮಗಳ ಜೊತೆ ಮಾತನಾಡಿದರು. ಅವಧಿಗೂ ಮುನ್ನವೇ ರಾಜ್ಯದಲ್ಲಿ ಚುನಾವಣೆ (Karnataka Assembly Election) ಬರುತ್ತೆ ಅಂತ ಅನ್ನಿಸಲ್ಲ. ಒಂದು ವೇಳೆ ಚುನಾವಣೆ ಬಂದ್ರೆ ನಾವು ತಯಾರಿದ್ದೇವೆ. ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಮಾಡದವರು ವಿಧಾನಸಭೆ ಚುನಾವಣೆ ಮಾಡ್ತಾರಾ ಎಂದು ಪ್ರಶ್ನೆ ಮಾಡಿದರು. ನನಗಿರುವ ಮಾಹಿತಿ ಪ್ರಕಾರ ಬಿಜೆಪಿ (BJP) ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲ್ಲ ಎಂದರು. ಇದೇ ವೇಳೆ ಸಿದ್ದರಾಮಯ್ಯರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಆ ಮಾತುಗಳನ್ನು ವ್ಯಂಗ್ಯವಾಗಿ ಹೇಳಿದ್ದಾರೆ.

ಈಗಲ್ ಟನ್ ರೆಸಾರ್ಟ್ ಗೆ ದಂಡ ಹಾಕಿದ್ದಕ್ಕೆ ಮಾತನಾಡುತ್ತಿದ್ದಾರೆ. ಕೋರ್ಟ್ ನಲ್ಲಿ ಕೂಡಾ ನಮ್ಮ ತೀರ್ಮಾನ ಎತ್ತಿಹಿಡಿದಿದೆ. ಸ್ಕೈರ್ ಫೀಟ್ ಲೆಕ್ಕದಲ್ಲಿ 982 ಕೋಟಿ ಆಗಿತ್ತು. ಕುಮಾರಸ್ವಾಮಿ ಇದೀಗ ಏಕೆ  ಬ್ಯಾಟಿಂಗ್ ಮಾಡ್ತಿದ್ದಾರೆ. ಕುಮಾರಸ್ವಾಮಿ ಅಲ್ಲ, ಯಾರು ಟಾರ್ಗೆಟ್ ಮಾಡಿದ್ರು ನಾನು ಹೆದರಲ್ಲ. ನನ್ನ ಕಂಡ್ರೆ ಅವರಿಗೆ ಭಯ, ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಲ್ಲವಾ?

1980 ರಲ್ಲಿ ವಾಜಪೇಯಿ, ಅಡ್ವಾಣಿ ಇದ್ರು ಕೇವಲ ಎರಡು ಸ್ಥಾನ ಗೆದ್ದಿದ್ದರು. ಎಲ್ಲಾ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಇರುತ್ತವೆ. ಇದೇ ಈಶ್ವರಪ್ಪ ರಾಜ್ಯಪಾಲರಿಗೆ ಸಿಎಂ ವಿರುದ್ಧ ಪತ್ರ ಬರೆದಿದ್ದರು. ಯತ್ನಾಳ ಸರ್ಕಾರದ ವಿರುದ್ಧ ಮಾತನಾಡಿಲ್ವಾ, ಅದು ಭಿನ್ನಾಭಿಪ್ರಾಯ ಅಲ್ವಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Election Results: ಇದು ತಾತ್ಕಾಲಿಕ ಹಿನ್ನಡೆ, ಮತ್ತೆ ಹಂತ ಹಂತವಾಗಿ ಮೇಲೆ ಬರ್ತೀವಿ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲಾ ಅನ್ನೋ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂದು ರಾಜೀನಾಮೆ ಕೊಡುವ ದಿನ ಅವರೇ ಕಣ್ಣೀರು ಹಾಕಲಿಲ್ವಾ? ಅವರನ್ನು ಜೈಲಿಗೆ ಹಾಕಸ್ತೀವಿ ಅಂತ ಹೆದರಿಸಿದರು ಎಂದು ಹೇಳಿದರು.

ಹಿಂದುತ್ವದ ಮೇಲೆ ಜನ ಮತ ಹಾಕ್ತಿದ್ದಾರೆ

ಮೊದಲೇ ಯಡಿಯೂರಪ್ಪ ಅವರಿಗೆ ಎರಡು ವರ್ಷದ ಅವಧಿಗೆ ಮಾತ್ರ ಸಿಎಂ ಮಾಡಿದ್ರು. ರಾಜ್ಯದಲ್ಲಿ ಬಿಜೆಪಿ ಭ್ರಷ್ಟ ಸರ್ಕಾರವಿದೆ. ಕಾಂಗ್ರೆಸ್ ಬಿಟ್ಟು ಹೋಗಿರೋ ಶಾಸಕರು ಮತ್ತೆ ಬಂದ್ರೆ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲ್ಲ. ಮೋದಿ ಅವರು ಕರ್ನಾಟಕ ಟಾರ್ಗೇಟ್ ಮಾಡಿದ್ರು ಅವರು ಸೋಲ್ತಾರೆ. ಜನ ಸಾಧನೆ ಮೇಲೆ ಮತ ಹಾಕುವುದನ್ನು ಕಡಿಮೆ ಮಾಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಮತ ಹಾಕ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸಂಪುಟಕ್ಕೆ ಮೇಜರ್ ಸರ್ಜರಿ?

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ (Five State Election Results) ಬಿಜೆಪಿ (BJP) ಗೆಲುವಿನ ನಗೆ ಬೀರಿದ್ದು, ಉತ್ತರ ಪ್ರದೇಶದಲ್ಲಿ (Uttar Pradesh) ಎರಡನೇ  ಬಾರಿಗೆ ಅಧಿಕಾರ ಹಿಡಿದುಕೊಳ್ಳುವ ಮೂಲಕ ಭಾಜಪ ಹೊಸ ದಾಖಲೆ ಬರೆದಿದೆ. ಪಂಜಾಬ್ (Punjab Election) ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಕಮಾಲ್ ಮಾಡಿದೆ.

ಇದೀಗ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಕರ್ನಾಟಕ(Karnataka)ದತ್ತ ಮುಖ ಮಾಡುತ್ತಿದೆ. ಕಾರಣ ಮುಂದಿನ ವರ್ಷವೇ ವಿಧಾನಸಭಾ ಚುನಾವಣೆ (Karnataka Assembly Election 2023) ನಡೆಯಲಿದೆ.

ಇದನ್ನೂ ಓದಿ:  ಕರ್ನಾಟಕದಲ್ಲೂ ಮತ್ತೆ BJP ಸರ್ಕಾರ; CT Ravi ವಿಶ್ವಾಸ

ಈ ಹಿನ್ನೆಲೆ ರಾಜ್ಯ ಸಚಿವ ಸಂಪುಟಕ್ಕೆ (Cabinet) ಮೇಜರ್ ಸರ್ಜರಿ ನಡೆಸಲು ಬಿಜೆಪಿ ಹೈಕಮಾಂಡ್ (BJP High command) ನಿರ್ಧರಿಸದಂತೆ ಕಾಣಿಸುತ್ತಿದೆ. ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿಯೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಬಿಜೆಪಿ ಅಂಗಳದಲ್ಲಿ ಕೇಳಿ ಬರುತ್ತಿವೆ.
Published by:Mahmadrafik K
First published: