• Home
  • »
  • News
  • »
  • state
  • »
  • Teacher: ನಿವೃತ್ತ ಶಿಕ್ಷಕರಿಗೆ 50 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ನೀಡಿ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು

Teacher: ನಿವೃತ್ತ ಶಿಕ್ಷಕರಿಗೆ 50 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ನೀಡಿ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು

ಶಿಕ್ಷಕ ಎನ್.ಜಿ.ಕೊಟ್ಯಾಳ್

ಶಿಕ್ಷಕ ಎನ್.ಜಿ.ಕೊಟ್ಯಾಳ್

ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಎನ್.ಜಿ.ಕೊಟ್ಯಾಳ ಈ ಬೀಳ್ಕೊಡುಗೆ ಸಮಾರಂಭ ನನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

  • Share this:

ವಿಜಯಪುರ  ಜಿಲ್ಲೆಯ ತಿಕೋಟಾ (Tikota, Vijayapura) ತಾಲೂಕಿನ ಬಿಜ್ಜರಗಿ ಗ್ರಾಮ (Bijjaragi Village) ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಬಿ.ಎ.ಕೆ.ಪ್ರೌಢಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತ (Retirement teacher) ಹೊಂದಿದ ದೈಹಿಕ ಶಿಕ್ಷಕ ಎನ್.ಜಿ.ಕೊಟ್ಯಾಳ ಅವರಿಗೆ ಗ್ರಾಮಸ್ಥರು (Villagers) ಅಭೂತಪೂರ್ವವಾಗಿ ಬೀಳ್ಕೊಡಿಗೆ (Send off) ನೀಡಿದ್ದಾರೆ. ಬರೋಬ್ಬರಿ ಐದು ತೊಲೆ ಬಂಗಾರ (50 ಗ್ರಾಂ ಚಿನ್ನ) (Gold), ಎರಡು ಕೆಜಿ ಬೆಳ್ಳಿ ಮೂರ್ತಿಗಳನ್ನು (Silver Idols) ನೀಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ತಮ್ಮ ಗುರುಗಳಿಗೆ (Teacher) ಧನ್ಯವಾದ ಸಲ್ಲಿಸಿದ್ದಾರೆ. ಶಿಕ್ಷಕರ ಬೀಳ್ಕೊಡುಗೆ ಫೋಟೋಗಳು (Photos) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗ್ತಿವೆ.


ಗ್ರಾಮದ ಜನರು, ಹಳೆಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು ಜೊತೆಗೂಡಿ  ಶಿಕ್ಷಕ ಕೊಟ್ಯಾಳ ಅವರಿಗೆ ತಲೆಗೆ ರುಮಾಲು, ದೋತಿ ತೊಡಸಿ ತೆರೆದ ವಾಹನದಲ್ಲಿ ವಾದ್ಯ ಮೇಳದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.


ಬಳಿಕ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ 5 ತೊಲೆ ಬಂಗಾರ, 2 ಕೆಜಿ ಬೆಳ್ಳಿ ಮೂರ್ತಿಗಳು, ಡಬಲ್ ಡೋರ್ ಫ್ರಿಡ್ಜ್‌, 32 ಇಂಚ್ ಎಲ್ಇಡಿ ಟಿವಿ, ಕಂಚಿನ ಸರಸ್ವತಿ ಮೂರ್ತಿ, ಸಿದ್ದೇಶ್ವರ ಸ್ವಾಮೀಜಿಗಳ 25 ಭಾವಚಿತ್ರಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.


ಗ್ರಾಮಸ್ಥರಿಂದ ತೆರೆದ ಕಾರ್​ನಲ್ಲಿ ಮೆರವಣಿಗೆ


ಶಾಲೆಯ ವಿದ್ಯಾರ್ಥಿಗಳಿಗಾಗಿ 1 ಲಕ್ಷ ಠೇವಣಿ ಇರಿಸಿದ ಶಿಕ್ಷಕ


ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಕಾಣಿಕೆಯಾಗಿ ಬಂದ 96 ಸಾವಿರ ನಗದು ಜೊತೆಗೆ ತಮ್ಮ ತಂದೆ ತಾಯಿಯ ಹೆಸರಲ್ಲಿ ಮತ್ತೆ 50 ಸಾವಿರವನ್ನು ಶಾಲೆಗೆ ನೀಡಿರುವ ಕೋಟ್ಯಾಳ ಅವರು, ಇದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಎಂದಿದ್ದಾರೆ. ಈ ಮೂಲಕ ಮಾದರಿಯಾಗಿದ್ದಾರೆ.


ಕೊಟ್ಯಾಳ ಗುರುಗಳ ಹೆಸರಿನಲ್ಲಿ ಹಳೆಯ ವಿದ್ಯಾರ್ಥಿ ಮಲ್ಲಿನಾಥ ಎಂಬುವರು 1 ಲಕ್ಷ ಹಣ ಠೇವಣಿ ಇಟ್ಟು, ಬರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮನವಿ ಮಾಡಿದ್ದಾರೆ.


ಶಿಕ್ಷಕರಿಗೆ ಸನ್ಮಾನ


ಸಂತಸ ವ್ಯಕ್ತಪಡಿಸಿದ ಶಿಕ್ಷಕ ಕೊಟ್ಯಾಳ್


ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಎನ್.ಜಿ.ಕೊಟ್ಯಾಳ ಈ ಬೀಳ್ಕೊಡುಗೆ ಸಮಾರಂಭ ನನ್ನ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.


ಮಂಗಳಮುಖಿಯರಿಗೆ ಮುತ್ತೈದೆಯ ಗೌರವ


ನವರಾತ್ರಿಯ ಮೊದಲ ದಿನ ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿ (Tangadagi, Muddebihala) ನಡೆದ ದುರ್ಗಾ ದೇವಿ ಜಾತ್ರೆ (Durgadevi Jatre) ಇತಿಹಾಸ ಬರೆದಿದೆ. ಇದೆ ಮೊದಲ ಬಾರಿಗೆ 900ಕ್ಕೂ ಅಧಿಕ ಮಂಗಳಮುಖಿಯರು, ಜೋಗತಿಯರಿಗೆ ಮುತ್ತೈದೆಯರಿಗೆ ಗೌರವೈಸುವಣತೆ ಉಡಿತುಂಬಿ ಗೌರವಿಸಲಾಗಿದೆ.


ಶಿಕ್ಷಕರಿಗೆ ಸನ್ಮಾನ


ಇದನ್ನೂ ಓದಿ:  Hubballi: ಗ್ರಾ.ಪಂ​ ಸದಸ್ಯನ ಪತ್ನಿ ಆತ್ಮಹತ್ಯೆಗೆ ಟ್ವಿಸ್ಟ್; ಪುಷ್ಪಾ ಡೆತ್ ನೋಟ್​ನಲ್ಲಿ ಏನಿದೆ?


ಮಂಗಳಮುಖಿಯರಿಗೆ ಉಡಿ ತುಂಬಿದ್ರು


ಶುಭ ಕಾರ್ಯಕ್ರಮಗಳಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಬಾಗೀನ ನೀಡುವುದು ಕಾಮನ್.‌ ಹಳ್ಳಿಗಳಲ್ಲು ಮುತ್ತೈದೆಯರಿಗೆ ಉಡಿ ತುಂಬಿ ಗೌರವಿಸಲಾಗುತ್ತೆ. ಆದ್ರೆ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಿಯಲ್ಲಿ ನಡೆದ ಅದೊಂದು ವಿಶೇಷ ಉಡಿ ತುಂಬುವ ಕಾರ್ಯಕ್ರಮಕ್ಕೆ ಇತಿಹಾಸ ಬರೆದಿದೆ.


ಗ್ರಾಮದ ದುರ್ಗಾ ದೇವಿ ಜಾತ್ರೆಯ ಅಂಗವಾಗಿ 900ಕ್ಕೂ ಅಧಿಕ ಮಂಗಳಮುಖಿಯರು ಹಾಗೂ ಜೋಗುತಿಯರಿಗೆ ಉಡಿ ತುಂಬಲಾಗಿದೆ. ಮುತ್ತೈದೆಯರಿಗೆ ನೀಡುವಂತೆ ಮಂಗಳಮುಖಿಯರಿಗು ಗೌರವಿಸಲಾಗಿದೆ.


ಗ್ರಾಮಸ್ಥರು ನೀಡಿದ ಕೊಡುಗೆಗಳು


ಆಕರ್ಷಣೆಯ ಕೇಂದ್ರವಾದ ಪೊಲೀಸ್ ಠಾಣೆ


ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ (Adarsha Nagara Police Station) ಗೋಡೆ ಮೇಲೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಚಿತ್ತಾಕರ್ಷಕ ಚಿತ್ರಗಳು. ಮತ್ತೊಂದೆಡೆ ಠಾಣೆ ಎದುರು ವಿಶಾಲವಾದ ಜಾಗದಲ್ಲಿ ಹಸಿರು ವನ (Green Park). ವನದಲ್ಲಿ ಪಕ್ಷಿಗಳ ಗೂಡು, ಕುಡಿಯುವ ನೀರು ಕಾಳುಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ:  Vijayapura Dance: ವಿಜಯಪುರ ಮಹಿಳೆಯರ ಈ ಅದ್ಭುತ ಡಾನ್ಸ್​ಗೆ ನೀವು ಫಿದಾ ಆಗ್ತೀರಿ!


ಶಿಕ್ಷಕ ಎನ್.ಜಿ.ಕೊಟ್ಯಾಳ್


'ಜನಸ್ನೇಹಿ ಪೊಲೀಸ್’ ಪರಿಕಲ್ಪನೆ ಯಲ್ಲಿ ಆದರ್ಶ ನಗರ ಠಾಣೆ ಹೊಸ ರೂಪ ಪಡೆದುಕೊಂಡಿದೆ. ಪೊಲೀಸ್ ಠಾಣೆ ಎಂದಾಗ ಮೂಡುವ ಭಯದ ಸಾಮಾನ್ಯ ಭಾವನೆಯನ್ನು ದೂರ ಮಾಡಲು ಈ ಮೂಲಕ ಪ್ರಯತ್ನಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ


ವರದಿ: ಗುರುರಾಜ್ ಗದ್ದನಕೇರಿ

Published by:Mahmadrafik K
First published: