ಅಕ್ರಮ ಬಾಂಗ್ಲಾ ವಲಸಿಗರೆಂಬ ಶಂಕೆಯಲ್ಲಿ ನೂರಾರು ಟೆಂಟ್ ಹೌಸ್​ಗಳ ತೆರವು; ಬೀದಿಗೆ ಬಿದ್ದ ಉತ್ತರ ಕರ್ನಾಟಕದ ಮಂದಿ

ಕಟ್ಟಡ, ರಸ್ತೆ ಸೇರಿದಂತೆ ಹಲವು ಕೆಲಸಗಳಿಗಾಗಿ ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳ ಜನರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು.

G Hareeshkumar | news18-kannada
Updated:January 20, 2020, 1:53 PM IST
ಅಕ್ರಮ ಬಾಂಗ್ಲಾ ವಲಸಿಗರೆಂಬ ಶಂಕೆಯಲ್ಲಿ ನೂರಾರು ಟೆಂಟ್ ಹೌಸ್​ಗಳ ತೆರವು; ಬೀದಿಗೆ ಬಿದ್ದ ಉತ್ತರ ಕರ್ನಾಟಕದ ಮಂದಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜ. 20): ಅಕ್ರಮವಾಗಿ ಬಾಂಗ್ಲಾ ದೇಶದ ಪ್ರಜೆಗಳು ನೆಲಸಿದ್ದಾರೆ ಎಂಬ ಕಾರಣ ನೀಡಿ ಕಟ್ಟಡ, ರಸ್ತೆ ಸೇರಿದಂತೆ ಹಲವು ಕೆಲಸಗಳಿಗೆ ಬಂದು ನಗರದ ಹಲವೆಡೆ ನೆಲೆಸಿರುವ ನೂರಾರು ಟೆಂಟ್​​ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪೊಲೀಸರು ಮಾಡಿದ್ದಾರೆ. 

ಮಾರತಹಳ್ಳಿಯ ಕರಿಯಪ್ಪನ ಅಗ್ರಹಾರ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು, ವರ್ತೂರು ಹಾಗೂ ಸುತ್ತಮುತ್ತಲಿನಲ್ಲಿ ಟೆಂಟ್​​ ಹಾಕಿಕೊಂಡು ವಾಸ ಮಾಡುತ್ತಿರುವರನ್ನು ಪೊಲೀಸರು ತೆರವು ಮಾಡಿದ್ದಾರೆ. ಇದರಿಂದ ಅಲ್ಲಿದ್ದ ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.

ಕಟ್ಟಡ, ರಸ್ತೆ ಸೇರಿದಂತೆ ಹಲವು ಕೆಲಸಗಳಿಗಾಗಿ ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳ ಜನರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು.

ಅವರೆಲ್ಲ ಮಾಲೀಕರ ಒಪ್ಪಿಗೆ ಪಡೆದು ಖಾಲಿ ಇರುವ ಜಾಗದಲ್ಲಿ ಟೆಂಟ್​​ ನಿರ್ಮಿಸಿಕೊಂಡು ವಾಸವಿದ್ದರು. ಇದರ ಜೊತೆಗೆ ಉತ್ತರ ಭಾರತದ ಬಿಹಾರ, ಓಡಿಶಾ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಸಹ  ವಾಸ್ತವ್ಯ ಹೂಡಿದ್ದರು.

ನಮ್ಮ ಬದುಕು ಹಾಳಾಯಿತು. ಮಕ್ಕಳ ಬದುಕು ಚೆನ್ನಾಗಿರಲಿ ಎಂದು ನಾವು ಶಾಲೆಗೆ ಕಳುಹಿಸುತ್ತಿದ್ದೇವೆ. ಈಗ ನಮಗೆ ಉಳಿದುಕೊಳ್ಳಲು ಅಲೆದಾಡುತ್ತಿದ್ದೇವೆ. ಮಕ್ಕಳ ಭವಿಷ್ಯಕ್ಕೂ ಪೆಟ್ಟು ಬಿದ್ದಿದೆ ಎಂದು ತಮ್ಮ ಅಳಲನ್ನು ಇವರು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿ - ಸೋನಿಯಾಗೆ ಪತ್ರ ಬರೆದ ಪರಮೇಶ್ವರ್

ಪೊಲೀಸರೇ ಮುಂದೆ ನಿಂತು ಜೆಸಿಬಿ ಮೂಲಕ ಜೋಪಡಿಗಳನ್ನು ತೆರವು ಮಾಡಿಸುತ್ತಿದ್ದರು. ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಯಾರೂ ಸ್ಥಳಕ್ಕೆ ಬಂದಿರಲಿಲ್ಲ. ತೆರವು ಬಗ್ಗೆ ಅವರಿಗೂ ಪೊಲೀಸರು ಮಾಹಿತಿ ನೀಡಿಲ್ಲ ಎಂದು ಕಾರ್ಮಿಕರು ದೂರಿದ್ದಾರೆ.ಜೋಪಡಿಯಲ್ಲಿ ಬಾಂಗ್ಲಾದವರು ಇದ್ದಾರೆ. ಕೂಡಲೇ ತೆರವು ಮಾಡಿ ಎಂದು ಉನ್ನತ ಅಧಿಕಾರಿಯೇ ಹೇಳಿದ್ದರು. ಹೀಗಾಗಿ ನಾವು ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಹೆಸರು ಹೇಳಲಿಚ್ಛಿಸದ ಪೊಲೀಸರೊಬ್ಬರು ಹೇಳಿದರು.

 
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ