ಕುಡಿಯುವ ನೀರು ಶುದ್ಧವಾಗಿರಬೇಕು, ಇಲ್ಲವಾದಲ್ಲಿ ರೋಗಗಳು ಬಾಧಿಸುವುದು ಸಾಮಾನ್ಯ. ಇತ್ತೀಚೆಗೆ ಮಾಲಿನ್ಯದಿಂದಾಗಿ ಶುದ್ಧ ಕುಡಿಯುವ ನೀರು (Drinking water) ಸಿಗುವುದು ಕಷ್ಟ. ಹೀಗಾಗೇ ವಾಟರ್ ಪ್ಯೂರಿಫೈಯರ್ ಮೊದಲಾದ ಸಾಧನಗಳು ಬಹುತೇಕ ಮನೆಗಳಲ್ಲಿ ಕಂಡು ಬರುತ್ತವೆ. ಇನ್ನು ಬಡವರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಇದಕ್ಕಾಗೇ ಶುದ್ಧ ಕುಡಿಯುವ ನೀರಿನ ಘಟಕಗಳನ್ನೂ ಸ್ಥಾಪಿಸಿದೆ. ಆದರೀಗ ಇದೇ ಕುಡಿಯುವ ನೀರು ಇಲ್ಲೊಂದು ಗ್ರಾಮದ ಜನರ ಜೀವಕ್ಕೆ ಅಪಾಯ ತಂದೊಡ್ಡಿದೆ. ಹೌದು ಜೀವಜಲ ಕುಡಿದವರು ಅಸ್ವಸ್ಥರಾಗುತ್ತಿದ್ದು, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಹೌದು ದೇವದುರ್ಗ ತಾಲ್ಲೂಕಿನಲ್ಲಿ ಕಲುಷಿತ ನೀರಿಗೆ ಬಾಲಕ ಬಲಿಯಾದ ಬೆನ್ನಲ್ಲೇ ಇಲ್ಲಿನ ಲಿಂಗಸಗೂರು ತಾಲ್ಲೂಕಿನಲ್ಲಿ ಕಲುಷಿತ ನೀರಿಗೆ 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಇನ್ನು ಅಸ್ವಸ್ಥರಿಗೆ ಲಿಂಗಸಗೂರಿನ ಖಾಸಗಿ ಬಯ್ಯಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗಸಗೂರು ತಾಲೂಕಿನ ಗೊರೆಬಾಳ ಗ್ರಾಮದಲ್ಲಿ 25 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, ವಾಂತಿ ಭೇದಿಯಿಂದ ನರಳುತ್ತಿದ್ದಾರೆ.
ಇದನ್ನೂ ಓದಿ: Sengol Handover: ಪ್ರಧಾನಿಗೆ ಸೆಂಗೋಲ್ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿ, ಗುಲಾಮಗಿರಿ ಅಂತ್ಯದ ಸಂಕೇತ ಎಂದ ಮೋದಿ
ಸದ್ಯ ಗ್ರಾಮಸ್ಥರಿಗೆ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಳ್ಳಿಯಲ್ಲೇ ಬೀಡು ಬಿಟ್ಟಿದ್ದಾರೆ. ಅತಿಸಾರ, ಮತಚತು ಭೇದಿಯಿಂದ ಕಿಡ್ನಿ ವೈಫಲ್ಯವಾಗುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಮೂವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರು, ಪುರುಷರು ಸೇರಿದಂತೆ ಮಕ್ಕಳಲ್ಲಿ ಉಲ್ಬಣವಾಗುತ್ತಿದೆ.
ಇನ್ನು ಈ ಮೂವರ ಟ್ರಾವೆಲ್ ಹಿಸ್ಟರಿ ಚೆಕ್ ಮಾಡಲಾಗಿದೆ. ಇವರಲ್ಲಿ ಯಾರೊಬ್ಬರೂ ಮದುವೆ ಸಮಾರಂಭ, ಜಾತ್ರೆಗಳಿಗೆ ತೆರಳಿದ ಹಿಸ್ಟರಿ ಇಲ್ಲ. ಹೀಗಾಗಿ ಊರಿನ ನೀರು ಕಲುಷಿತ ಆಗಿದೆ ಎಂಬುದಾಗಿ ಶಂಕೆ ವ್ಯಕ್ತವಾಗಿದೆ. ರೋಗಿಗಳಿಗೆ ಒಂದೇ ದಿನಕ್ಕೆ 25 ಸಲ ವಾಂತಿ ಭೇದಿ ಆಗಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿರೋದರಿಂದ ಕಿಡ್ನಿ ವೈಫಲ್ಯ ಆಗಿದೆ ಎಂದಿದ್ದಾರೆ. ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಗ್ರಾಮದಲ್ಲಿ ನೀರಿನ ಸ್ಯಾಂಪಲ್ ಲ್ಯಾಬ್ ಗೆ ರವಾನೆ ಮಾಡಲಾಗಿದೆ. .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ