• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu: 2018ರ ಅದೇ ಭೂಕಂಪ ಅನುಭವ, ಈ ಬಾರಿಯೂ ಪ್ರಾಕೃತಿಕ ವಿಕೋಪ ಎದುರಿಸುತ್ತಾ ಕೊಡಗು?

Kodagu: 2018ರ ಅದೇ ಭೂಕಂಪ ಅನುಭವ, ಈ ಬಾರಿಯೂ ಪ್ರಾಕೃತಿಕ ವಿಕೋಪ ಎದುರಿಸುತ್ತಾ ಕೊಡಗು?

ಕುಸಿತದ ಭೀತಿಯಲ್ಲಿ ಕೊಡಗಿನ ಗುಡ್ಡಗಳು

ಕುಸಿತದ ಭೀತಿಯಲ್ಲಿ ಕೊಡಗಿನ ಗುಡ್ಡಗಳು

ಭೂಕಂಪನವಾಗಿದ್ದು ಅಪಾಯದ ಮುನ್ಸೂಚನೆ ಯಾಕೆ ಎಂದರೆ ಇದು ಕೊಡಗು ಜಿಲ್ಲೆಯ ಮಟ್ಟಿಗೆ ಒಮ್ಮೆಗೆ ಆಗಿರುವ ಅನುಭವ. 2018 ರಲ್ಲಿ ಕೊಡಗಿನಲ್ಲಿ ಎಂದೂ ಕಂಡು ಕೇಳರಿಯಂತಹ ಭೂಕುಸಿತ, ಪ್ರವಾಹ ಎದುರಾಗಿತ್ತು.

  • Share this:

ಕೊಡಗು(ಜೂ.25): ಕೊಡಗು ಜಿಲ್ಲೆ 2018 ರಿಂದಲೂ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿತ್ತು. ಕಳೆದ ವರ್ಷ ಅಂತಹ ಯಾವುದೇ ಅಪಾಯ ಎದುರಾಗಲಿಲ್ಲ ಎಂದು ಜಿಲ್ಲೆಯ ಜನರು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದರು. ಆದರೆ ಇತ್ತೀಚೆಗೆ ಕೊಡನಲ್ಲಿ  (Kodagu) ಮುಂಜಾನೆ ಭೂಕಂಪನವಾಗಿದ್ದು (Earthquake) ಇದು ಅಪಾಯ ಮುನ್ಸೂಚನೆಯೇ ಎಂಬ ಆತಂಕ, ಪ್ರಶ್ನೆಯನ್ನು ಹುಟ್ಟುಹಾಕಿದೆ. ಭೂಕಂಪನವಾಗಿದ್ದು ಅಪಾಯದ (Danger) ಮುನ್ಸೂಚನೆ ಯಾಕೆ ಎಂದರೆ ಇದು ಕೊಡಗು ಜಿಲ್ಲೆಯ ಮಟ್ಟಿಗೆ ಒಮ್ಮೆಗೆ ಆಗಿರುವ ಅನುಭವ. 2018 ರಲ್ಲಿ ಕೊಡಗಿನಲ್ಲಿ ಎಂದೂ ಕಂಡು ಕೇಳರಿಯಂತಹ ಭೂಕುಸಿತ, ಪ್ರವಾಹ (Flood) ಎದುರಾಗಿತ್ತು. ಆದರೆ ಅದಕ್ಕೂ ಮೊದಲೆ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪನವಾಗಿತ್ತು. 2018 ರ ಜೂನ್ ತಿಂಗಳಲ್ಲಿ ಆದ ಈ ಭೂಕಂಪನದಿಂದ ಸಡಿಲಗೊಂಡಿದ್ದ ಭೂಮಿ ನಂತರ ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಬರೋಬ್ಬರಿ 36 ಗ್ರಾಮ ಪಂಚಾಯಿತಿಗಳಲ್ಲಿ ಭೂಕುಸಿತವಾಗಿತ್ತು.


ಸಾವಿರಾರು ಮನೆಗಳೇ ಕಣ್ಮರೆ


ಸಾವಿರಾರು ಮನೆಗಳು ಕಣ್ಮರೆಯಾಗಿದ್ದರೆ, ಸಾವಿರಾರು ಹೆಕ್ಟೇರ್ ಪ್ರಮಾಣದ ತೋಟ, ಹೊಲಗದ್ದೆಗಳೇ ಕಣ್ಮರೆಯಾದವು. ಈ ಭಯ ಆತಂಕ ಜಿಲ್ಲೆಯ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.


ಈಗಿನ ಭೂಕಂಪ, ಮುಂದಿನ ವಿಕೋಪದ ಸೂಚನೆಯಾ?


ಹೀಗಾಗಿಯೇ ಈ ಬಾರಿಯೂ ಜೂನ್ ತಿಂಗಳಲ್ಲಿ ಆಗಿರುವ ಭೂಕಂಪನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿಯುವ ಭಾರಿ ಮಳೆಗೆ ಸಂಕಷ್ಟ ತಂದೊಡ್ಡುತ್ತಾ ಎನ್ನುವ ಆತಂಕವನ್ನು ಜಿಲ್ಲೆಯ ಜನರಲ್ಲಿ ಸೃಷ್ಟಿಸಿದೆ. 2018 ರಲ್ಲೂ ಮಡಿಕೇರಿ ತಾಲ್ಲೂಕಿನ ದೇವಸ್ತೂರು ಸುತ್ತಮುತ್ತ ಭೂಕಂಪನವಾಗಿತ್ತು.


ಹಿಂದೆ ಆದ ಅದೇ ಪ್ರದೇಶಗಳಲ್ಲಿ ಭೂಕಂಪ


ಈಗಲೂ ಅದೇ ದೇವಸ್ತೂರು, ಸೋಮವಾರಪೇಟೆ ತಾಲ್ಲೂಕಿನ ರೇಂಜರ್ ಬ್ಲಾಕ್, ಅಮ್ಮಳ್ಳಿ ಗ್ರಾಮ, ನೇಗಳ್ಳೆ ಗ್ರಾಮಗಳಲ್ಲಿ ಭೂಕಂಪನವಾಗಿದೆ. ಮುಂಜಾನೆ 4 ಗಂಟೆ 37 ನಿಮಿಷದಲ್ಲಿ ಭೂಕಂಪನವಾಗಿದ್ದು ಇದು ಜನರಿಗೆ ಅರಿವಿಗೆ ಬಂದಿದೆ. ಮುಂಜಾನೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಜನರು ಎದ್ದು ಕುಳಿತಿದ್ದಾರೆ. ಎಚ್ಚರವಾಗಿದ್ದವರು, ತೀವ್ರ ಗಾಬರಿಗೊಂಡು ಹೆದರಿದ್ದಾರೆ. ಇದು ಜಿಲ್ಲೆಯ ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ.


ಅಂದಿನ ಅದೇ ಭೂಕಂಪದ ಅನುಭವ ಮತ್ತೊಮ್ಮೆ


ಈ ಕುರಿತು ಮಾತನಾಡಿದರುವ ದೇವಸ್ತೂರಿನ ನಿವಾಸಿ ನಂದ ವೈಬ್ರೇಟ್ ಯಂತ್ರ ಹಾಕಿದರೆ ಹೇಗೆ ಗುಡು ಗುಡು ಶಬ್ಧ ಆಗುತ್ತದೆಯೋ ಅದೇ ರೀತಿ ಅನುಭವ ಆಯಿತು. ಆದರೆ ನನಗೇನೋ ಸಮಸ್ಯೆ ಆಗಿರಬಹುದು ಎಂದು ನಾನು ಮತ್ತೆ ಮಲಗಿದೆ. ಆದರೆ ನಿದ್ದೆ ಮಾಡುತ್ತಿದ್ದ ನನ್ನ ಪತ್ನಿ ಎದ್ದು ಹೆದರಿ ಕುಳಿತರು. ಇದೇ ಅನುಭವ 2018 ರಲ್ಲೂ ಆಗಿತ್ತು. ಆದಾದ ಎರಡು ತಿಂಗಳಲ್ಲಿಯೇ ಜಿಲ್ಲೆಯಲ್ಲಿ ಭಾರೀ ಭೂಕುಸಿತವಾಯಿತು. ಇದನ್ನು ನೆನೆಸಿಕೊಂಡು ನಾವು ಹೆದರಿ ನಡುಗಿ ಹೋದೆವು ಎಂದಿದ್ದಾರೆ.


ಇದನ್ನೂ ಓದಿ: Chikkamagaluru: ಮಳೆಗಾಲದಲ್ಲಿ ಮರಗಳ ಸಾಗಾಟದಿಂದ ಭೂಕುಸಿತದ ಭೀತಿ; ಟಿಂಬರ್ ಸಾಗಾಟಕ್ಕೆ ಬ್ರೇಕ್ ಹಾಕಿ


ಆದರೆ ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅಧಿಕಾರಿ ಅನನ್ಯವಾಸುದೇವ ಅವರು ಹಾಸನ ಜಿಲ್ಲೆಯ ಮಲುಗಾನಹಳ್ಳಿಯ ಸಮೀಪದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ. ಅಲ್ಲಿಯೂ ಸುಮಾರು 10 ಕಿಲೋ ಮೀಟರ್ ಭೂಮಿ ಆಳದಲ್ಲಿ ಭೂಕಂಪನವಾಗಿದ್ದು, 3.47 ಮ್ಯಾಗ್ನಿಟ್ಯೂಡ್ ನಲ್ಲಿ ತೀವ್ರತೆ ದಾಖಲಾಗಿದೆ.


ಕೊಡಗಿನ ಸೋಮವಾರಪೇಟೆ ಸುತ್ತಮುತ್ತ ಭೂಕಂಪನ


ಇದರ ಪರಿಣಾಮ ಭೂಕಂಪನದ ಕೇಂದ್ರ ಬಿಂದುವಿನಿಂದ 46 ಕಿಲೋ ಮೀಟರ್ ದೂರದಿಂದ 56 ಕಿಲೋ ಮೀಟರ್ ದೂರದವರೆಗೆ ಇರುತ್ತದೆ. ಹೀಗಾಗಿ ಕೊಡಗಿನ ಸೋಮವಾರಪೇಟೆ ಸುತ್ತಮುತ್ತ ಆಗಿರುವ ಭೂಕಂಪನದ ಅನುಭವದ ಸ್ಥಳಗಳಿಗೆ 46 ಕಿ ಲೋ ಮೀಟರ್ ಆದರೆ, ಮಡಿಕೇರಿ ತಾಲ್ಲೂಕಿನ ಕೆಲವೆಡೆ ಕಂಪನವಾಗಿರುವ ಸ್ಥಳಕ್ಕೆ 56 ಕೀಲೋ ಮೀಟರ್ ಆಗುತ್ತದೆ.


ಇದನ್ನೂ ಓದಿ: Karnataka Rains: 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್; ಉತ್ತರ ಕರ್ನಾಟಕದಲ್ಲಿಯೂ ಮಳೆ


ಹೀಗಾಗಿ ಆ ಅನುಭವ ಆಗಿರಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಜಿಲ್ಲೆಯ ಜನರಿಗೆ ಮಾತ್ರ ಆತಂಕ ಎದುರಾಗಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿಯುವ ಮಳೆಗೆ ಏನು ಅನಾಹುತ ಕಾದಿದೆಯೋ ಎಂಬ ಭಯ ಕಾಡಲಾರಂಭಿಸಿದೆ.

Published by:Divya D
First published: