• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Election Campaign: ಬಿಜೆಪಿ ಶಾಸಕರಿಗೆ ಗ್ರಾಮ ಪ್ರವೇಶಿಸಲು ಬಿಡದ ಜನರು; ಗ್ರಾಮಸ್ಥರಿಂದ ಕ್ಲಾಸ್!

Election Campaign: ಬಿಜೆಪಿ ಶಾಸಕರಿಗೆ ಗ್ರಾಮ ಪ್ರವೇಶಿಸಲು ಬಿಡದ ಜನರು; ಗ್ರಾಮಸ್ಥರಿಂದ ಕ್ಲಾಸ್!

ಬಿಜೆಪಿ

ಬಿಜೆಪಿ

MP Renukacharya: ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ ಮೀಸಲಾತಿ ಕಿತ್ತುಕೊಂಡಿದ್ದೀರಿ ಎಂದು ಯುವಕನೋರ್ವ ಆಕ್ರೋಶ ಹೊರ ಹಾಕಿದ್ದಾನೆ.

  • Share this:

ದಾವಣಗೆರೆ: ಚುನಾವಣೆ ಪ್ರಚಾರಕ್ಕೆ (Election Campaign) ಬಂದಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ (MLA MP Renukacharya) ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿರುವ ಘಟನೆ ನ್ಯಾಮತಿ ತಾಲೂಕಿನ ಕಂಕನಹಳ್ಳಿ ತಾಂಡಾದಲ್ಲಿ (Kankanagalli Tanda) ನಡೆದಿದೆ. ಚುನಾವಣೆ (Assembly Election) ಹಿನ್ನೆಲೆ ಶಾಸಕ ರೇಣುಕಾಚಾರ್ಯ ತಮ್ಮ ಬೆಂಬಲಿಗರ ಜೊತೆಯಲ್ಲಿ  ಕಂಕನಹಳ್ಳಿ ತಾಂಡಾಕ್ಕೆ ತೆರಳುತ್ತಿದ್ರು. ಈ ವೇಳೆ ಗ್ರಾಮ ಪ್ರವೇಶಕ್ಕೆ ಬಿಡದ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ. ತಾಂಡಾದಲ್ಲಿ ಪ್ರಚಾರಕ್ಕೆ ಬಿಡದೇ ಪ್ರವೇಶದ್ವಾರದಿಂದ ಹೊರಗೆ ಕಳುಹಿಸಿದ್ದಾರೆ.


ಮೀಸಲಾತಿ ಕಿತ್ತುಕೊಂಡಿದ್ದೀರಿ


ಗ್ರಾಮದಲ್ಲಿ ಅಭಿವೃದ್ದಿ ಕೆಲಸ ಮಾಡಿಲ್ಲ. ಎಸ್​​ಸಿ ಜಾತಿ ಎಂದು ನಿಮ್ಮ ಕುಟುಂಬ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ ಮಾಡಿದ್ದೀರಿ. ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ ಮೀಸಲಾತಿ ಕಿತ್ತುಕೊಂಡಿದ್ದೀರಿ ಎಂದು ಯುವಕನೋರ್ವ ಆಕ್ರೋಶ ಹೊರ ಹಾಕಿದ್ದಾನೆ.


ನಮ್ಮ ಊರಿಗೆ ಬರಬೇಡಿ


ಕೆಲಸವನ್ನೆ ಮಾಡದೇ ಬರೀ ಫೋಟೊ, ವಿಡಿಯೋ ಪೋಸ್ ಕೊಡುತ್ತೀರಿ. ನೀವು ನಮ್ಮ ಊರಿಗೆ ಬರಬೇಡಿ ಎಂದು ರೇಣುಕಾಚಾರ್ಯ ಅವರ ಮುಂದೆಯೇ ಆಕ್ರೋಶ ಹೊರ ಹಾಕಿದ್ದಾರೆ. ಕೊನೆಗೆ ಶಾಸಕ ರೇಣುಕಾಚಾರ್ಯ ತಾಂಡಾದಲ್ಲಿ ಪ್ರಚಾರ ಮಾಡದೇ ಹಿಂದಿರುಗಿದ್ದಾರೆ.


people  did not allow bjp mlas to enter the village took a class to them mrq
ಶಾಸಕ ರೇಣುಕಾಚಾರ್ಯಗೆ ಕ್ಲಾಸ್


ಬಿಜೆಪಿ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ


ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಬಿಜೆಪಿ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ.




ಇದನ್ನೂ ಓದಿ:  Karnataka Elections: ಇಂದು ರಾಜ್ಯದಲ್ಲಿ ಧೂಳೆಬ್ಬಿಸಲಿದೆ ‘ನಮೋ’ ಸುನಾಮಿ; ಬೆಂಗಳೂರಲ್ಲಿ ಮೋದಿ ರ್‍ಯಾಲಿ, 5 ಕ್ಷೇತ್ರದಲ್ಲಿ ಮತಬೇಟೆ!


ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಬೆಂಬಲಿಗರಿಂದ ಕಲ್ಲು ತೂರಾಟ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published: