ಕೊರೋನಾ ತಡೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಲ್ಫ್​ ಲಾಕ್​ಡೌನ್; ಮಧ್ಯಾಹ್ನದ ಬಳಿಕ ಅಂಗಡಿ-ಮುಂಗಟ್ಟು ಬಂದ್

ಯಾವುದೇ ತೊಂದರೆಯಾಗದ ರೀತಿಯಲ್ಲಿ ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 2 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲು ವ್ಯಾಪಾರಸ್ಥರು ತೀರ್ಮಾನಿಸಿದ್ದಾರೆ. ಕಾರವಾರ ಚೇಂಬರ್ಸ್​​​ ಆಫ್ ಕಾಮರ್ಸ್ ಕರೆಯ ಮೇರೆಗೆ ಬೇರೆ ಬೇರೆ ಸಂಘಟನೆಗಳು ಸ್ವಯಂ ಲಾಕ್ ಡೌನ್​ಗೆ ನಿರ್ಧರಿಸಿದ್ದಾರೆ.

news18-kannada
Updated:July 10, 2020, 4:34 PM IST
ಕೊರೋನಾ ತಡೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಲ್ಫ್​ ಲಾಕ್​ಡೌನ್; ಮಧ್ಯಾಹ್ನದ ಬಳಿಕ ಅಂಗಡಿ-ಮುಂಗಟ್ಟು ಬಂದ್
ಮುಚ್ಚಿರುವ ಅಂಗಡಿ-ಮುಂಗಟ್ಟುಗಳು
  • Share this:
ಕಾರವಾರ(ಜು.10): ರಾಜ್ಯದ ಗಡಿ ಜಿಲ್ಲೆಯ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಕೊರೋನಾ ಸೋಂಕು ವಿಕಾರ ರೂಪ ತಾಳುತ್ತಿದೆ. ಈ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ತಾಲೂಕಿನ ಜನರು ಸ್ವಯಂ ಲಾಕ್ ಡೌನ್ ನಿರ್ಧಾರಕ್ಕೆ ಬಂದಿದ್ದಾರೆ. ಇಂದಿನಿಂದ ಮಧ್ಯಾಹ್ನದ ಬಳಿಕ ಜನತೆ ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ತೀರ್ಮಾನಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಮಹಾಮಾರಿ ಜನತೆಯ ಭೀತಿಗೆ ಕಾರಣವಾಗಿದೆ. ಮಾರ್ಚ್ ತಿಂಗಳಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು ನಿಧಾನವಾಗಿ ವಿಸ್ತರಿಸುತ್ತಾ ಬಂದು ಈಗ 512 ಬಂದು ನಿಂತಿದೆ. ಇದೇ ಜುಲೈ ತಿಂಗಳಲ್ಲಿ ಆರಂಭದಲ್ಲಿ ವ್ಯಾಪಕವಾಗಿ ಜನರಲ್ಲಿ ಸೋಂಕು ಕಾಣಿಸುತ್ತಿರುವುದರಿಂದ ಜನರು ಆತಂಕದಲ್ಲಿ ಇದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳದಲ್ಲಿ ಮಾತ್ರ ಜಿಲ್ಲಾಡಳಿತ ಮಧ್ಯಾಹ್ನ 2ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ನಿರ್ಬಂಧ ವಿಧಿಸಿತ್ತು. ಆದರೆ ಕೋವಿಡ್-19 ಮಹಾಮಾರಿಗೆ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಶಿರಸಿ ಜನರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.  ಮಧ್ಯಾಹ್ನ 2 ಗಂಟೆಯಿಂದ ಮರು ದಿನ ಬೆಳಿಗ್ಗೆ 6 ಗಂಟೆವರೆಗೂ ಸೆಲ್ಪ್ ಲಾಕ್ ಡೌನ್ ಆಗಲಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 512 ಕೊರೋನಾ ಕೇಸ್ ದಾಖಲಾಗಿವೆ. ಬರೋಬ್ಬರಿ ಒಟ್ಟು 300 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದ್ದರೂ ಕೂಡ ಜನತೆ ಸಾಮಾಜಿಕ ಅಂತರವನ್ನ ಮರೆಯುತ್ತಿದ್ದಾರೆ. ಬೇರೆ ಊರಿನಿಂದ ಬಂದ ನಾಗರಿಕರು ಕೂಡ ಬೇಕಾಬಿಟ್ಟಿಯಾಗಿ ಮಾರುಕಟ್ಟೆಗೆ ಬರುತ್ತಿದ್ದಾರೆ. ಅಲ್ಲದೇ ಅಂಗಡಿಗಳನ್ನ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಗ್ರಾಹಕರಿಂದ ವ್ಯಾಪಾರಸ್ಥರಿಗೂ ತೊಂದರೆಯಾಗುತ್ತಿದ್ದು ಭಯಪಡುವಂತಾಗಿದೆ.

ಯಾದಗಿರಿಯಲ್ಲಿ ಡಿಸಿ ಗನ್​ಮ್ಯಾನ್​ಗೆ ಕೊರೋನಾ; ಜಿಲ್ಲಾಡಳಿತ ಕಚೇರಿ ಸೀಲ್​ಡೌನ್

ಹೀಗಾಗಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 2 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲು ವ್ಯಾಪಾರಸ್ಥರು ತೀರ್ಮಾನಿಸಿದ್ದಾರೆ. ಕಾರವಾರ ಚೇಂಬರ್ಸ್​​​ ಆಫ್ ಕಾಮರ್ಸ್ ಕರೆಯ ಮೇರೆಗೆ ಬೇರೆ ಬೇರೆ ಸಂಘಟನೆಗಳು ಸ್ವಯಂ ಲಾಕ್ ಡೌನ್​ಗೆ ನಿರ್ಧರಿಸಿದ್ದಾರೆ. ಇದಕ್ಕೆ ಜನರು‌ ಕೂಡ ಸ್ಪಂದನೆ ನೀಡಲು ಮುಂದಾಗಿದ್ದು, ಇನ್ನು ಕೆಲವರು ಸಮಸ್ಯೆ ಎದುರಿಸಬಹುದು ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಬೆಂಗಳೂರು, ವಿದೇಶಗಳಿಂದ ಉತ್ತರಕನ್ನಡ ಜಿಲ್ಲೆಗೆ ಬರುವವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಕ್ವಾರೆಂಟೈನಲ್ಲಿರಬೇಕಾದ ಮಂದಿ ಕದ್ದು ಮುಚ್ಚಿ ಓಡಾಡುತ್ತಿರುವುದು ಕೂಡ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತಿದೆ. ಜನತೆ ಕೂಡ ತಮ್ಮ ಆರೋಗ್ಯದ ದೃಷ್ಟಿಯಿಂದ ಸ್ವಯಪ್ರೇರಿತರಾಗಿ ಕಾಳಜಿ ವಹಿಸಬೇಕು. ಆ ಮೂಲಕ ಕರೋನಾ ನಿಯಂತ್ರಿಸಿಕೊಳ್ಳಬೇಕೆಂದು ಉತ್ತರಕನ್ನಡ ಜಿಲ್ಲೆಯ ವ್ಯಾಪಾರಸ್ಥರ ಮನವಿಯಾಗಿದೆ.
Published by: Latha CG
First published: July 10, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading