HOME » NEWS » State » PEOPLE CONSUME ALCOHOL AT FAMERS LAND AND FARMERS WORRIED ABOUT THAT AT RAMANAGAR ATVR LG

Ramanagar: ಕುಡುಕರ ಕಾಟಕ್ಕೆ ಬೇಸತ್ತ ರೈತರು; ತಮ್ಮ ಜಮೀನಿಗೆ ಕಾಲಿಡಲು ಮದ್ಯಪ್ರಿಯರ ಭಯ

ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ಆದ ಕೂಡಲೇ ಮದ್ಯಪ್ರಿಯರು ಯಾರು ಸಹ ಮನೆ ಸೇರುತ್ತಿಲ್ಲ. ಬದಲಾಗಿ ತೋಟ, ಗದ್ದೆ, ಹೊಲಗಳಲ್ಲಿ ಸೇರಿ ಎಣ್ಣೆ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡ್ತಿದ್ದಾರೆ. ಆದರೆ ಇದು ಎಲ್ಲೋ ಒಂದು ಕಡೆ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.

news18-kannada
Updated:May 17, 2021, 7:39 AM IST
Ramanagar: ಕುಡುಕರ ಕಾಟಕ್ಕೆ ಬೇಸತ್ತ ರೈತರು; ತಮ್ಮ ಜಮೀನಿಗೆ ಕಾಲಿಡಲು ಮದ್ಯಪ್ರಿಯರ ಭಯ
ಜಮೀನಿನಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು
  • Share this:
ಕನಕಪುರ(ಮೇ 17): ಕೊರೋನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದ್ದು, ಇದು ಕುಡುಕರಿಗೆ ಅನುಕೂಲವಾಗಿದೆ. ಆದರೆ ಕುಡುಕರಿಂದ ರೈತರಿಗೆ ಅನಾನುಕೂಲವಾಗ್ತಿದೆ. ರೈತರ ಹೊಲ, ಗದ್ದೆ, ತೋಟದಲ್ಲಿ ಮದ್ಯಪ್ರಿಯರು ದರ್ಬಾರ್ ಮಾಡುತ್ತಿದ್ದಾರೆ. ರೈತರ ಜಮೀನಿನಲ್ಲಿ ಕುಡಿದು ಬಾಟಲ್ ಹೊಡೆದಿರುವ ಮದ್ಯಪ್ರಿಯರು ಕಸದ ತೊಟ್ಟಿ ಮಾಡ್ತಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ - ಸಾತನೂರು ಮುಖ್ಯರಸ್ತೆಯ ರೈತರ ಜಮೀನಿನಲ್ಲಿ ಘಟನೆ ನಡೆದಿದ್ದು, 10 ಕ್ಕೂ ಹೆಚ್ಚು ಜನ ರೈತರ ಜಮೀನಿನಲ್ಲಿ ಗಾಜಿನ ಬಾಟಲ್ ಗಳು ತುಂಬಿವೆ.

ನೂರಾರು ಸಂಖ್ಯೆಯಲ್ಲಿ ಗಾಜಿನ ಬಾಟಲ್ ಗಳು ಎರಚಾಟವಾಡುತ್ತಿದ್ದು ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಜೊತೆಗೆ ರೈತರ ಜಮೀನಿಗೆ ಹಾನಿ ಮಾಡಬೇಡಿ ಎಂದು ಕನಕಪುರದ ಪರಿಸರ ಪ್ರೇಮಿ ಮರಸಪ್ಪ ರವಿರಿಂದ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.‌ಜಮೀನಿನಲ್ಲಿ ಈ ಘಟನೆ ನಡೆದಿದ್ದು ಸಾಕುಪ್ರಾಣಿಗಳಿಗೂ ಸಮಸ್ಯೆಯಾಗುತ್ತಿದೆ.

ತೌಕ್ತೆ ಎಫೆಕ್ಟ್; ಕಾಫಿನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ರಾಷ್ಟ್ರೀಯ ಹೆದ್ದಾರಿಯ ವಿದ್ಯುತ್ ಕಂಬಗಳು ಧರೆಗೆ

ರೈತರ ಜಮೀನಿಗೆ ಹೋಗಲು ಕಂಟಕ, ಸಾಕುಪ್ರಾಣಿಗಳಿಗೆ ಸೂತಕ

ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ಆದ ಕೂಡಲೇ ಮದ್ಯಪ್ರಿಯರು ಯಾರು ಸಹ ಮನೆ ಸೇರುತ್ತಿಲ್ಲ. ಬದಲಾಗಿ ತೋಟ, ಗದ್ದೆ, ಹೊಲಗಳಲ್ಲಿ ಸೇರಿ ಎಣ್ಣೆ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡ್ತಿದ್ದಾರೆ. ಆದರೆ ಇದು ಎಲ್ಲೋ ಒಂದು ಕಡೆ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ಎಣ್ಣೆ ಪಾರ್ಟಿ ಮಾಡುವ ಮದ್ಯಪ್ರಿಯರ ತಂಡ ರೈತರ ಜಮೀನನ್ನ ಹಾಳು ಮಾಡುತ್ತಿದ್ದಾರೆ. ಬೆಳಗ್ಗೆ ಸಮಯದಲ್ಲಿ ಬಾರದ ಕುಡುಕರ ತಂಡ ರಾತ್ರಿ ಸಮಯದಲ್ಲಿ ಬಂದು ಚೆನ್ನಾಗಿ ಕುಡಿದು ಬಾಟಲ್ ಗಳನ್ನ ಅಲ್ಲಿಯೇ ಹೊಡೆದು ಹೋಗುತ್ತಿದ್ದಾರೆ. ಇದು ನಿಜಕ್ಕೂ ರೈತರಿಗೆ ನುಂಗಲಾರದ ತುತ್ತಾಗಿದೆ.

ಜೊತೆಗೆ ಮದ್ಯಪ್ರಿಯರ ಎಡವಟ್ಟಿನಿಂದಾಗಿ ರೈತರು ತಮ್ಮ ಜಮೀನಿಗೆ ಕಾಲಿಡಲು ಸಹ ಆಗುತ್ತಿಲ್ಲವೆಂಬುದು ಮತ್ತೊಂದು ವಿಷಯ. ಯಾಕೆಂದರೆ ಮದ್ಯಪ್ರಿಯರ ಹಾವಳಿಯಿಂದಾಗಿ ರೈತರ ಜಮೀನಿನಲ್ಲಿ ಕುಡಿದು ಪಾರ್ಟಿ ಮಾಡುವ ಕುಡುಕರ ತಂಡ ಬಾಟಲ್ ಗಳನ್ನ ಅಲ್ಲಿಂದ ಎತ್ತಿಕೊಂಡು ಸಹ ಹೋಗಲ್ಲ. ಬದಲಾಗಿ ಪಾರ್ಟಿ ಮಾಡಿದ ಜಾಗದಲ್ಲಿಯೇ ಹೊಡೆದು ಹಾಕಿ ಹೋಗುತ್ತಿದ್ದಾರೆ. ಇದು ರೈತರಿಗೆ ಕಂಟಕವಾದರೆ,  ದನ, ಕರು, ಎಮ್ಮೆ, ಕುರಿ, ಮೇಕೆಗೆ ಸೂತಕವಾಗಿದೆ.
Youtube Video
ರಾಶಿರಾಶಿ ಬಾಟಲ್ ಗಳು ಇರುವ ರೈತರು ಸಹ ಈಗ ತಲೆಕೆಡಿಸಿಕೊಳ್ಳುತ್ತಿಲ್ಲ. ಇತ್ತ ವ್ಯವಸಾಯವನ್ನು ಮಾಡಲಾಗುತ್ತಿಲ್ಲ. ಜೊತೆಗೆ ಕುಡುಕರು ಬಾಟಲ್ ಹೊಡೆಯುತ್ತಿರುವ ಹಿನ್ನೆಲೆ ರೈತರು, ಸಾಕುಪ್ರಾಣಿಗಳು ಜಮೀನಿಗೆ ಕಾಲಿಡಲು ಸಹ ಆಗುತ್ತಿಲ್ಲ. ಇನ್ನು ಈ ಬಗ್ಗೆ ಕನಕಪುರದ ಪರಿಸರ ಪ್ರೇಮಿ ಮರಸಪ್ಪರವಿ ಮನವಿ ಮಾಡಿದ್ದು ಈ ಬಗ್ಗೆ ಪೊಲೀಸರು ಕಠಿಣ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಇಂತಹ ಪಾರ್ಟಿ ಗಳಿಂದ ಅಪರಾಧಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದೇ, ಹಾಗಾಗಿ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವರದಿ : ಎ.ಟಿ.ವೆಂಕಟೇಶ್
Published by: Latha CG
First published: May 17, 2021, 7:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories