ಧಾರವಾಡ: ಪ್ರಾಣಿಗೆ (Animals) ಇರೊವಷ್ಟು ನಿಯತ್ತು (Loyalty) ಮನುಷ್ಯನಿಗೆ (Human) ಇಲ್ಲ ಎಂಬ ಮಾತಿದೆ. ಅದರಲ್ಲೂ ನಾಯಿ (Dog) ನಿಯತ್ತಿಗೆ ಹೆಸರುವಾಸಿ. ಮಾಲೀಕನ (Owner) ಆಸ್ತಿ ಅಂತಸ್ತನ್ನು ಹಗಲಿರುಳು ಕಾವಲುಗಾರನಾಗಿ ಕಾಯುತ್ತೆ. ಇದರಿಂದಲೇ ಕೆಲವರಿಗೆ ನಾಯಿ ಸಾಕೋದು ಅಂದ್ರೆ ಸಾಕಷ್ಟು ಇಷ್ಟಪಡುತ್ತಾರೆ. ಇನ್ನು ಇತ್ತೀಚಿಗೆ ತೆರೆ ಕಂಡ 777 ಚಾರ್ಲಿ (777 Charlie) ಎಂಬ ಕನ್ನಡ ಸಿನಿಮಾ (Kannada Cinema) ನಾಯಿ ಮತ್ತು ಮನುಷ್ಯನ ನಡುವಿನ ಮಧುರ ಬಾಂಧವ್ಯದ ಕಥೆ ಹೇಳಿತ್ತು. ಇದಾದ ಬಳಿಕ ನಾಯಿ ಸಾಕಲು ತುಂಬಾ ಜನ ಆಸಕ್ತಿ ತೋರಿಸುತ್ತಿದ್ದಾರೆ. ಇತ್ತ ದೇಸಿ ತಳಿಯ ನಾಯಿಗಳನ್ನ ಸಾಕುವುದಕ್ಕಾಗಿಯೇ ಧಾರವಾಡದಲ್ಲಿ (Dharwad) ಒಂದು ದೇಸಿ ನಾಯಿಮರಿಗಳ ದತ್ತು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಈ ಶಿಬಿರದಲ್ಲಿ ಮಾಜಿ ಸಭಾಪತಿ ಒಬ್ಬರು ಎರಡು ನಾಯಿ ಮರಿಗಳನ್ನು ಬುಕ್ ಮಾಡಿಸಿ ದತ್ತು (Adopt) ಪಡೆದಿದ್ದಾರೆ.
ದೇಸಿ ನಾಯಿಮರಿಗಳ ದತ್ತು
ದೇಸಿ ತಳಿ ನಾಯಿಗಳೇ ಸ್ವಲ್ಪ ಡಿಫ್ರಂಟ್. ನಾವು ಅವುಗಳನ್ನ ಬೀದಿ ನಾಯಿ ಎಂದು ಕರೆಯುತ್ತೆವೆ. ರಾತ್ರಿ ಹಗಲು ಎನ್ನದೆ ಮನೆಗೆ ಯಾರೇ ಬಂದ್ರು ಬೊಗಳುವ ಮೂಲಕ ಮನೇ ಮಾಲೀಕರಿಗೆ ಎಚ್ಚರಿಕೆ ನೀಡುತ್ತವೆ. ಅಲ್ಲದೇ ಪರಿಚಯಸ್ಥರು ಬಂದರೆ ಸಾಕು ತನ್ನ ಬಾಲ ಅಲ್ಲಾಡಿಸ್ತಾ ಸ್ವಾಗತ ಕೋರುತ್ತವೆ. ಸದ್ಯ ಇಂಥದ್ದೇ ದೇಸಿ ತಳಿಗಳ ನಾಯಿ ಮರಿಗಳ ದತ್ತು ಪಡೆಯುವ ಕಾರ್ಯಕ್ರಮ ಧಾರವಾಡದಲ್ಲಿ ಆಯೋಜಿಸಿದ್ರು.
ನಾಯಿ ಮರಿ ದತ್ತು ಪಡೆಯಲು ಆಸಕ್ತಿ
ಧಾರವಾಡ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಮಹಾನಗರ ಪಾಲಿಕೆ ಸೇರಿ ಇದನ್ನ ಆಯೋಜನೆ ಮಾಡಿ 25 ಕ್ಕೂ ಹೆಚ್ವು ದೇಸಿ ತಳಿಯ ನಾಯಿ ಮರಿಗಳನ್ನು ಇರಿಸಲಾಗಿತ್ತು. ಈ ಮೊದಲೇ ಈ ದೇಸಿ ನಾಯಿಗಳ ದತ್ತು ಪಡೆಯುವ ಬಗ್ಗೆ ಆನ್ ಲೈನ್ ನಲ್ಲಿ ಮಾಹಿತಿ ನೀಡಲಾಗಿತ್ತು. ಅದರಲ್ಲೇ ಹಲವರು ಈ ಬೀದಿ ನಾಯಿಗಳನ್ನು ದತ್ತು ಪಡೆದಿದ್ರು. ಇನ್ನು ಈ ಮಾಹಿತಿ ತಿಳಿದ ಹಲವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ನಾಯಿಗಳನ್ನ ದತ್ತು ಪಡೆದಿದ್ದಾರೆ.
ಇದನ್ನೂ ಓದಿ: Charlie Special: ಚಾರ್ಲಿಗೆ ಧರ್ಮನೇ ಯಾಕೆ ಇಷ್ಟ ಗೊತ್ತಾ? ಮನುಷ್ಯ ಮತ್ತು ನಾಯಿಗಳ ಬಾಂಧವ್ಯದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ
ಅಲ್ಲದೇ ಈ ಬೀದಿ ನಾಯಿ ವಿಶೇಷತೆ ಏನೆಂದ್ರೆ ಬೇರೆ ತಳಿಯ ನಾಯಿಗಳಿಗೆ ಪೆಡಿಗ್ರಿ ಹಾಗೂ ಅದರದ್ದೇ ಆಹಾರ ಹಾಕಬೇಕು. ಈ ದೇಸಿ ನಾಯಿಗೆ ಹಾಗಲ್ಲ, ನಾವು ಮಾಡುವ ಊಟವನ್ನೇ ಹಾಕಿದರೆ ಸಾಕು, ಅವು ಬದುಕುತ್ತವೆ.
ಶ್ವಾನ ಪ್ರಿಯರ ಸಂತಸ
ಬೀದಿನಾಯಿಗಳು ಹಾಗೂ ಮರಿಗಳು ಎಲ್ಲಂದ್ರಲ್ಲಿ ತಿರುಗಾಡುತ್ತವೆ. ಅವುಗಳಿಗೆ ತಮ್ಮದೇ ಆದ ನೆಲೆ ಇರೊದಿಲ್ಲ. ಅಲ್ಲದೇ ಅವುಗಳಿಗೆ ಕಾಯಿಲೆಗಳು ಸಹ ಕಡಿಮೆ. ಈ ಹಿನ್ನೆಲೆ ದೇಸಿ ನಾಯಿಗಳನ್ನು ಸಾಕುವುದು ತುಂಬಾ ಸುಲಭ. ಅದರಲ್ಲೂ ಬೀದಿನಾಯಿಗಳನ್ನು ಸಾಕಿದ್ರೆ ಅವುಗಳಿಗೆ ಆಸರೆಯಾದಂತೆ ಆಗುತ್ತದೆ. ಈ ಹಿನ್ನೆಲೆ ನಾವು ಸಹ ಒಂದು ನಾಯಿ ದತ್ತು ಪಡೆದಿದ್ದೆನೆ ಎನ್ನುತ್ತಾರೆ ಅಮೂಲ್ಯ.
ನಾಯಿ ದತ್ತು ಪಡೆಯಲು ನಿಯಮ
ಇನ್ನು ಈ ದೇಸಿ ನಾಯಿ ದತ್ತು ಪಡೆದ ಮೇಲೆ ಅದನ್ನ ಸಾಕುವವರಿಗೆ ಕೂಡಾ ಕೆಲ ನಿಯಮ ಇದೆ. ಅವು ಜೀವಂತ ಇರುವವರೆಗೆ ಅದರ ಜವಾಬ್ದಾರಿ ಹೊರಬೇಕು. ಅದಕ್ಕೆ ಏನು ಆಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಪಾಲಿಕೆಯಿಂದ ಅದನ್ನ ಸಾಕುವ ಅನುಮತಿ ಪಡೆಯಬೇಕು. ಇದನ್ನ ಸಾಕುವ ಅನುಮತಿ ಈ ಕಾರ್ಯಕ್ರಮ ಆಯೋಜಕರೇ ಪಾಲಿಕೆಯಿಂದ ಕೊಡಿಸಿದ್ದಾರೆ.
ನಾಯಿ ದತ್ತು ಪಡೆದ ಹೊರಟ್ಟಿ
ಇನ್ನು ಈ ದೇಸಿ ನಾಯಿ ದತ್ತು ಪಡೆಯುವ ಮಾಹಿತಿ ಸಿಗುತಿದ್ದಂತೆಯೇ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಕೂಡಾ ಎರಡು ನಾಯಿ ಬುಕ್ ಮಾಡಿಸಿದ್ದಾರೆ. ಅವರಿಗೆ ಕೂಡಾ ಈ ದೇಸಿ ತಳಿ ತಳಿಗಳ ಎಂದರೆ ಇಷ್ಟಾ ಅಂತೆ. ಹೀಗಾಗಿ ಅವರು ಈಗಾಗಲೇ ತಮ್ಮ ತೋಟದ ಮನೆಯಲ್ಲಿ ಕೂಡಾ ಇವೇ ಸಾಕಿದ್ದಾರೆ.
ಬೀದಿ ನಾಯಿಗಳ ದತ್ತು ಪಡೆಯುವ ಆಸಕ್ತರಿಗಾಗಿ ಕಳೆದ ಒಂದು ವಾರದ ಹಿಂದೆ ನಮ್ಮವೇಬ್ ಸೈಟ್ ನಲ್ಲಿ ಮಾಹಿತಿ ಹಾಕಲಾಗಿತ್ತು. ಆಸಕ್ತುರು ಬುಕ್ ಮಾಡಿ ಇಂದು ತೆಗೆದುಕೊಂಡು ಹೋಗುತ್ತಿದ್ದಾರೆ. ದೇಸಿ ಅಂದ್ರೆಬೀದಿ ನಾಯಿಗಳ ಹಾವಳಿ ಸಹ ಕಡಿಮೆ ಆಗುತ್ತದೆ. ಇದರಿಂದ ದೇಸಿ ನಾಯಿಗಳಿಗೆ ಆಸರೆ ಆಗುತ್ತದೆ ಎಂಬ ಉದ್ದೇಶದಿಂದ ಈ ಕರ್ಯಕ್ರಮ ಮಾಡಲಾಗಿದೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕ ರಮೇಶ.
ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್
ಒಟ್ಟಾರೆಯಾಗಿ ದೇಸಿ ನಾಯಿಗಳನ್ನು ಬೀದಿ ನಾಯಿಗಳೆಂದು ತಾತ್ಸಾರ ಮಾಡೋರ ಮಧ್ಯೆ ಈ ನಾಯಿಗಳಿಗೂ ಬೇಡಿಕೆ ಇದೆ. ಈ ನಾಯಿಗಳನ್ನು ದತ್ತು ಪಡೆಯೋಕೆ ಜನ ಮುಂದೆ ಬರ್ತಾರೆ ಅನ್ನೋದನ್ನು ತೋರಿಸಿಕೊಡುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ