ಚಿಕ್ಕಮಗಳೂರು: ಎರಡು ತಿಂಗಳ ಹಿಂದೆ ನಿರ್ಮಿಸಿದ್ದ ಡಾಂಬರ್ ರಸ್ತೆ (Asphalt Road) ಕಿತ್ತು ಬರುತ್ತಿದ್ದು ಗ್ರಾಮಸ್ಥರು ಗುತ್ತಿಗೆದಾರ ಮತ್ತು ಇಂಜಿನಿಯರ್ (Engineer) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು (Chikkamagaluru) ತಾಲ್ಲೂಕಿನ ತಿರುಗಣ ಗ್ರಾಮದಲ್ಲಿ ಎರಡು ತಿಂಗಳ ಹಿಂದಷ್ಟೇ 1 ಕೋಟಿ ರೂ. ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ರಸ್ತೆ ನಿರ್ಮಾಣಕ್ಕೆ ಗ್ರಾಮದ ಕೆಲವರು ಜಮೀನು (Land) ಬಿಟ್ಟುಕೊಟ್ಟಿದ್ದರು. ಗುತ್ತಿಗೆದಾರ (Contractor) ಹುಲಿಯಪ್ಪ ಗೌಡ ಎಂಬುವರು ಗುತ್ತಿಗೆ ಪಡೆದು ರಸ್ತೆ ನಿರ್ಮಾಣ ಮಾಡಿದ್ದು ರಸ್ತೆ ಕಾಮಗಾರಿ (Road Work) ಸಂಪೂರ್ಣವಾಗಿ ಕಳಪೆಯಾಗಿದೆ. ರಸ್ತೆ ನಿರ್ಮಾಣವಾಗಿ ಎರಡು ತಿಂಗಳು ಮಾತ್ರ ಆಗಿದ್ದು, ತುಂತುರು ಮಳೆಗೆ ಡಾಂಬರ್ ರಸ್ತೆ ಹೆಂಚಿನ ಮೇಲೆ ರೊಟ್ಟಿ ಏಳುವಂತೆ ಕಿತ್ತು ಬರುತ್ತಿದೆ. ಕಳಪೆ ರಸ್ತೆ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಇಂಜಿನಿಯರ್ನನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಕಳಪೆ ರಸ್ತೆ ನಿರ್ಮಾಣ ಮಾಡಿರುವ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ಆಕ್ರೋಶ
ಕಳಪೆ ರಸ್ತೆ ನಿರ್ಮಾಣ ಮಾಡಿರುವ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಿರ್ಮಿಸಿದ್ದ ರಸ್ತೆ ಕಿತ್ತು ಬರುತ್ತಿದೆ. ಯಾವ ರೀತಿ ಕಾಮಗಾರಿ ಮಾಡಿದ್ದಾರೋ ಗೊತ್ತಿಲ್ಲ. ಈ ರಸ್ತೆ ಮಾಡುವ ಬದಲು ಹಾಗೇ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ಕಾಮಗಾರಿ ಮಾಡಿ ಗುತ್ತಿಗೆದಾರ ಎಸ್ಕೇಪ್
ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಳಪೆ ಕಾಮಗಾರಿ ಮಾಡಿ ಗುತ್ತಿಗೆದಾರ ಎಸ್ಕೇಫ್ ಆಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಸ್ತೆ ಸರಿಪಡಿಸದಿದ್ದರೇ ನಾವು ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Rain Alert: ಚಿಕ್ಕಮಗಳೂರಲ್ಲಿ ಮೂರು ದಿನ ಭಾರೀ ಮಳೆ; ಒಂದು ದಿನ ರೆಡ್, ಎರಡು ಆರೆಂಜ್ ಅಲರ್ಟ್ ಘೋಷಣೆ
ದುಡ್ಡು ಹೊಡೆಯಲು ನಿರ್ಮಾಣವಾಗಿತ್ತಾ ರಸ್ತೆ?
ಹೊಸ ಡಾಂಬರ್ ರೊಟ್ಟಿಯಂತೆ ಮೇಲೆ ಏಳುತ್ತಿದ್ದು ಕೆಳಗಡೆ ಇದ್ದ ಹಳೇ ಡಾಂಬರ್ ಕೂಡ ಹಾಗೇ ಇದೆ. ಇದನ್ನ ಕಂಡ ಸ್ಥಳಿಯರು ಅಭಿವೃದ್ಧಿಗಾಗಿ ರಸ್ತೆ ಅಲ್ಲ. ದುಡ್ಡಿಗಾಗಿ ರಸ್ತೆ ನಿರ್ಮಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಇನ್ನು ಈ ಬಗ್ಗೆ ಮಾತಾನಾಡಿರೋ ಗ್ರಾಮಸ್ಥ ಸಂದೀಪ್ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ನಿರ್ಮಿಸಿದ್ದ ರಸ್ತೆ ಕಿತ್ತು ಬರುತ್ತಿದೆ. ಯಾವ ರೀತಿ ಕಾಮಗಾರಿ ಮಾಡಿದ್ದಾರೋ ಗೊತ್ತಿಲ್ಲ, ಈ ರಸ್ತೆ ಮಾಡುವ ಬದಲು ಹಾಗೇ ಬಿಟ್ಟಿದ್ದರೆ ಚೆನ್ನಾಗಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಜಯಂತ್ ಎಂಬುವರು ಮಾತಾನಾಡಿ ಕಳಪೆ ಕಾಮಗಾರಿಯಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಳಪೆ ಕಾಮಗಾರಿ ಮಾಡಿ ಗುತ್ತಿಗೆದಾರ ಎಸ್ಕೇಫ್ ಆಗಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ರಸ್ತೆ ಸರಿಪಡಿಸದಿದ್ದರೇ ನಾವು ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Landslides: ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ; ಕರಿಕೆ ರಸ್ತೆ, ಸಂಪಾಜೆಯ ಕಲ್ಲಾಳದಲ್ಲಿ ಭೂಕುಸಿತ
ತುಂತುರು ಮಳೆಗೇ ಕಿತ್ತು ಬರುತ್ತಿವೆ ರಸ್ತೆ!
ರಸ್ತೆ ನಿರ್ಮಾಣವಾಗಿ ಎರಡು ತಿಂಗಳು ಮಾತ್ರ ಆಗಿದ್ದು, ತುಂತುರು ಮಳೆಗೆ ಡಾಂಬರ್ ರಸ್ತೆ ಹೆಂಚಿನ ಮೇಲೆ ರೊಟ್ಟಿ ಏಳುವಂತೆ ಕಿತ್ತು ಬರುತ್ತಿದೆ. ಕಳಪೆ ರಸ್ತೆ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಇಂಜಿನಿಯರ್ನನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಕಳಪೆ ರಸ್ತೆ ನಿರ್ಮಾಣ ಮಾಡಿರುವ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ