ಅಂದು ಇವರ ಅತೃಪ್ತಿ, ಇಂದು ಬೇರೆಯವರ ಅತೃಪ್ತಿ, ಅತೃಪ್ತರಿಂದ ಸೃಷ್ಟಿಯಾದ ಸರ್ಕಾರದ ಅತೃಪ್ತಿ ಬೆಳೆಯುತ್ತಲೇ ಇದೆ! ಒಟ್ಟಿನಲ್ಲಿ ಈ ಬಿಜೆಪಿ ಸರ್ಕಾರವನ್ನ "ಅತೃಪ್ತ ಸರ್ಕಾರ" ಎನ್ನಬಹುದು!
ಭಾರಿ ಗೌರವದ ನಿರೀಕ್ಷೆಯಲ್ಲಿ ಹೋದ ಅತೃಪ್ತರಿಗೆ ಬಿಜೆಪಿಯಲ್ಲಿ ಈ ಅತಂತ್ರ ಸ್ಥಿತಿ ಬರಬಾರದಿತ್ತು!
ಜನತೆ ಭೀಕರ ಸ್ಥಿತಿಯಲ್ಲಿ, ಬಿಜೆಪಿ ಕುರ್ಚಿ ಕದನದಲ್ಲಿ pic.twitter.com/RsdelsvZ3T
— Karnataka Congress (@INCKarnataka) June 16, 2021
ಮುನಿದಿರುವ ಪ್ರಕೃತಿ
ಅಲ್ಪ ದಯೆತೋರುತ್ತಿರುವ ಕಾರಣದಿಂದಾಗಿಯೋ ಏನೋ, ಕೊರೊನಾ ಸೋಂಕು ಸ್ವಲ್ಪ ತಹಬಂದಿಗೆ ಬರುತ್ತಿದೆ.
ಅಷ್ಟರಲ್ಲಿ @BJP4Karnataka ಸರ್ಕಾರದಲ್ಲಿ ಭಿನ್ನಮತದ ಜಗಳ ತಾರಕಕ್ಕೇರಿ
ಆಡಳಿತ ಯಂತ್ರ ಸಂಪೂರ್ಣ ಸ್ಥಬ್ಧವಾಗಿರುವುದು ರಾಜ್ಯದ ಜನರ ದೌರ್ಭಾಗ್ಯ.
1/5
— Siddaramaiah (@siddaramaiah) June 16, 2021
ಕಚೇರಿಯಲ್ಲಿ ಕೂತು ಕೆಲಸಮಾಡಬೇಕಾದ ಸಚಿವರು ಮತ್ತು ಕ್ಷೇತ್ರದಲ್ಲಿ ಜನರ ಜೊತೆ ಇರಬೇಕಾದ @BJP4Karnataka ಶಾಸಕರು ದೆಹಲಿಯಿಂದ ಬಂದಿರುವ @BJP4India ಹೈಕಮಾಂಡ್ ಪ್ರತಿನಿಧಿ ಮುಂದೆ ಅಹವಾಲು ಸಲ್ಲಿಸಲು ಕ್ಯೂನಲ್ಲಿದ್ದಾರೆ. @CMofKarnataka ಪರ-ವಿರೋಧಿ ಬಣಗಳ ಕಿತ್ತಾಟದಲ್ಲಿ ಜನರ ನೋವನ್ನು ಕೇಳೋರು ಯಾರು?
2/5
— Siddaramaiah (@siddaramaiah) June 16, 2021
ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ, ಲಸಿಕೆ ನೀಡಿಕೆಯ ಕಾರ್ಯ ಕುಂಟುತ್ತಾ ಸಾಗಿದೆ, ಇನ್ನೊಂದೆಡೆ ಕೊರೊನಾ ಮೂರನೇ ಅಲೆಯ ಬಗ್ಗೆ ತಜ್ಞರು ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. @CMofKarnataka
ತನ್ನ ಉಳಿವಿಗಾಗಿ ಹೋರಾಡುತ್ತಿದ್ದಾರೆ, ಜನರನ್ನು ಉಳಿಸುವರು ಯಾರು?
3/5
— Siddaramaiah (@siddaramaiah) June 16, 2021
ಪಕ್ಷಾಂತರಿಗಳ ಅನೈತಿಕ ಬಲದಿಂದ ಬಂದ ಅಧಿಕಾರವನ್ನು ಅನುಭವಿಸುತ್ತಿರುವ @BJP4Karnataka ಮೂಲನಿವಾಸಿ ನಾಯಕರು ಈಗ ಅವರ ವಿರುದ್ಧವೇ ತಿರುಗಿ ಬಿದ್ದಿರುವುದು ಪ್ರಕೃತಿಯ ಸಹಜ ನ್ಯಾಯವೇ ಸರಿ.
ಈಗಲೂ ಕಾಲ ಮಿಂಚಿಲ್ಲ, ಇಂತಹ ಅನೈತಿಕ ಬೆಂಬಲ ಬೇಡವೆಂದಾದರೆ ಪಕ್ಷಾಂತರಿಗಳನ್ನು ಕಿತ್ತು ಹಾಕಿ, ಯಾಕೆ ಗೋಳಾಡುತ್ತೀರಿ?
4/5
— Siddaramaiah (@siddaramaiah) June 16, 2021
ಕೊರೊನಾ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ರಾಜ್ಯಕ್ಕೆ ಸುಭದ್ರ ಸರ್ಕಾರದ ಅಗತ್ಯ ಇದೆ.@BSYBJP ಅವರನ್ನು ಇಟ್ಟುಕೊಳ್ತಿರಾ? ಕಿತ್ತುಹಾಕ್ತೀರಾ?@BJP4Karnataka ಸಂಬಂಧಿಸಿದ ವಿಚಾರ.
ಶೀಘ್ರ ನಿರ್ಧಾರಕ್ಕೆ ಬಂದು ರಾಜ್ಯಕ್ಕೊಂದು ಸುಭದ್ರವಾದ ಸರ್ಕಾರ ಕೊಡಿ,
ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿಹೋಗಿ.
5/5
— Siddaramaiah (@siddaramaiah) June 16, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ