ಐತಿಹಾಸಿಕ ತಾಣ ಬದಾಮಿಯಲ್ಲಿ ಮನೆ ಸ್ಥಳಾಂತರ ನನೆಗುದಿಗೆ, ಮರೀಚಿಕೆಯಾಗಿದೆ ಅಭಿವೃದ್ಧಿ!


Updated:September 6, 2018, 4:24 PM IST
ಐತಿಹಾಸಿಕ ತಾಣ ಬದಾಮಿಯಲ್ಲಿ ಮನೆ ಸ್ಥಳಾಂತರ ನನೆಗುದಿಗೆ, ಮರೀಚಿಕೆಯಾಗಿದೆ ಅಭಿವೃದ್ಧಿ!

Updated: September 6, 2018, 4:24 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ

ಬಾಗಲಕೋಟೆ(ಸೆ.06): ಬಾದಾಮಿ ಐತಿಹಾಸಿಕ ಹಿನ್ನೆಲೆ ಮತ್ತು ಪ್ರವಾಸಿಗರಿಂದ ಗುರುತಿಸಿಕೊಂಡಿದೆ. ಆದರೆ, ಇಲ್ಲಿ ಅಭಿವೃದ್ಧಿ ಮಾತ್ರ ಇನ್ನೂ ಮರೀಚಿಕೆ. ಇಲ್ಲಿರುವ ಮನೆಗಳನ್ನ ಸ್ಥಳಾಂತರಿಸಿ ಎನ್ನುವ ಜನರ ಆಗ್ರಹಕ್ಕೂ ಇನ್ನೂ ಬೆಲೆ ಸಿಕ್ಕಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರದ ಎಂಎಲ್​ಎ. ಇವರಾದರೂ ಜನರ ಕಷ್ಟ ಬಗೆಹರಿಸುತ್ತಾರೋ ನೋಡಬೇಕು.

ಚಾಲುಕ್ಯರ ನಾಡು ಬಾದಾಮಿಯ ಸ್ಮಾರಕಗಳ ಬಳಿ 96ಕ್ಕೂ ಹೆಚ್ಚು ಮನೆಗಳಿವೆ. ಅಗಸ್ತ್ಯ ತೀರ್ಥ ಹೊಂಡದ ಪಕ್ಕದಲ್ಲಿರೋ ಮನೆಗಳನ್ನ ಸ್ಥಳಾಂತrಸಬೇಕು ಅಂತ ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಹೇಳಿದೆ. ಇದೇ ಕಾರಣಕ್ಕೆ ಈ ಮನೆಗಳ ಸುಧಾರಣೆ ಮಾಡುವಂತಿಲ್ಲ. ಹಳೇ ಮನೆ ಕೆಡವಿ ಹೊಸ ಮನೆಯನ್ನೂ ಕಟ್ಟುವಂತಿಲ್ಲ. ಇಷ್ಟಾದ ಮೇಲೆ ಜನ ಮನೆ ಸ್ಥಳಾಂತರಕ್ಕೆ ಒಪ್ಪಿದ್ದರು. ಜನ ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ನೀಡ್ಬೇಕು ಅಂತ ಬೇಡಿಕೆ ಇಟ್ರು. ಸರ್ಕಾರ 2.5 ಕೋಟಿ ರೂಪಾಯಿ ಮಂಜೂರು ಮಾಡಿತ್ತು. ಆದ್ರೆ, ಸರ್ವೇ ಮಾಡಿದ ಅಧಿಕಾರಿಗಳು ಕೇವಲ ಮನೆಗೆ ಪರಿಹಾರ ನೀಡೋದಾಗಿ ತಿಳಿಸಿದ್ರು. ಆದರೆ ಪುನರ್ವಸತಿಗೆ ಜಾಗ ಗುರುತಿಸಿ, ಸೂಕ್ತ ಪರಿಹಾರ ನೀಡ್ಬೇಕು ಅಂತ ಜನ ಆಗ್ರಹಿಸಿದ್ರು. ಮನೆ ಸ್ಥಳಾಂತರ ನನೆಗುದಿಗೆ ಬಿದ್ದೋಯ್ತು. ಸಂಸದ ಪಿ.ಸಿ.ಗದ್ದಿಗೌಡರ್‌, ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಮನೆ ಸ್ಥಳಾಂತರಕ್ಕೆ ಮುಹೂರ್ತ ಕೂಡಿಬಂದಿಲ್ಲ.

ಈ ಬಗ್ಗೆ ನೂತನ ಶಾಸಕ ಸಿದ್ದರಾಮಯ್ಯನವರಿಗೆ ಜನಸಂಪರ್ಕ ಸಭೆಯಲ್ಲಿ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ರು. ಬಳಿಕ ಸಿದ್ದರಾಮಯ್ಯ ಸ್ಥಳ ಪರಿಶೀಲನೆ ಮಾಡಿದ್ರು. ಅವರ ಸೂಚನೆಯಂತೆ ಮನೆ ಸ್ಥಳಾಂತರಿಸಲು ಲೋಕೋಪಯೋಗಿ ಇಲಾಖೆ 32 ಕೋಟಿ ರೂಪಾಯಿ ವೆಚ್ಚದ ಯೋಜನೆಯೊಂದನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದೆ. ಆದ್ರೆ ನಿವಾಸಿಗಳು 2013ರ ಭೂಸ್ವಾಧೀನ ಕಾಯ್ದೆಯಂತೆ ಪುನರ್ವಸತಿ ಹಾಗೂ ಪರಿಹಾರ ನೀಡಿದ್ರೆ ಸ್ಥಳಾಂತರಕ್ಕೆ ಒಪ್ಪಿಕೊಳ್ತೇವೆ ಅಂತಿದ್ದಾರೆ.

ಇನ್ನು ಐತಿಹಾಸಿಕ ಮಹತ್ವ ಹೊಂದಿರೋ ಬಾದಾಮಿ ಅಭಿವೃದ್ಧಿಗಾಗಿ ಅಮೃತ ಯೋಜನೆಯಡಿ 35 ಕೋಟಿ ಹಾಗೂ ಹೃದಯ ಯೋಜನೆಯಲ್ಲಿ 24 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾದರೂ ಕಾಮಗಾರಿಗಳು ಆಮೇಗತಿಯಲ್ಲಿ ನಡೆಯುತ್ತಿವೆ.

ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಅನ್ನಿಸಿಕೊಂಡಿರೋ ಮಾಜಿ ಸಿಎಂ ಸಿದ್ದರಾಮಯ್ಯನವರೇ ಇಲ್ಲಿನ ಶಾಸಕರು. ಇವರಾದ್ರೂ ಜನರ ಸಮಸ್ಯೆ ಬಗೆಹರಿಸ್ತಾರಾ..? ನೋಡಬೇಕು..
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ