ಹಳ್ಳ ಹಿಡಿದ ರಾಷ್ಟ್ರೀಯ ಹೆದ್ದಾರಿ ಯೋಜನೆ; ವಾಹನ ಸವಾರರ ಗೋಳು ಕೇಳೋರಿಲ್ಲ

ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗ್ರಹಣ ಬಡಿದಿದೆ. ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ 75 ಕಿಲೋಮೀಟರ್ ವ್ಯಾಪ್ತಿಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

news18-kannada
Updated:August 12, 2020, 1:18 PM IST
ಹಳ್ಳ ಹಿಡಿದ ರಾಷ್ಟ್ರೀಯ ಹೆದ್ದಾರಿ ಯೋಜನೆ; ವಾಹನ ಸವಾರರ ಗೋಳು ಕೇಳೋರಿಲ್ಲ
ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗ್ರಹಣ ಬಡಿದಿದೆ. ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ 75 ಕಿಲೋಮೀಟರ್ ವ್ಯಾಪ್ತಿಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.
  • Share this:
ಮಂಗಳೂರು (ಆ.12): ದಕ್ಷಿಣಕನ್ನಡ ಜಿಲ್ಲೆಯ ಜನರ ಮಹತ್ವಾಕಾಂಕ್ಷಿ ಯೋಜನೆಯೊಂದು ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತೀ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಅಭಿವೃದ್ಧಿ ಕಾಮಗಾರಿ ತಾಂತ್ರಿಕ ಕಾರಣದಿಂದ ಅರ್ಧಕ್ಕೆ ನಿಲ್ಲುವಂತಾಗಿದೆ.ಅಭಿವೃದ್ಧಿ ಕಾಮಗಾರಿಗಾಗಿ ಈಗಾಗಲೇ ಬೆಟ್ಟ ಗುಡ್ಡಗಳನ್ನು ಅಗೆಯಲಾಗಿದ್ದು ಮಳೆ ಸಂದರ್ಭ ರಸ್ತೆ ಕೆರೆಯಂತಾಗುತ್ತಿದೆ.

ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗ್ರಹಣ ಬಡಿದಿದೆ. ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ 75 ಕಿಲೋಮೀಟರ್ ವ್ಯಾಪ್ತಿಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. 2017ರಲ್ಲಿ 821 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಗುತ್ತಿಗೆ ಪಡೆದ L&T ಕಂಪನಿ ನಷ್ಟದ ಕಾರಣ ನೀಡಿ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದೆ. ಪರಿಣಾಮ ರಸ್ತೆಗಾಗಿ ಅಗೆದಿರುವ ಬೆಟ್ಟ-ಗುಡ್ಡಗಳ ಮಣ್ಣು ಯಾವ ಸಮಯದಲ್ಲಾದರೂ ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ. ಅಲ್ಲದೆ ಸಮರ್ಪಕವಾದ ಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಮಳೆ ನೀರು ಹೆದ್ದಾರಿ ಪಕ್ಕದ ಕೃಷಿ ಭೂಮಿಗಳಿಗೆ ಸೇರುತ್ತಿದೆ, ರಸ್ತೆ ಕೆರೆಯಂತಾಗುತ್ತಿದೆ.

ರಸ್ತೆ ನಿರ್ಮಾಣದ ಜೊತೆಗೆ 14.5 ಕಿಲೋಮೀಟರ್ ಸರ್ವೀಸ್ ರಸ್ತೆ, ಎರಡು ಫ್ಲೈ ಓವರ್, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್ ಪಾಸ್ ಹಾಗೂ ಟೋಲ್ ಪ್ಲಾಝಾ ನಿರ್ಮಾಣ ಈ ಕಾಮಗಾರಿಯಲ್ಲಿ ಒಳಗೊಂಡಿತ್ತು. ಕಾಮಗಾರಿಯನ್ನು ಅತ್ಯಂತ ವೇಗವಾಗಿ ಆರಂಭಿಸಿದ್ದ ಕಂಪನಿಗೆ 45 ಕಿ.ಮೀ ರಸ್ತೆಯನ್ನು ಅಗಲೀಕರಣಗೊಳಿಸಲು ಹಲವು ತೊಡಕುಗಳು ಎದುರಾಗಿತ್ತು.

ಭಾರೀ ಮಳೆಯ ಕಾರಣ ಬೆಟ್ಟ ಗುಡ್ಡಗಳನ್ನು ಅಗೆದು ರಸ್ತೆ ಮಾಡಿದ್ದ ರಸ್ತೆಯ ಮೇಲೆ ಮತ್ತೆ ಕಲ್ಲು ಮಣ್ಣುಗಳು ಬೀಳಲಾರಂಭಿಸಿತ್ತು. ಈ ಕಾರಣಕ್ಕಾಗಿ ಒಮ್ಮೆ ನಿರ್ಮಿಸಿದ್ದ ರಸ್ತೆಯನ್ನು ಮತ್ತೆ ನಿರ್ಮಿಸಬೇಕಾದ ಸ್ಥಿತಿಯೂ ಬಂದೊದಗಿತ್ತು. ಈ ಕಾರಣಕ್ಕಾಗಿ ಸುಮಾರು 108 ಕೋಟಿ ರೂಪಾಯಿಗಳ ನಷ್ಟ ಪರಿಹಾರ ನೀಡುವಂತೆ ಕಂಪನಿಯು ಹೆದ್ದಾರಿ ಪ್ರಾಧಿಕಾರವನ್ನು ವಿನಂತಿಸಿತ್ತು. ಆದರೆ ಈ ವಿನಂತಿಗೆ ಮನ್ನಣೆ ನೀಡದ ಕಾರಣಕ್ಕಾಗಿ ಕಂಪನಿಯು ರಸ್ತೆ ನಿರ್ಮಾಣ ಕಾಮಗಾರಿಯಿಂದ ಹಿಂದೆ ಸರಿದಿದೆ.

ರಸ್ತೆ ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟು ಎರಡು ವರ್ಷಗಳಾಗುತ್ತಿದೆ. ಮಳೆಗಾಲ ಬಂದಾಗ ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿಯ ದುಷ್ಪರಿಣಾಮ ಜನರ ಮೇಲಾಗುತ್ತಿದೆ. ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಮತ್ತೆ ಹೆದ್ದಾರಿ ಕಾಮಗಾರಿಯನ್ನು ಆರಂಭಿಸಬೇಕು ಎನ್ನುವ ಒತ್ತಡ ಸಾರ್ವಜನಿಕರಿಂದ ಕೇಳಿಬರಲಾರಂಭಿಸಿದೆ.
Published by: Rajesh Duggumane
First published: August 12, 2020, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading