HOME » NEWS » State » PEOPLE ARE CONFUSED TO GET CORONA VACCINE DUE TO BBMP VACCINE PORTAL FAULT CANK LG

ಬಿಬಿಎಂಪಿ  ವ್ಯಾಕ್ಸಿನ್ ಪೋರ್ಟಲ್ ಯಡವಟ್ಟು; ಲಸಿಕೆಗಾಗಿ ಸಾರ್ವಜನಿಕರ ಪರದಾಟ

ಇನ್ನೂ ಬಿಬಿಎಂಪಿ ತನ್ನ ಪೋರ್ಟಲ್​ನಲ್ಲಿ ಬೆಂಗಳೂರು ನಗರ ಸೇರಿದಂತೆ ಬೇರೆ ಬೇರೆ ಕಡೆಯ ಜನರಿಗೆ ಆನೇಕಲ್​ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮ್ಯಾಪಿಂಗ್ ಮಾಡಿದ್ದು, ನಿತ್ಯ ನೂರಾರು ಮಂದಿ ಲಸಿಕೆಗಾಗಿ ಆನೇಕಲ್ನತ್ತ ಮುಖ ಮಾಡುತ್ತಿದ್ದಾರೆ . ಇದರಿಂದ ಸ್ಥಳೀಯರಿಗೆ ಲಸಿಕೆ ಸಿಗುತ್ತಿಲ್ಲ . ಆನೇಕಲ್ ತಾಲ್ಲೂಕಿನಾದ್ಯಂತ ಕೊರೊನಾ ದಿನದಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣವು ಸಹ ಅಧಿಕವಾಗುತ್ತಿದೆ .

news18-kannada
Updated:May 13, 2021, 8:32 AM IST
ಬಿಬಿಎಂಪಿ  ವ್ಯಾಕ್ಸಿನ್ ಪೋರ್ಟಲ್ ಯಡವಟ್ಟು; ಲಸಿಕೆಗಾಗಿ ಸಾರ್ವಜನಿಕರ ಪರದಾಟ
ಸಾಂದರ್ಭಿಕ ಚಿತ್ರ.
  • Share this:
ಆನೇಕಲ್(ಮೇ.13) : ಸರ್ಕಾರ ಕೊರೊನಾ ಮಹಾಮಾರಿ ಸಂಹಾರಕ್ಕಾಗಿ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಲು ತಿಳಿಸಿದೆ . ಜೊತೆಗೆ ಕೋವಿನ್ ಎಂಬ ಆ್ಯಪ್​​ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿದೆ.  ಆದ್ರೆ ಬಿಬಿಎಂಪಿ ಪೋಟರ್ಲ್​​ನಲ್ಲಿ ಲಸಿಕೆ ಕೇಂದ್ರದ ಬಗ್ಗೆ ಅಸ್ಪಷ್ಟ ಮಾಹಿತಿ ನಮೂದಾಗುತ್ತಿದೆ . ಇದರಿಂದ ಕೊರೊನಾ ಮಹಾಮಾರಿ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಪರದಾಡುವಂತಾಗಿದೆ .

ಹೌದು, ಕೊರೋನಾ ಮಹಾಮಾರಿ ಜನರ ಮೇಲೆ ಸಾವಿನ ಸವಾರಿ ಮಾಡುತ್ತಿದೆ . ಇದರಿಂದ ಜನ ಲಸಿಕೆ ಹಾಕಿಸಿಕೊಳ್ಳುಲು ಮುಂದಾಗಿದ್ದಾರೆ . ಬಿಬಿಎಂಪಿ ಪೋರ್ಟಲ್​​ನಲ್ಲಿ ಲಸಿಕೆಗಾಗಿ ಹೆಸರು ನೊಂದಾಯಿಸಿಕೊಂಡಿದ್ದಾರೆ . ಆದ್ರೆ ಬೆಂಗಳೂರು ನಗರ , ಮಾಗಡಿ ಸೇರಿದಂತೆ ದೂರದ ಜನಕ್ಕೆ ಆನೇಕಲ್ ತಾಲ್ಲೂಕಿನಲ್ಲಿನ ಲಸಿಕಾ ಕೇಂದ್ರಗಳನ್ನು ಮ್ಯಾಪ್ ಮಾಡಲಾಗಿದೆ .

ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯಿಂದ ಆನೇಕಲ್​​ಗೆ ಬರಲು ಕಷ್ಟವಾಗುತ್ತಿದೆ . ಹೇಗೋ ಕಷ್ಟಪಟ್ಟು ಬಂದರೂ ಲಸಿಕಾ ಕೇಂದ್ರಗಳಲ್ಲಿ ಸೀಮಿತ ಮಂದಿಗೆ ಮಾತ್ರ ಲಸಿಕೆ ಹಾಕಲಾಗುತ್ತಿದೆ . ಇದರಿಂದ ನಿತ್ಯ ನೂರಾರು ಮಂದಿ ಲಸಿಕೆ ಪಡೆಯದೇ ಕಾದು ಕಾದು ವಾಪಸ್ ಹೋಗಬೇಕಾದ ಅನಿವಾರ್ಯತೆ ಇದೆ . ಆಯಾ ಪ್ರದೇಶದ ಲಸಿಕಾ ಕೇಂದ್ರಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು . ಇಲ್ಲವಾದರೆ ಜನ ಸುತ್ತಾಡುವುದು ತಪ್ಪುವುದಿಲ್ಲ . ಸರ್ಕಾರ ಲಾಕ್​​ಡೌನ್ ಮಾಡಿ ಏನು ಪ್ರಯೋಜನ ಎಂದು ಸಾರ್ವಜನಿಕರಾದ ಉಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾತ್ರೋರಾತ್ರಿ ಆಕ್ಸಿಜನ್ ತುಂಬಿಸಿಕೊಂಡು ಬಂದು ಆತಂಕ ದೂರ ಮಾಡಿದ ಶಾಸಕ ರೇಣುಕಚಾರ್ಯ

ಇನ್ನೂ ಬಿಬಿಎಂಪಿ ತನ್ನ ಪೋರ್ಟಲ್​ನಲ್ಲಿ ಬೆಂಗಳೂರು ನಗರ ಸೇರಿದಂತೆ ಬೇರೆ ಬೇರೆ ಕಡೆಯ ಜನರಿಗೆ ಆನೇಕಲ್​ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮ್ಯಾಪಿಂಗ್ ಮಾಡಿದ್ದು, ನಿತ್ಯ ನೂರಾರು ಮಂದಿ ಲಸಿಕೆಗಾಗಿ ಆನೇಕಲ್ನತ್ತ ಮುಖ ಮಾಡುತ್ತಿದ್ದಾರೆ . ಇದರಿಂದ ಸ್ಥಳೀಯರಿಗೆ ಲಸಿಕೆ ಸಿಗುತ್ತಿಲ್ಲ . ಆನೇಕಲ್ ತಾಲ್ಲೂಕಿನಾದ್ಯಂತ ಕೊರೊನಾ ದಿನದಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣವು ಸಹ ಅಧಿಕವಾಗುತ್ತಿದೆ .

ಸ್ಥಳೀಯವಾಗಿ ಆಯಾ ಪ್ರದೇಶದ ಜನರಿಗೆ ಯಾವುದೇ ತೊಂದರೆ ಇಲ್ಲದೆ ಲಸಿಕೆ ದೊರೆಯುವಂತಾಗಬೇಕು . ಹಾಗಾಗಿ ಬಿಬಿಎಂಪಿ ಅಧಿಕಾರಿಗಳು ಪೋರ್ಟಲ್​​ನಲ್ಲಿ ಆಯಾ ಪ್ರದೇಶಗಳಲ್ಲಿ ಲಸಿಕೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು . ಇಲ್ಲವಾದರೆ ಆನೇಕಲ್ ಜನತೆಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದು ಸ್ಥಳೀಯರಾದ ಲಕ್ಷ್ಮೀ ನಾರಾಯಣ್ ಒತ್ತಾಯಿಸಿದ್ದಾರೆ .
Youtube Video
ಒಟ್ಟಿನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದ ಜನ ಇದೀಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ . ಆದ್ರೆ ಬಿಬಿಎಂಪಿ ಪೋರ್ಟಲ್ ಅಸ್ಪಷ್ಟ ಮಾಹಿತಿಯಿಂದಾಗಿ ಪರದಾಡುವಂತಾಗಿದ್ದು, ಇನ್ನಾದರೂ ಬಿಬಿಎಂಪಿ ಲಸಿಕೆ ಪಡೆಯುವ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕಿದೆ.
Published by: Latha CG
First published: May 13, 2021, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories