• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಹಲವು ವರ್ಷಗಳ ಹಿಂದೆ ಇದ್ದ ಬೆಂಗಳೂರು ಈಗಿಲ್ಲ! ಆಗಿರುವ ಹತ್ತು ಹಲವು ಬದಲಾವಣೆಗಳಿವು

Bengaluru: ಹಲವು ವರ್ಷಗಳ ಹಿಂದೆ ಇದ್ದ ಬೆಂಗಳೂರು ಈಗಿಲ್ಲ! ಆಗಿರುವ ಹತ್ತು ಹಲವು ಬದಲಾವಣೆಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಕೆಲ ಹೆಗ್ಗುರುತುಗಳಾದ ಪ್ಲಾಜಾ, ಬ್ಲೂ ಫಾಕ್ಸ್, ಥಾಮಸ್ ಕುಕ್ ಮತ್ತು ಸ್ಪೆನ್ಸರ್ಸ್ ಇವೆಲ್ಲಾ ಕಣ್ಮರೆಯಾಗಿವೆ.

  • Share this:

ಬೆಂಗಳೂರು: ಜಗತ್ತು ಅಭಿವೃದ್ಧಿಯಾಗುತ್ತಿರುವಾಗ ಹಳೇ ಬೇರು ಹೊಸ ಚಿಗುರು ಎನ್ನುವಂತೆ ಊರು, ಕೇರಿ, ಜನ, ಜೀವನ ಎಲ್ಲವೂ ಬದಲಾಗುತ್ತದೆ. ಇದಕ್ಕೆ ಕನಸಿನ ಊರು ಬೆಂಗಳೂರು ನಗರ ಹೊರತಾಗಿಲ್ಲ. ಬೆಂಗಳೂರು (Bengaluru Latest News) ಈಗ ವಿಶ್ವದಲ್ಲೇ ಗುರುತಿಸಿಕೊಂಡಿರುವ ನಗರ. ತಂತ್ರಜ್ಞಾನ, ವೈದ್ಯಕೀಯ, ಪರಂಪರೆ, ಸಂಸ್ಕೃತಿ, ಹವಾಮಾನ, ಉದ್ಯೋಗವಕಾಶ, ಕಲರ್‌ಫುಲ್‌ ಜೀವನ, ಹೀಗೆ ಎಲ್ಲದಕ್ಕೂ ಸೂರು (Bengaluru City) ಈ ಬೆಂಗಳೂರು.


ಮಲಯಾಳಂನ ಬೆಂಗಳೂರು ಡೇಸ್‌ ಸಿನಿಮಾ ನೋಡಿದವರಿಗೆ ಬೆಂಗಳೂರಿಗೆ ಹೋಗಿ ರಾತ್ರಿ ಹೊತ್ತು ಎಂಜಿ ರೋಡ್‌ನಲ್ಲಿ ಬೈಕ್‌ ತಗೊಂಡು ಸ್ನೇಹಿತರ ಜೊತೆ ರೌಂಡ್‌ ಹೊಡಿಲೇಬೇಕು ಅನ್ಸಿರುತ್ತದೆ. ಹೀಗೆ ಬೆಂಗಳೂರಿಗೆ ಕನಸು ಕಟ್ಟಿಕೊಂಡು ಬಂದವರೇ ಹೆಚ್ಚು. ಆದರೆ ಈ ಟ್ರಾಫಿಕ್‌, ಜನಜಂಗುಳಿ ಎಲ್ಲವೂ ಹಳೆಯ ಬೆಂಗಳೂರಿನ ಅನುಭವವನ್ನು ನೀಡುತ್ತಿಲ್ಲ ಎನ್ನುತ್ತಾರೆ ಆ ಬದುಕನ್ನು ಜೀವಿಸಿದ ಜನ


ಹಳೇಯ ಬೆಂಗಳೂರು
ನಾವೆಲ್ಲಾ ನೋಡುತ್ತಿರುವ ಈ ಬೆಂಗಳೂರು ಮೊದಲು ಹೀಗಿರಲಿಲ್ಲ. ಸುಮಾರು 45 ವರ್ಷಗಳ ಹಿಂದೆ ಇದ್ದ ನಗರದ ಕಥೆಯೇ ಬೇರೆ ನೋಡಿ. ಆ ಬೆಂಗಳೂರು ನೋಡಿದ, ಜೀವನ ಅನುಭವಿಸಿದ ಜನರಿಗೆ ಇನ್ನೂ ಸಹ ಆ ಹಳೆಯ ಬೆಂಗಳೂರೆ ಇಷ್ಟ.


ಕಂಟೋನ್ಮೆಂಟ್‌ ಎಂಬ ಕುತೂಹಲಕಾರಿ ಸ್ಥಳ
ಆಗ ಬೆಂಗಳೂರಲ್ಲಿ ಈ ಕಂಟೋನ್ಮೆಂಟ್ ಎಂಬುವುದು ಕುತೂಹಲಕಾರಿಯಾಗಿತ್ತು . ಈ ಜಾಗ ಆಗಿನವರ ಹಾಟ್‌ ಫೇವರೇಟ್. ಇಲ್ಲಿನ ಬಹುತೇಕ ರಸ್ತೆಗಳು ಬ್ರಿಟಿಷ್ ಹೆಸರುಗಳನ್ನು ಹೊಂದಿದ್ದು, ಇಲ್ಲಿನ ಮಾರ್ಗಗಳನ್ನು ಸೇನಾ ಹಿನ್ನೆಲೆ ಇರುವ, ಬ್ರಿಟಿಷ್ ಗಣ್ಯವ್ಯಕ್ತಿಗಳನ್ನು ನೆನಪಿಸುವ ರಸ್ತೆಗಳೆಂದು ಗುರುತಿಸಲಾಗಿತ್ತು. ಇಂದು ಅನೇಕ ಇಂಗ್ಲಿಷ್ ಹೆಸರುಗಳ ರಸ್ತೆಗಳಿಗೆ ಮರುನಾಮಕರಣ ಆಗಿದೆಯಾದರೂ, ಅವುಗಳ ಹಿಂದಿನ ಚರಿತ್ರೆ ಮಾತ್ರ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಸಿವಿಲ್ ಮತ್ತು ಮಿಲಿಟರಿ ಸ್ಟೇಷನ್, ಕಬ್ಬನ್ ಪಾರ್ಕ್ ಹೀಗೆ ಪ್ರತಿಯೊಂದೂ ತನ್ನದೇ ಆದ ಸಾಂಸ್ಕೃತಿಕ ಪರಿಸರವನ್ನು ಹೊಂದಿತ್ತು.


ಆಗ ತಾಜ್ ಬಿರಿಯಾನಿಯದ್ದೇ ಹವಾ
ಹಿಂದಿನ ಬೆಂಗಳೂರು ಬಗ್ಗೆ ಹೇಳೋದಾದರೆ ದಿನಗಳೇ ಸಾಲದಷ್ಟು ವಿಷಯಗಳಿವೆ. ಈಗಿನವರಂತೆ ದೋಸೆ ತಿನ್ನಲು ವಿದ್ಯಾರ್ಥಿ ಭವನಕ್ಕೆ, ತಿಂಡಿ ತಿನ್ನಲು ಮಾವಳ್ಳಿ ಟಿಫಿನ್ ರೂಮ್ಸ್‌ಗೆ ಹೋಗುವಂತೆ ಆಗಲೂ ಸಹ ತಾಜ್ ಬಿರಿಯಾನಿ ಸಖತ್‌ ಜನಪ್ರಿಯ. ಇದನ್ನು ಸವಿಯಲು ಜನ ಸೆಪಿಂಗ್ಸ್ ರಸ್ತೆಯ ಮೂಲಕ ಶಿವಾಜಿ ನಗರಕ್ಕೆ ಬರುತ್ತಿದ್ದರು. ಇದು ಆಗಿನವರ ಮತ್ತೊಂದು ಹವ್ಯಾಸ.


ಹಳೇಯ ಕೆಲ ಜಾಗಗಳೇ ನೆನಪಿನ ಬುತ್ತಿ
ಮಲ್ಲೇಶ್ವರಂನಲ್ಲಿರುವ CTR (ಸೆಂಟ್ರಲ್ ಟಿಫಿನ್ ರೂಮ್), ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಕೋಶಿ ಮತ್ತು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಭಗತ್ರಂ ಸ್ವೀಟ್ಸ್‌ನಂತಹ ಅವರ ಹಳೆಯ ಅಂಗಡಿಗಳು ಇನ್ನೂ ನೆನಪುಳಿಯುವಂತಹ ಸ್ಥಳಗಳು. ಇವನ್ನೂ ಇನ್ನೂ ಸಹ ಹೊಸ ತಲೆಮಾರಿನವರು ನಡೆಸಿಕೊಂಡು ಬರುತ್ತಿರುವುದೇ ದೊಡ್ಡ ಖುಷಿ ನೋಡಿ. ಹಳೆಯ ಬೆಂಗಳೂರನ್ನು ಇಂತಹ ಕೆಲವು ಜಾಗಗಳು ನೆನಪಿಸುತ್ತವೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ: Koppal: 48 ಲಕ್ಷ ವಿದ್ಯಾರ್ಥಿಗಳಿಗಾಗಿ ಕೊಪ್ಪಳದ 6ನೇ ಕ್ಲಾಸ್ ಬಾಲಕನಿಂದ ಹೈಕೋರ್ಟ್ ಹೋರಾಟ!


ಕಣ್ಮರೆಯಾಗಿಯೇ ಬಿಟ್ಟಿದೆ ಕೆಲ ಹೆಗ್ಗುರುತುಗಳು
ಆದರೆ ಇನ್ನೂ ಬೆಂಗಳೂರಿನ ಕೆಲವು ಹೆಗ್ಗುರುತುಗಳಾದ ಪ್ಲಾಜಾ, ಬ್ಲೂ ಫಾಕ್ಸ್, ಥಾಮಸ್ ಕುಕ್ ಮತ್ತು ಸ್ಪೆನ್ಸರ್ಸ್ ಇವೆಲ್ಲಾ ಕಣ್ಮರೆಯಾಗಿವೆ. ಹಾಗೆಯೇ ಕೆಲ ಗುರುತುಗಳು ಹೆಸರು ಹೇಳದೇ ಕಾಣೆಯಾಗಿ ಹೋಗಿವೆ. ಮತ್ತೆ ಕೆಲವು ಹಳೇ ಬೇರು ಹೊಸ ಚಿಗುರು ಎನ್ನುವಂತೆ ಮಾರ್ಪಾಡಾಗಿವೆ. ಉದ್ಯಾನ್ ಹೋಟೆಲ್ ಪ್ರೆಸ್ಟೀಜ್ ಮೆರಿಡಿಯನ್ ಆದರೆ, ಹೋಟೆಲ್ ವಿಕ್ಟೋರಿಯಾ ಸೆಂಟ್ರಲ್ ಮಾಲ್ ಆಗಿ ಮಾರ್ಫ್ ಆಗಿದೆ ಮತ್ತು ಶ್ರೀರಾಜ್ ಲಸ್ಸಿ ಬಾರ್ ಚಾನ್ಸೆರಿ ಹೋಟೆಲ್ ಆಗಿ ಮಾರ್ಪಾಡಾಗಿದೆ.




ಇದನ್ನೂ ಓದಿ: Bengaluru To Chennai: ಬೆಂಗಳೂರಿನಿಂದ ದೇಶದ ಪ್ರಮುಖ ನಗರ ಸಂಪರ್ಕಿಸುವ ರೈಲುಗಳ ವೇಗ ಹೆಚ್ಚಳ


ಆದರೆ ಇನ್ನೂ ಸಹ ಹಳೇ ಬೆಂಗಳೂರನ್ನು ನೆನಪಿಸುವ ಕೆಲ ಅಂಶಗಳು ಜೀವಂತವಾಗಿವೆ ಎನ್ನಬಹುದು. ಮುಖ್ಯವಾಗಿ ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್, ಹಿಗ್ಗಿನ್‌ಬಾಥಮ್‌ನ ಕಾವೇರಿ ಎಂಪೋರಿಯಂ, ಸಾಧ್ವನಿಯ, TPM ಕಚೇರಿಗಳು ಮತ್ತು ಮೇಯೊ ಹಾಲ್ ಇವು ಆಗಿನ ಬೆಂಗಳೂರನ್ನು ನೆನಪಿಸುತ್ತವೆ.

Published by:ಗುರುಗಣೇಶ ಡಬ್ಗುಳಿ
First published: