HOME » NEWS » State » PENSION MONEY DOES NOT COME TO RETIRED TEACHERS OF CHIKKAMAGALURU VCTV LG

ಪಿಂಚಣಿ ಹಣಕ್ಕಾಗಿ ಅಲೆದಾಡುತ್ತಿರುವ ಅನುದಾನಿತ ಶಾಲೆಗಳ ಶಿಕ್ಷಕರ ಗೋಳು ಕೇಳೋರಿಲ್ಲ

ಇನ್ನು ವಯಸ್ಸಾಗಿರೋ ಹಿನ್ನೆಲೆ ಕೆಲವರು ನಾನಾ ಖಾಯಿಲೆಗಳಿಂದ ಬಳಲುತ್ತಿದ್ದು ಮಾತ್ರೆ ತೆಗೆದುಕೊಳ್ಳಲು  ಹಣವಿಲ್ಲದಂತಾಗಿದೆ. ನಾಲ್ಕೈದು ತಿಂಗಳಿಂದ ಹಣ ವಿಲ್ಲದೆ ಪರದಾಡುತ್ತಿದ್ದೇವೆ, ನಾವು ಎಲ್ಲಾ ಅಧಿಕಾರಿಗಳ ಬಳಿಯೂ ಹೋಗಿ ಹಣ ಕೇಳಿದ್ದೇದೆ. ಆದ್ರೆ,  ಸರ್ಕಾರ ದಿಂದ ಬಂದಿಲ್ಲ ಅಂತಿದ್ದಾರೆ. ಹಾಗಾದ್ರೆ, ನಾವು ಹೇಗೆ ಬದುಕೋದು ಎಂದು ತಮ್ಮ ಅವಲತ್ತು ತೋಡಿಕೊಂಡಿದ್ದಾರೆ.

news18-kannada
Updated:November 22, 2020, 10:50 AM IST
ಪಿಂಚಣಿ ಹಣಕ್ಕಾಗಿ ಅಲೆದಾಡುತ್ತಿರುವ ಅನುದಾನಿತ ಶಾಲೆಗಳ ಶಿಕ್ಷಕರ ಗೋಳು ಕೇಳೋರಿಲ್ಲ
ನಿವೃತ್ತ ಶಿಕ್ಷಕಿಯರು
  • Share this:
ಚಿಕ್ಕಮಗಳೂರು(ನ.22): ಅವರೆಲ್ಲಾ 30-35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶಿಕ್ಷಕರು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಗುರುಗಳು. ಸೇವೆಯಲ್ಲಿದ್ದಾಗ ತಮ್ಮ ಕರ್ತವ್ಯವನ್ನ ನಿಷ್ಠೆಯಿಂದ ಮಾಡಿದ ಶಿಕ್ಷಕರು ಅವ್ರು.  ಆದ್ರೆ, ಸೇವೆ ಮುಗಿಸಿದ ಮೇಲೆ ಅವರ ಪಾಡು ಹೇಳತೀರದ್ದಾಗಿದೆ.  ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೂರಾರು ಶಿಕ್ಷರಿಗೆ ಪಿಂಚಣಿ ಬಾರದೆ  ಬದುಕು ಶೋಚನೀಯ ಸ್ಥಿತಿ ತಲುಪಿದೆ. ಪೆನ್ಷನ್ ಹಣವನ್ನೇ ನಂಬಿಕೊಂಡಿದ್ದ ನಿವೃತ್ತ ಶಿಕ್ಷಕರ ಬದುಕು ಬೀದಿಗೆ ಬಿದ್ದಿದ್ದು, ಭವಿಷ್ಯದ ಬಗ್ಗೆ ಅತಂತ್ರರಾಗಿದ್ದಾರೆ. ಒಬ್ಬೊಬ್ಬ ಶಿಕ್ಷಕರದ್ದು ಒಂದೊಂದು ಗೋಳು.

ಇಳಿ ವಯಸ್ಸಲ್ಲೂ ನೆಮ್ಮದಿ ಇಲ್ಲದೆ ಪೆನ್ಷನ್ ಗಾಗಿ ಅಲೆದಾಡುತ್ತಿರೋ ವೃದ್ದರು. ತಮ್ಮ ಕಷ್ಟಗಳ ಬಗ್ಗೆ ಅಳಲು ತೋಡಿಕೊಳ್ಳುತ್ತಿರುವ ನಿವೃತ್ತ ಶಿಕ್ಷಕಿಯರು. ನಮಗೆ ಪೆನ್ಷನ್ ಕೊಡಿಸಿ ಎಂದು ಮನವಿ ಮಾಡ್ತಿರೋ ವಿದ್ಯಾದೇವತೆಗಳು. ಇವರೆಲ್ಲ ಚಿಕ್ಕಮಗಳೂರಿನ ವಿವಿಧ ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು.

ಜಿಲ್ಲೆಯ ಪ್ರತಿಷ್ಠಿತ ಅನುದಾನಿತ ಶಾಲೆಗಳಲ್ಲಿ 30-35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ರು. ಸದ್ಯ ನಾಲ್ಕೈದು ತಿಂಗಳಿನಿಂದ ಪೆನ್ಷನ್ ಬಾರದೆ ಬದುಕಿಗಾಗಿ ಅಲೆದಾಡ್ತಿದ್ದಾರೆ. ಪೆನ್ಷನ್ ಹಣವನ್ನೇ ನಂಬಿ ಬದುಕ್ತಿದ್ದ ಹಿರಿ ಜೀವಗಳಿಗೆ ಪೆನ್ಷನ್ ಹಣ ಬಾರದೆ ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಇನ್ನು ವಯಸ್ಸಾಗಿರೋ ಹಿನ್ನೆಲೆ ಕೆಲವರು ನಾನಾ ಖಾಯಿಲೆಗಳಿಂದ ಬಳಲುತ್ತಿದ್ದು ಮಾತ್ರೆ ತೆಗೆದುಕೊಳ್ಳಲು  ಹಣವಿಲ್ಲದಂತಾಗಿದೆ. ನಾಲ್ಕೈದು ತಿಂಗಳಿಂದ ಹಣ ವಿಲ್ಲದೆ ಪರದಾಡುತ್ತಿದ್ದೇವೆ, ನಾವು ಎಲ್ಲಾ ಅಧಿಕಾರಿಗಳ ಬಳಿಯೂ ಹೋಗಿ ಹಣ ಕೇಳಿದ್ದೇದೆ. ಆದ್ರೆ,  ಸರ್ಕಾರ ದಿಂದ ಬಂದಿಲ್ಲ ಅಂತಿದ್ದಾರೆ. ಹಾಗಾದ್ರೆ, ನಾವು ಹೇಗೆ ಬದುಕೋದು ಎಂದು ತಮ್ಮ ಅವಲತ್ತು ತೋಡಿಕೊಂಡಿದ್ದಾರೆ.

ವಿಜಯನಗರ ಹೊಸ ಜಿಲ್ಲೆ ಅಸ್ತು ಬೆನ್ನಲ್ಲೇ ಜಮಖಂಡಿಯಲ್ಲಿ ಕೇಳದ ಕೂಗು; ನಾಮಕಾವಸ್ಥೆಯಾಗ್ತಿದೆಯಾ ಜಮಖಂಡಿ ಹೊಸ ಜಿಲ್ಲೆ ಬೇಡಿಕೆ?

ಜಿಲ್ಲೆಯ ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡಿದ 25ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತಿ ಹೊಂದಿದ್ರು. ನಮಗೆ ಸರ್ಕಾರದಿಂದಾಗಲಿ ಆಡಳಿತ ಮಂಡಳಿಯಿಂದಾಗಲಿ ಯಾವುದೇ ಸವಲತ್ತುಗಳು ಸಿಗಲಿಲ್ಲ. ರಾಜ್ಯ ಸರ್ಕಾರ ಪ್ರತಿ ತಿಂಗಳು ಶಿಕ್ಷಕರಿಗೆ 11.500, ಆಯಾಗಳಿಗೆ 9.000 ರೂ ಪೆನ್ಷನ್ ನೀಡ್ತಿತ್ತು. ಆದ್ರೆ, ಸದ್ಯ ನಾಲ್ಕೈದು ತಿಂಗಳಿಗೊಮ್ಮೆ ಹಣ ಬರುತ್ತಿದ್ದು, ಇದರಿಂದ ತುಂಬಾ ಸಮಸ್ಯೆ ಉಂಟಾಗಿದೆ.

ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಖಜಾನೆಗೆ ಅಲೆದಾಡಿ-ಅಲೆದಾಡಿ ಸುಸ್ತಾಗಿದೆ. ನಿವೃತ್ತಿ ಹೊಂದಿರುವ ಸಾಕಷ್ಟು ಶಿಕ್ಷಕರು ಅನಾರೋಗ್ಯದಿಂದ ನರಳುತ್ತಿದ್ದು, ಇದರಲ್ಲಿ ವಿಧವೆಯರು, ಆಶ್ರಯ ಇಲ್ಲದವರು ಇದ್ದಾರೆ. ವಯಸ್ಸಾದ ಕಾಲದಲ್ಲಿ ಪೆನ್ಷನ್ ಹಣಕ್ಕಾಗಿ ಶಿಕ್ಷಣ ಇಲಾಖೆಗೂ ಹೋಗಿ ಬರಲು ಸಾಧ್ಯವಾಗ್ತಿಲ್ಲ,  ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ನಿವೃತ್ತ ಶಿಕ್ಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಟ್ಟಾರೆ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬದುಕು ರೂಪಿಸಿದ ಶಿಕ್ಷಕರು ಇಂದು ಪೆನ್ಷನ್ ಹಣಕ್ಕಾಗಿ ಪರದಾಡುತ್ತಿರುವುದು ನಿಜಕ್ಕೂ ದುರಂತ. ಇನ್ನಾದ್ರು ಸಂಬಂಧಪಟ್ಟರೋ ಈ ಹಿರಿ ಜೀವಗಳಿಗೆ ಸರ್ಕಾರದಿಂದ ಸಿಗುವ ಹಣವನ್ನ ಸರಿಯಾಗಿ ಸಮಯಕ್ಕೆ ಒದಗಿಸಿಕೊಡ್ತರಾ ಕಾದು ನೋಡಬೇಕು.
Published by: Latha CG
First published: November 22, 2020, 10:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories