ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್​ ಸಾವು; ಹಕ್ಕಿಜ್ವರದ ಭೀತಿ

ಕಳೆದ ಡಿಸೆಂಬರ್​ ಅಂದರೆ 2017ರ ವರ್ಷಾಂತ್ಯಕ್ಕೆ ಇಲ್ಲಿನ ಪಕ್ಷಿಧಾಮಗಳಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರದಿಂದಾಗಿ ಅನೇಕ ಪಕ್ಷಿಗಳು ಸಾವನ್ನಪ್ಪಿದವು. ಈ ಜ್ವರ ಮಾರಕವಾಗಿದ್ದು, ಪಕ್ಷಿಗಳಿಗೆ ಶೀಘ್ರದಲ್ಲಿ ಹರಡುತ್ತದೆ.

Seema.R | news18-kannada
Updated:October 27, 2019, 12:48 PM IST
ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್​ ಸಾವು; ಹಕ್ಕಿಜ್ವರದ ಭೀತಿ
ಸಾವನ್ನಪ್ಪಿದ ಪೆಲಿಕಾನ್​​
  • Share this:
ಮೈಸೂರು (ಅ.27): ಇಲ್ಲಿನ ಪ್ರಸಿದ್ಧ ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಪೆಲಿಕಾನ್​ ಸಾವನ್ನಪ್ಪಿದ್ದು, ಹಕ್ಕಿ ಜ್ವರದ ಭೀತಿ ಎದುರಾಗಿದೆ.

ಕಳೆದೆರೆಡು ದಿನಗಳಿಂದ ಅಸ್ವಸ್ಥಗೊಂಡಿದ್ದ ಸ್ಪಾಟ್​ ಬಿಲ್​ ಹೆಸರಿನ ಪೆಲಿಕಾನ್​ಗೆ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಿಸದೇ ಸಾವನ್ನಪ್ಪಿದೆ. ಇದರಿಂದಾಗಿ ಕಳೆದ ವರ್ಷ ಪಕ್ಷಿಧಾಮಗಳನ್ನು ಕಾಡಿದ ಹಕ್ಕಿ ಜ್ವರ ಮರಳಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಲಾಗಿದೆ.

ಕುಕ್ಕರಹಳ್ಳಿಕೆರೆ, ಚಾಮರಾಜೇಂದ್ರ ಮೃಗಾಲಯ, ಕಾರಂಬಜಿಕೆರೆ, ರಂಗನತಿಟ್ಟು, ಕೊಕ್ಕರೆ ಬೆಳ್ಳೂರಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ವಲಸೆ ಹಕ್ಕಿಗಳ ಮೇಲೆ ಕೂಡ ಗಮನ ಹರಿಸಲಾಗಿದೆ.

ಕಳೆದ ಡಿಸೆಂಬರ್​ ಅಂದರೆ 2017ರ ವರ್ಷಾಂತ್ಯಕ್ಕೆ ಇಲ್ಲಿನ ಪಕ್ಷಿಧಾಮಗಳಲ್ಲಿ ಕಾಣಿಸಿಕೊಂಡಿದ್ದ ಹಕ್ಕಿ ಜ್ವರದಿಂದಾಗಿ ಅನೇಕ ಪಕ್ಷಿಗಳು ಸಾವನ್ನಪ್ಪಿದವು. ಈ ಜ್ವರ ಮಾರಕವಾಗಿದ್ದು, ಪಕ್ಷಿಗಳಿಗೆ ಶೀಘ್ರದಲ್ಲಿ ಹರಡುತ್ತದೆ.

ಇದನ್ನು ಓದಿ: odeya: ದೀಪಾವಳಿಗೆ ಸಿಹಿ ಸುದ್ದಿಕೊಟ್ಟ ನಟ ದರ್ಶನ್​; ನ.1ಕ್ಕೆ ಒಡೆಯ ಚಿತ್ರದ ಟೀಸರ್​ ಬಿಡುಗಡೆ

ಈ ಹಿನ್ನೆಲೆಯಲ್ಲಿ ಪೆಲಿಕಾನ್​ ಸಾವು ಆತಂಕ ಮೂಡಿಸಿದ್ದು, ಹಕ್ಕಿಜ್ವರದಿಂದ ಪಕ್ಷಿ ಸಾವನ್ನಪ್ಪಿದೆಯಾ ಇಲ್ಲವಾ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

First published: October 27, 2019, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading