ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿದ ಪೇಜಾವರ ಶ್ರೀ

ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಭೇಟಿ ನೀಡಿದ ಪೇಜಾವರ  ಶ್ರೀಗಳಿಗೆ ದಲಿತ ಮನೆಯ ಕುಟುಂಬಸ್ಥರು ಗೌರವಿಸಿ, ಆರ್ಶಿವಾದ ಪಡೆದರು. ಚೌಡಪ್ಪ, ರಾಜಮ್ಮ ಎಂಬ ದಂಪತಿಯ ಮನೆಗೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದರು.

HR Ramesh | news18-kannada
Updated:September 11, 2019, 6:09 PM IST
ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿದ ಪೇಜಾವರ ಶ್ರೀ
ಪೇಜಾವರ ಶ್ರೀ
  • Share this:
ಮೈಸೂರು: ದಲಿತರ ಮೇಲಿನ ಶೋಷಣೆ ಕುಗ್ಗಿಸಲು ಉದ್ದೇಶದಿಂದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಮೈಸೂರಿನ ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿದರು.

ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಭೇಟಿ ನೀಡಿದ ಪೇಜಾವರ  ಶ್ರೀಗಳಿಗೆ ದಲಿತ ಮನೆಯ ಕುಟುಂಬಸ್ಥರು ಗೌರವಿಸಿ, ಆರ್ಶಿವಾದ ಪಡೆದರು. ಚೌಡಪ್ಪ, ರಾಜಮ್ಮ ಎಂಬ ದಂಪತಿಯ ಮನೆಗೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದರು. ಈ ವೇಳೆ ಶ್ರೀಗಳಿಗೆ ತುಳಸಿ ಮಾಲೆ ಅರ್ಪಿಸಿ, ಪಾದಪೂಜೆ ಸಲ್ಲಿಸಲಾಯಿತು. ಅನಾರೋಗ್ಯದ ಹಿನ್ನೆಲೆಯಲ್ಲಿ ವೀಲ್​ಚೇರ್‌ನಲ್ಲಿ ಕುಳಿತು ಪೇಜಾವರ ಶ್ರೀಗಳು ಪಾದಯಾತ್ರೆಯಲ್ಲಿ ಭಾಗಿಯಾದರು.

ಇದನ್ನು ಓದಿ: ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗರ ಬೃಹತ್​ ಪ್ರತಿಭಟನೆಗೆ ಬೆಚ್ಚಿದ ಬಿಜೆಪಿ: ಹೈ ಕಮಾಂಡ್​ಗೆ ಮಾಹಿತಿ ರವಾನೆ

ಡಿಕೆಶಿ ಪರವಾಗಿ ಇಂದು ಮಠಾಧೀಶರು ಪ್ರತಿಭಟನೆಯಲ್ಲಿ ಭಾಗಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ, ತಟಸ್ಥವಾಗಿರುತ್ತೇನೆ. ಅವರಿಗೆ ಡಿಕೆಶಿ ನಿರಪಾರಾಧಿ ಅಂತ ತೋರಿದೆ. ಆ ಕಾರಣದಿಂದ ಅವರು ಬೆಂಬಲಿಸುತ್ತಿರಬಹುದು. ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

First published: September 11, 2019, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading