• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pejawara Seer: ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು? ಹೆಚ್​ಡಿಕೆ ಹೇಳಿಕೆಗೆ ಪೇಜಾವರ ಶ್ರೀಗಳು ಬೇಸರ

Pejawara Seer: ಬ್ರಾಹ್ಮಣರು ಯಾಕೆ ಸಿಎಂ ಆಗಬಾರದು? ಹೆಚ್​ಡಿಕೆ ಹೇಳಿಕೆಗೆ ಪೇಜಾವರ ಶ್ರೀಗಳು ಬೇಸರ

ಪೇಜಾವರ ಶ್ರೀಗಳು

ಪೇಜಾವರ ಶ್ರೀಗಳು

ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನ ದೂಷಿಸುವುದಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಸಾಮೂಹಿಕರಣ ಮಾಡ್ತಿಲ್ಲ? ಬ್ರಾಹ್ಮಣ ಸಮಾಜವನ್ನ ದೂರು ಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರುತ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು ಎಂದರು.

  • Share this:

ಮಂಡ್ಯ: ಬ್ರಾಹ್ಮಣರ (Brahmins) ಕುರಿತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಮಂಡ್ಯದ ಮದ್ದೂರಿನಲ್ಲಿ (Maddur, Mandya) ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwa prasanna Theertha Swamiji) ಬೇಸರ ವ್ಯಕ್ತಪಡಿಸಿದರು. ಈ ರೀತಿ ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಕೇಳಿ ಬರುತ್ತಿವೆ. ಪ್ರತಿ ಚುನಾವಣೆ (Election) ಬಂದಾಗ ಇದು ಹೆಚ್ಚು ಕಾಣುತ್ತದೆ. ಬ್ರಾಹ್ಮಣರು ಯಾರು ಧ್ವನಿ ಎತ್ತಿ ಮಾತನಾಡುವವರು ಇಲ್ಲ, ಸಂಖ್ಯಾ ಬಲ ಇಲ್ಲ, ಅಲ್ಪಸಂಖ್ಯಾತರು. ಆದ್ದರಿಂದ ಏನು ಮಾತನಾಡಿದ್ರು ನಡೆಯತ್ತೆ ಎಂದು ಮಾತನಾಡ್ತಾರೆ ಎಂದು ಪೇಜಾವರ ಶ್ರೀಗಳು ಅಸಮಾಧಾನ ಹೊರ ಹಾಕಿದರು.


ರಾಜ್ಯದಲ್ಲಿ ಬ್ರಾಹ್ಮಣ MLA ಎಷ್ಟು ಜನ ಇದ್ದಾರೆ? ಎಷ್ಟು ಮಂದಿಗೆ ಟಿಕೆಟ್ ಕೊಟ್ಟಿದ್ದಾರೆ? ಮಾತನಾಡುವವರು ಏನು ಬೇಕಾದರೂ ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು ಎಂದು ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದರು.


ಬ್ರಾಹ್ಮಣರು ಸಿಎಂ ಯಾಕೆ ಆಗಬಾರದು?


ಒಂದು ವೇಳೆ ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಯಾಕೆ ಬ್ರಾಹ್ಮಣರು ಸಿಎಂ ಆಗಬಾರದು? ಅವರು ಭಾರತದ ಪ್ರಜೆಗಳಲ್ಲವೇ ಎಂದು ಪ್ರಶ್ನೆ ಮಾಡಿದರು.


ನೆಪ ಮಾಡಿ ದೂರುತ್ತಾರೆ


ಬ್ರಾಹ್ಮಣರಿಂದಲೆ ಗಾಂಧಿ ಹತ್ಯೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನ ದೂಷಿಸುವುದಾದರೆ ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಸಾಮೂಹಿಕರಣ ಮಾಡ್ತಿಲ್ಲ? ಬ್ರಾಹ್ಮಣ ಸಮಾಜವನ್ನ ದೂರು ಬೇಕು ಎಂದು ಯಾವುದಾದರೂ ಒಂದು ನೆಪ ಮಾಡಿ ದೂರುತ್ತಾರೆ. ಪ್ರಜಾಪ್ರಭುತ್ವ ಸಮಾಜದಲ್ಲಿ ಯಾರಿಗೂ ಅನ್ಯಾಯವಾಗಬಾರದು ಎಂದರು.




ಧರ್ಮವನ್ನ ದೂಷಿಸುವುದು ಸರಿಯಲ್ಲ


ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆಯೋದಾದ್ರೆ ಅನ್ಯಾಯವಾದಾಗ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮ ಪುಟಿದೇಳಬೇಕು. ಪ್ರಜಾಪ್ರಭುತ್ವ ಸಮಾಜದಲ್ಲಿ ಈ ರೀತಿ ಒಂದು ಧರ್ಮವನ್ನ ದೂಷಿಸುವುದು ಸರಿಯಲ್ಲ. ಯಾವ ಧರ್ಮದವರಿಗೂ ಅನ್ಯಾಯ ಆಗಬಾರದು ಎಂದು ಆಗ್ರಹಿಸಿದರು.


ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದೇನು?


ಪ್ರಹ್ಲಾದ್ ಜೋಶಿಯವರೇ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ. ಪ್ರಹ್ಲಾದ್ ಜೋಶಿಯವರನ್ನು ಸಿಎಂ ಮಾಡಲು ಆರ್​​ಎಸ್​ಎಸ್ (RSS)​ ಹುನ್ನಾರ ಮಾಡಿದೆ. ಜೊತೆಗೆ ರಾಜ್ಯದಲ್ಲಿ 8 ಜನ ಡಿಸಿಎಂ ಮಾಡಿ, ಒಬ್ಬ ಸಿಎಂ ಮಾಡುವ ಯೋಜನೆ ಅವರಿಗಿದೆ. ಈಗಾಗಲೇ ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ ಎಂದು ತಿಳಿಸಿದ್ದಾರೆ.




ಜೋಶಿ  ದಕ್ಷಿಣ ಭಾರತದ ಬ್ರಾಹ್ಮಣ ಸಂಸ್ಕೃತಿಗೆ ಸೇರಿದವರಲ್ಲ


ಇವತ್ತು ಪ್ರಹ್ಲಾದ್​​ ಜೋಶಿ ಅವರನ್ನು ಮುಂದಿನ ಚುನಾವಣೆ ನಂತರ ಈ ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂಬುವುದು ಆರ್​​ಎಸ್​​ಎಸ್​​ನ ಹುನ್ನಾರ ಪ್ರಾರಂಭವಾಗಿದೆ. ಇದಕ್ಕೆ ಕಾರಣ ಪ್ರಹ್ಲಾದ್​ ಜೋಶಿ ಅವರು ನಮ್ಮ ದಕ್ಷಿಣ ಭಾರತದ ಬ್ರಾಹ್ಮಣ ಸಂಸ್ಕೃತಿಗೆ ಸೇರಿದವರಲ್ಲ. ಬ್ರಾಹ್ಮಣ ವೃತ್ತಿಯಲ್ಲೂ, ಸಂಸ್ಕಾರದಲ್ಲೂ ಎರಡು ಮೂರು ಭಿನ್ನವಾದ ವಿಧಗಳಿವೆ. ಇವರು ಶೃಂಗೇರಿ ಮಠದ ಒಡೆದ ಪೇಶವರ ಗ್ರೂಪ್​ನವರು. ಪೇಶ್ವೆಗಳು ಶೃಂಗೇರಿಯ ಮಠವನ್ನು ಒಡೆದಂತವರು, ಅಲ್ಲಿಯ ದೇವರನ್ನು ಒಡೆದ ವರ್ಗಕ್ಕೆ ಸೇರಿದವರು ಎಂದು ಆರೋಪಿಸಿದರು.


ಇದನ್ನೂ ಓದಿ: Hassan JDS Ticket Fight: ಕುಮಾರಸ್ವಾಮಿ ಮಾತೇ ಅಂತಿಮ, ನಮ್ಮಿಬ್ಬರನ್ನು ಬೇರೆ ಮಾಡಲು ಆಗಲ್ಲ- ಗೊಂದಲಕ್ಕೆ ತೆರೆ ಎಳೆದ ಹೆಚ್​ಡಿ ರೇವಣ್ಣ


ಇವರು ಮಹಾತ್ಮ ಗಾಂಧಿ ಅವರನ್ನು ಕೊಂದ ವರ್ಗಕ್ಕೆ ಸೇರಿವರು ಇವರು. ಅವರು ನಮ್ಮ ಹಳೆ ಕರ್ನಾಟದ ಬ್ರಾಹ್ಮಣರಲ್ಲ. ಅವರನ್ನು ಕರ್ನಾಟಕ ಮುಂದಿನ ಮುಖ್ಯಮಂತ್ರಿ ಮಾಡಲು ಈಗಾಗಲೇ ಆರ್​ಎಸ್​ಎಸ್​ನಲ್ಲಿ ತೀರ್ಮಾನಗಳಾಗಿದೆ. ಆದ್ದರಿಂದ ನಿನ್ನೆಯಿಂದ ನನ್ನ ವಿರುದ್ಧ ಗದಾಪ್ರಹಾರ ಪ್ರಾರಂಭ ಮಾಡಿದ್ದಾರೆ.

Published by:Mahmadrafik K
First published: