Ayodhya Verdict ; ಅಯೋಧ್ಯೆ ತೀರ್ಪು ಸ್ವಾಗತಿಸಿದ ವಿಶ್ವೇಶತೀರ್ಥ ಸ್ವಾಮೀಜಿ‌, ಸಿದ್ದಲಿಂಗ ಸ್ವಾಮೀಜಿ‌

ಸಂವಿಧಾನದ ಪೀಠ ಸುದೀರ್ಘ ವಿಚಾರಣೆ ಮಾಡಿ, ದಾಖಲೆ ನೋಡಿ ಇತಿಹಾಸ ಸಂಸ್ಕೃತಿ ಗಮನಿಸಿ ತೀರ್ಪು ನೀಡಿದೆ. ಬಹಳ ದಿನಗಳ ಸಮಸ್ಯೆಯಾಗಿದ್ದು ಅಂತಿಮವಾಗಿ ವಿವಾದಕ್ಕೆ ತೆರೆ ಎಳೆದಿರುವುದು ಶ್ಲಾಘನೀಯ

G Hareeshkumar | news18-kannada
Updated:November 9, 2019, 1:22 PM IST
Ayodhya Verdict ; ಅಯೋಧ್ಯೆ ತೀರ್ಪು ಸ್ವಾಗತಿಸಿದ ವಿಶ್ವೇಶತೀರ್ಥ ಸ್ವಾಮೀಜಿ‌, ಸಿದ್ದಲಿಂಗ ಸ್ವಾಮೀಜಿ‌
ವಿಶ್ವೇಶತೀರ್ಥ ಸ್ವಾಮೀಜಿ‌ ಹಾಗೂ ಸಿದ್ದಲಿಂಗೇಶ್ವರ ಶ್ರೀ
G Hareeshkumar | news18-kannada
Updated: November 9, 2019, 1:22 PM IST
ಉಡುಪಿ(ನ.09): ಎಲ್ಲರೂ ಸಮಚಿತ್ತದಿಂದ ಈ ತೀರ್ಪನ್ನು ಸ್ವೀಕರಿಸಿ ವೈಯಕ್ತಿಕವಾಗಿ ಈ ತೀರ್ಪು ನನಗೆ ಸಮ್ಮತವಾಗಿದೆ. ಮುಸ್ಲಿಮರಿಗೂ ಐದು ಏಕರೆ ಕೊಡಬೇಕೆಂದು ಸುಪ್ರೀಂ ಕೋರ್ಟ್​​ ಹೇಳಿದೆ ಎಂದು ಪೇಜಾವರ ಮಠದ ‌ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ‌ ಹೇಳಿದ್ದಾರೆ.

ಸರಕಾರವೇ ರಾಮಮಂದಿರ ನಿರ್ಮಾಣ ಮಾಡಬೇಕು. ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ. ಅದೇ ರೀತಿ ಮುಸಲ್ಮಾನರಿಗೆ ಮಸೀದಿಗೆ ಜಾಗ ಮುಖ್ಯ. ಈ ತೀರ್ಪು ಹಿಂದೂ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ. ಹಿಂದೂ ಮುಸಲ್ಮಾನರು ಒಟ್ಟು ಸೇರಿ ಸೂಕ್ತ ಸ್ಥಳವನ್ನು ಮಸೀದಿಗೆ ಕೊಡಬೇಕು. ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು ಮಂದಿರ ನಿರ್ಮಾಣ ವಿಚಾರದಲ್ಲಿ ಮುಸ್ಲಿಮರೂ ಸಹಕರಿಸಬೇಕು ಎಂದರು.

ವಿಜಯೋತ್ಸವ, ಮೆರವಣಿಗೆ ಬೇಡ ಎಂದು ನಿನ್ನೆಯೇ ಹೇಳಿದ್ದೆ.ಈಗಲೂ ಪುನರುಚ್ಚಾರ ಮಾಡುವೆ ಮುಸಲ್ಮಾನರು ಸಮಚಿತ್ತದಿಂದ ಸ್ವೀಕರಿಸಬೇಕು. ದೇಶದ ಎಲ್ಲರೂ ಕೋಮು ಸೌಹಾರ್ದದಿಂದ ಇರಬೇಕು ಎಂದು ಮನವಿ ಮಾಡುವೆ ನನ್ನ ಇಳಿ ವಯಸ್ಸಿನಲ್ಲಿ ಈ ತೀರ್ಪು ನೋಡುತ್ತೇನೆ ಎಂದು ಭಾವಿಸಿರಲಿಲ್ಲ ವೈಯಕ್ತಿಕವಾಗಿಯೂ ಸಂತೋಷವಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.

ಇತಿಹಾಸ, ಸಂಸ್ಕೃತಿ ಗಮನಿಸಿ ತೀರ್ಪು ನೀಡಿದೆ: ಸಿದ್ದಲಿಂಗ ಸ್ವಾಮೀಜಿ

ಇತ್ತ ತುಮಕೂರಿನಲ್ಲಿ  ಪ್ರತಿಕ್ರಿಯೆ ನೀಡಿದ  ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಸಂವಿಧಾನದ ಪೀಠ ಸುದೀರ್ಘ ವಿಚಾರಣೆ ಮಾಡಿ, ದಾಖಲೆ ನೋಡಿ ಇತಿಹಾಸ ಸಂಸ್ಕೃತಿ ಗಮನಿಸಿ ತೀರ್ಪು ನೀಡಿದೆ. ಬಹಳ ದಿನಗಳ ಸಮಸ್ಯೆಯಾಗಿದ್ದು ಅಂತಿಮವಾಗಿ ವಿವಾದಕ್ಕೆ ತೆರೆ ಎಳೆದಿರುವುದು ಶ್ಲಾಘನೀಯ. ಇದು ಸೋಲು ಗೆಲುವಿನ ಪ್ರಶ್ನೆ ಅಲ್ಲ, ವಿವಾದ ತೀರ್ಮಾನಾಗಿರುವುದು ಸಂತೋಷದ ಸಂಗತಿ. ನಾವು ನ್ಯಾಯಲಯನ್ನು ಗೌರವಿಸುತ್ತೇವೆ.‌ ಅದು ಪರ ವಿರೋಧ ವಿಚಾರವಲ್ಲ. ನ್ಯಾಯಾಲಯ ಎಲ್ಲವನ್ನು ಗಮನಿಸಿ ಸಂವಿಧಾನದ ಪೂರ್ಣ ಪೀಠ ಇದನ್ನು ಒಪ್ಪಿ ತೀರ್ಮಾನ ಕೊಟ್ಟಿದೆ.

ಇದನ್ನೂ ಓದಿ : Ayodhya Verdict; ಅಯೋಧ್ಯೆ ತೀರ್ಪು ಹಿನ್ನೆಲೆ, ಇಂದಿನ ಜೆಡಿಎಸ್ ಸ್ವಾಭಿಮಾನಿ ಮತದಾರರ ಸಮಾವೇಶ ರದ್ದು

ಇದಕ್ಕೆ ಅಪಸ್ವರ ಬರದಂತೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ, ಗೌರವಿಸಿ ಶಾಂತಿ ಸಮಧಾನದಿಂದ ಇರಬೇಕು‌.‌ ಎಲ್ಲಾ ಧರ್ಮಕ್ಕೂ ಜಾತಿಗೂ ಅವಕಾಶ ನೀಡಿರುವುದು ಭಾರತ. ನಮ್ಮ ದೇಶಕ್ಕೆ, ವಿಶ್ವಕ್ಕೆ ಶಾಂತಿ ಬಯಸುತ್ತದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲಾರು ಎತ್ತಿ ಹಿಡಿಯೋಣ, ಸ್ವಾಗತಿಸೋಣ. ಸೌಹಾರ್ದತೆಯಿಂದ ಜೀವನ ನಡೆಸೋಣ.  ಇವರು ಪೂಜೆ ಮಾಡ್ತಾರೆ. ಅವರು ಪ್ರಾರ್ಥನೆ ಮಾಡುತ್ತಾರೆ ಅಷ್ಟೆ ಎಂದು  ತಿಳಿಸಿದರು.
Loading...

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...