ಯಾರು ಏನನ್ನು ತಿನ್ನುತ್ತಾರೋ ಅದರ ಖರ್ಚನ್ನು ಸರ್ಕಾರ ನೀಡಲಿ.. ಮೊಟ್ಟೆ ವಿತರಣೆ ಬಗ್ಗೆ ಪೇಜಾವರ ಶ್ರೀ ಸಲಹೆ

ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ. ಸರ್ಕಾರ ಮಕ್ಕಳ ಮಧ್ಯೆ ಮತಬೇಧ ಉಂಟು ಮಾಡಬಾರದು. ಯಾರು ಏನು ಸೇವಿಸುತ್ತಾರೋ ಅದರ ಖರ್ಚುನ್ನು ಸರ್ಕಾರ ನೀಡಲಿ.

ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು

ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು

  • Share this:
ಉಡುಪಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ (Egg) ನೀಡಲು ಮುಂದಾಗಿರುವ ಬಿಜೆಪಿ ಸರ್ಕಾರ (BJP Govt ) ರಾಜ್ಯದ ಮಠಾಧೀಶರುಗಳ ಕೋಪಕ್ಕೆ ತುತ್ತಾಗಿದೆ. ಶಾಲೆಯಲ್ಲಿ ಮೊಟ್ಟೆ ನೀಡುವುದಕ್ಕೆ ಇಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು (sri vishwaprasanna tirtha swamiji) ವಿರೋಧ ವ್ಯಕ್ತಪಡಿಸಿದರು. ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಶಾಲೆ ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ. ತಮ್ಮ ಪರಂಪರೆಯಿಂದ ಬಂದ ಆಹಾರ ಕ್ರಮವನ್ನು ಬದಲಿಸಬಾರದು. ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ. ಸರ್ಕಾರ ಮಕ್ಕಳ ಮಧ್ಯೆ ಮತಬೇಧ ಉಂಟು ಮಾಡಬಾರದು. ಯಾರು ಏನು ಸೇವಿಸುತ್ತಾರೋ ಅದರ ಖರ್ಚುನ್ನು ಸರ್ಕಾರ ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕೋಸರ, ಹೀಗಾಗಿ ಅಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಟೀಕಿಸಿದ ಮೂಲಕ ಸಲಹೆಯನ್ನೂ ಪೇಜಾವರ ಶ್ರೀಗಳು ನೀಡಿದರು.

ಬಲವಂತದ ಮತಾಂತರದ ಬಗ್ಗೆ ಕಳವಳ

ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿಯೂ ಮಾತನಾಡಿದ ಶ್ರೀಗಳು, ಮಂಗಳೂರಿನಲ್ಲಿ ಇಡೀ ಕುಟುಂಬ  ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮತಾಂತರದ ಹಾವಳಿಯೂ ಇಡೀ ಮನೆಯನ್ನೇ ಬಲಿತೆಗೆದುಕೊಂಡಿದೆ.  ಈ ಹಾವಳಿಯನ್ನು ಕಾನೂನಿನ ಮೂಲಕ ಸರ್ಕಾರ ನಿಗ್ರಹಿಸಬೇಕು.  ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಒತ್ತಡ ಆಮಿಷ ಬಲವಂತದಿಂದ ಮತಾಂತರ ಮಾಡಿದರೆ ಅದನ್ನು ಸಹಿಸಲಾಗುವುದಿಲ್ಲ. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಶೇ.80ರಷ್ಟು ಮಕ್ಕಳಿಗೆ ಬಿಸಿಯೂಟದಲ್ಲಿ ಬೇಕು ಮೊಟ್ಟೆ: ಸಮೀಕ್ಷೆಯಲ್ಲಿ ಬಹಿರಂಗ

ಉತ್ತರ ಕರ್ನಾಟಕದ ಸ್ವಾಮೀಜಿಗಳಿಂದಲೂ ವಿರೋಧ

ಇನ್ನು ನಿನ್ನೆಯೂ ಉತ್ತರ ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳು ಒಟ್ಟಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಶಾಲೆಗಳಲ್ಲಿ ಮೊಟ್ಟೆ ವಿತರಣೆ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು. ಮೊಟ್ಟೆ ಮುಂದಿನ ದಿನ ಬಗೆದೀತು ಸರ್ಕಾರದ ಹೊಟ್ಟೆ. ಶಾಲೆಗಳಲ್ಲಿ ಮೊಟ್ಟೆ ಯೋಜನೆ ವಾಪಸ್ ಪಡೆಯದೇ ಇದ್ದಲ್ಲಿ ಲಿಂಗಾಯತರಿಂದಲೇ   ಸರ್ಕಾರ ಪತನವಾಗುತ್ತೆ ಎಂದು ವಿವಿಧ ಮಠಾಧೀಶರು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರು ದಯಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ಚನ್ನಬಸವಾನಂದ ಸ್ವಾಮೀಜಿ, ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮೊದಲಾ ಸ್ವಾಮೀಜಿಗಳು, ಬ್ರಾಹ್ಮಣ, ಜೈನ ಸಮುದಾಯದ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಯಾಕೆ?

ಸರ್ಕಾರಿ, ಅನುದಾನಿತ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಣೆಗೆ ನಮ್ಮ ವಿರೋಧವಿದೆ. ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದಲ್ಲಿ ಬಹುಸಂಖ್ಯೆಯಲ್ಲಿ ಲಿಂಗಾಯತ ಧರ್ಮೀಯರಿದ್ದಾರೆ. ಅವರೆಲ್ಲ ಶುದ್ಧ ಸಸ್ಯಾಹಾರಿಗಳು. ಏಕರೂಪತೆ ಕಾಪಡಿಕೊಳ್ಳಬೇಕಿದ್ದ ಸರ್ಕಾರ ಈ ರೀತಿ ಮಾಡಬಾರದು. ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕೊಡಿ, ಮೊಟ್ಟೆಯನ್ನಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಯಾಕೆ, ಎಲ್ಲರಿಗೂ ಒಂದೇ ತರವಾಗಿ ಸರ್ಕಾರ ನೋಡಬೇಕು. ಮೊಟ್ಟೆಯನ್ನ ಶಾಲೆಯಲ್ಲಿ ತರಲು ಹುನ್ನಾರ ಏನು..? ಕಾಂಗ್ರೆಸ್, ಜೆಡಿಎಸ್ ವಾಪಸ್ ಪಡೆದಿರೋ ಈ ಯೋಜನೆಯನ್ನ ಬಿಜೆಪಿ ಯಾಕೆ ತಂದಿದೆ. ಲಿಂಗಾಯತ, ಬ್ರಾಹ್ಮಣ, ಜೈನ ಧರ್ಮದ ಜನರಿಂದ ಮತ ಪಡೆದ ಬಿಜೆಪಿ ಈ ರೀತಿ ಯಾಕೆ ಮಾಡಿದೆ ಎಂದು ಕಿಡಿಕಾರಿದರು.

ಕೋಳಿಯನ್ನೂ ಸಸ್ಯಾಹಾರಿ ಅಂತ ತಿನ್ನಸ್ತಾರೆ 
ತೆಲಂಗಾಣ ರಾಜ್ಯದಲ್ಲಿ ವಾರಕ್ಕೆರಡು ದಿನ ಚಿಕನ್ ಕೊಡ್ತಾರೆ. ಇಲ್ಲಿಯೂ ಇವತ್ತು ಮೊಟ್ಟೆ ಕೊಡ್ತಾರೆ, ನಾಳೆ ಚಿಕನ್ ಕೊಡ್ತಾರೆ. ಚಿಕನ್ ನ್ನು ಸಹ ಸಸ್ಯಾಹಾರ ಅಂತಾರೆ. ಸರ್ಕಾರವೇ ಮಾಂಸಾಹಾರಿಗಳು, ಸಸ್ಯಾಹಾರಿಗಳೆಂದು ಇಬ್ಭಾಗ ಮಾಡ್ತಿದೆ ಎಂದ ಕಿಡಿಕಾರಿದರು.
Published by:Kavya V
First published: