HOME » NEWS » State » PEANUT RATE DECLINED IN YADAGIRI FARMERS INSIST GOVERNMENT TO BUY NMPG SESR

ಶೇಂಗಾ ದರ ಕುಸಿತ: ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ; ಖರೀದಿ ಕೇಂದ್ರ ಆರಂಭಕ್ಕೆ ರೈತರ ಒತ್ತಾಯ

ಉತ್ತಮ ಬೆಳೆ ಬೆಳೆದ ರೈತರು ಉತ್ತಮ ದರ ನಿರೀಕ್ಷೆಯಲ್ಲಿದ್ದರು. ಆದರೆ, ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಶೇಂಗಾಗೆ 5 ಸಾವಿರದಿಂದ 6 ಸಾವಿರ ರೂ ವರಗೆ ದರ ನಿಗದಿಸಿ ಖರೀದಿ ಮಾಡುತ್ತಿದ್ದಾರೆ

news18-kannada
Updated:February 24, 2021, 10:09 PM IST
ಶೇಂಗಾ ದರ ಕುಸಿತ: ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ; ಖರೀದಿ ಕೇಂದ್ರ ಆರಂಭಕ್ಕೆ ರೈತರ ಒತ್ತಾಯ
ಉತ್ತಮ ಬೆಳೆ ಬೆಳೆದ ರೈತರು ಉತ್ತಮ ದರ ನಿರೀಕ್ಷೆಯಲ್ಲಿದ್ದರು. ಆದರೆ, ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಶೇಂಗಾಗೆ 5 ಸಾವಿರದಿಂದ 6 ಸಾವಿರ ರೂ ವರಗೆ ದರ ನಿಗದಿಸಿ ಖರೀದಿ ಮಾಡುತ್ತಿದ್ದಾರೆ
  • Share this:
ಯಾದಗಿರಿ (ಫೆ. 24): ಶೇಂಗಾ ಬೆಳೆದ  ಜಿಲ್ಲೆಯ ರೈತರು ಉತ್ತಮ ದರ ಸಿಗದೆ ಪರದಾಡುವಂತಾಗಿದೆ.ನಿ ತ್ಯವೂ ಸಾವಿರಾರು ಕ್ವಿಂಟಾಲ್ ಶೇಂಗಾವನ್ನು ಹತ್ತಿಕುಣಿ, ಗುರುಮಠಕಲ್, ಬಂದಳ್ಳಿ,ಅರಕೇರಾ ಕೆ ಹಾಗೂ ಇನ್ನಿತರ ಭಾಗದಿಂದ ಹೊತ್ತು ತಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕಡಿಮೆ ದರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಉತ್ತಮ ಬೆಲೆ ಸಿಗದೆ, ಸಿಕ್ಕ ಹಣಕ್ಕೆ ರೈತರು ಶೇಂಗಾ ಮಾರಾಟ ಮಾಡುತ್ತಿದ್ದಾರೆ. ‌ಯಾದಗಿರಿ, ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್, ಹುಣಸಗಿ, ಹತ್ತಿಕುಣಿ, ಸೈದಾಪುರ ಹಾಗೂ ಮೊದಲಾದ ಕಡೆ ರೈತರು ಶೇಂಗಾ ಬೆಳೆ ಬೆಳೆದಿದ್ದಾರೆ. ಉತ್ತಮ ಬೆಳೆ ಬೆಳೆದ ರೈತರು ಉತ್ತಮ ದರ ನಿರೀಕ್ಷೆಯಲ್ಲಿದ್ದರು. ಆದರೆ, ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಶೇಂಗಾಗೆ 5 ಸಾವಿರದಿಂದ 6 ಸಾವಿರ ರೂ ವರಗೆ ದರ ನಿಗದಿಸಿ ಖರೀದಿ ಮಾಡುತ್ತಿದ್ದಾರೆ. ಶೇಂಗಾ ಬೆಳೆ ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ರೈತರು ಹಣ ಖರ್ಚು ಮಾಡಿದ್ದಾರೆ. ಆದರೆ, ಆದಾಯ ಮಾತ್ರ ಇಳಿಮುಖವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. 

ವಿಜಯಪುರ, ಚಿತ್ರದುರ್ಗ ಹಾಗೂ ಮೊದಲಾದ ಕಡೆಯಿಂದ ದಲ್ಲಾಳಿಗಳು ಆಗಮಿಸಿ ಕಡಿಮೆ ದರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಸಾಕಷ್ಟು ಹಣ ವ್ಯಯಿಸಿ ಶೇಂಗಾ ಬೆಳೆಯಲಾಗಿದೆ. ಆದರೆ ಈಗ ಮಾರುಕಟ್ಟೆಯಲ್ಲಿ ಮಾತ್ರ ಶೇಂಗಾ ಕಡಿಮೆ ದರಕ್ಕೆ ಪಡೆಯುತ್ತಿದ್ದಾರೆ. ಇದರಿಂದ ಬಹಳ ನಷ್ಟವಾಗುತ್ತಿದೆ. ಈ ಹಿನ್ನಲೆ ಸರಕಾರವೇ ಖರೀದಿ ಕೇಂದ್ರ ಆರಂಭ ಮಾಡಬೇಕು. ಜೊತೆಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಿ, ಶೇಂಗಾ ಖರೀದಿ ಮಾಡಿ ನಮ್ಮನ್ನು ಕಾಪಾಡ ಬೇಕೆಂದರು.

ಇದನ್ನು ಓದಿ: ನಟ ಜಗ್ಗೇಶ್​ರನ್ನು ಬೆಂಗಳೂರು ವಕ್ತಾರರಾಗಿ ನೇಮಿಸಿದ ಬಿಜೆಪಿ

ಕಳೆದ ವರ್ಷ ಕೂಡ ಶೇಂಗಾ ದರ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿತ್ತು.ಈಗ ಶೇಂಗಾ ಆವಕ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂದರೂ ದಲ್ಲಾಳಿಗಳ ಮಾತ್ರ ಕಡಿಮೆ ದರಕ್ಕೆ ಖರೀದಿ ಮಾಡುತ್ತಿದ್ದು ರೈತರು ನಷ್ಟ ಅನುಭವಿಸುವಂತಾಗಿದೆ. ಬೆಳೆಯನ್ನು ಮಾರುಕಟ್ಟೆಗೆ ತಂದ ವೆಚ್ಚ ಕೂಡ ನಮಗೆ ಲಾಭಾವಾಗುತ್ತಿಲ್ಲ. ಈ ಹಿನ್ನಲೆ ಈ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ದಲ್ಲಾಳಿ ವಿಜಯಕುಮಾರ ಮಾತನಾಡಿ,ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆದಿದ್ದು, ಮಾರುಕಟ್ಟೆಗೆ ಉತ್ತಮ ಶೇಂಗಾ ಕಾಳು ಮಾರಾಟ ಮಾಡಲಾಗುತ್ತಿದೆ.ಜಿಲ್ಲೆಯ ಶೇಂಗಾವನ್ನು ಚಿತ್ರದುರ್ಗಕ್ಕೆ ಖರೀದಿ ಮಾಡಿಕೊಂಡು ತೆಗೆದುಕೊಂಡು ಹೋಗಲಾಗುತ್ತದೆ ಎಂದರು.
Published by: Seema R
First published: February 24, 2021, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories